ಧಾರವಾಡ

ಬಿಜೆಪಿಯಲ್ಲೂ ಭುಗಿಲೆದ್ದ ಭಿನ್ನಮತ

Published On :

ಧಾರವಾಡ: ಭಿನ್ನಮತ ಹಾಗೂ ಅಸಮಾಧಾನದ ಹೊಗೆ ಕಾಂಗ್ರೆಸ್‌ಗಷ್ಟೇ ಸೀಮಿತವಲ್ಲ, ಬಿಜೆಪಿಯಲ್ಲಿಯೂ ಭುಗಿಲೆದ್ದಿದೆ ಎನ್ನುವುದಕ್ಕೆ ನಗರದಲ್ಲಿ ಶನಿವಾರ ನಡೆದ ವಿವಿಧ ಸಂದರ್ಭಗಳು ಸಾಕ್ಷಿಯಾದವು. ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಪುತ್ರ ಅರವಿಂದ ಬೆಲ್ಲದ ಅವರ ಕೃಪಕಟಾಕ್ಷದಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಪಾಲಿಕೆ ಚುನಾವಣೆಯ ಟಿಕೆಟ್ ಕೈ ತಪ್ಪಿದ್ದು, ಶನಿವಾರ ಈ ಕುರಿತಾಗಿ ಅರವಿಂದ ಬೆಲ್ಲದ ಹಾಗೂ ನಗರ ಘಟಕದ ಹಲವು ಸದಸ್ಯರ ಮಧ್ಯೆ ವಾಗ್ವಾದ ಹಾಗೂ ಜಟಾಪಟಿ ನಡೆದಿದೆ. ಹಲವು ವರ್ಷಗಳಿಂದ ಬಿಜೆಪಿಗಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡದೆ ತಮಗೆ ಬೇಕಾದವರಿಗೆ ಹಂಚಲಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ನಗರ ಘಟಕದ ಸದಸ್ಯರು ಸಾಮೂಹಿಕ ರಾಜೀನಾಮೆ ಪತ್ರವನ್ನು ಹಿಡಿದು ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ ಅವರತ್ತ ಹೋಗಿದ್ದಾರೆಂದು ತಿಳಿದು ಬಂದಿದೆ. ನಗರದ 1, 4, 10, 11, 12 ಹಾಗೂ 21ನೇ ವಾರ್ಡ್‌ಗಳಲ್ಲಿ ಅವಿರತವಾಗಿ ದುಡಿದ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಸಂತೋಷ ಸವಣೂರ, ಸುರೇಶ ಬೇದರೆ, ಅರವಿಂದ ಆಲದಕಟ್ಟಿ, ಸುನೀಲ ಮೋರೆ, ಗಾಯತ್ರಿ ಕನವಳ್ಳಿ, ಶಿವಾಜಿ ಮಾನೆ ಮತ್ತಿತರ ಹತ್ತಾರು ಆಕಾಂಕ್ಷಿಗಳು ಆರೋಪಿಸಿದ್ದಾರೆ. ಇದಕ್ಕೆಲ್ಲ ಅರವಿಂದ ಬೆಲ್ಲದ ಅವರೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ನಗರ ಘಟಕದ ಬಿಜೆಪಿಯ ಈ ಸದಸ್ಯರು ಹಾಗೂ ಅವರ ಬೆಂಬಲಿಗರು ಘಟಕಕ್ಕೆ ಸಾಮೂಹಿಕ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿಯೂ ಅಸಮಾಧಾನದ ಹೊಗೆ ಆಡುತ್ತಿದ್ದು, ಮುಖಂಡರು ಇದನ್ನು ಹೇಗೆ ನಿಭಾಯಿಸುತ್ತಾರೆ ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.