ಧಾರವಾಡ

ಸ್ಥಳೀಯ ಸಂಸ್ಥೆಗಳ ಚುನಾವಣೆ: 313 ನಾಮಪತ್ರ

Published On :

ಧಾರವಾಡ: ಸ್ಥಳೀಯ ಸಂಸ್ಥೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನಾಮಪತ್ರ ಸಲ್ಲಿಕೆಯಾಗಿದ್ದು, ಶುಕ್ರವಾರ ಒಟ್ಟು 313 ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 184 ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ 29, ಬಿಜೆಪಿಯಿಂದ 58, ಜೆಡಿಎಸ್‌ನಿಂದ 40, ಕೆಜಿಪಿ 20, ಬಿಎಸ್ಸಾರ್‌ನಿಂದ ಏಳು, ಸಿಪಿಐ(ಎಂ) ಪಕ್ಷದಿಂದ ಓರ್ವ ಅರ್ಭ್ಯ್ಙ ಹಾಗೂ ಪಕ್ಷೇತರರಾಗಿ 29 ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಅಣ್ಣಿಗೇರಿ ಪುರಸಭೆಗೆ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್‌ನಿಂದ ಎಂಟು, ಬಿಜೆಪಿಯಿಂದ ನಾಲ್ಕು, ಜೆಡಿಎಸ್‌ನಿಂದ 14, ಕೆಜೆಪಿಯಿಂದ ಮೂರು, ಬಿಎಸ್ಸಾರ್‌ನಿಂದ ಎರಡು, ಜೆಡಿಯುನಿಂದ ಒಂದು ಹಾಗೂ ಪಕ್ಷೇತರವಾಗಿ ಮೂರು ನಾಮಪತ್ರ ಸಲ್ಲಿಕೆಯಾಗಿವೆ. ಅದರಂತೆ ನವಲಗುಂದ ಪುರಸಭೆಗೆ ಒಟ್ಟು 11 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್‌ನಿಂದ ಒಂದು, ಜಿಜೆಪಿಯಿಂದ ಆರು ಹಾಗೂ ಕೆಜೆಪಿಯಿಂದ ನಾಲ್ಕು ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪುರಸಭೆಯಲ್ಲಿ ಇನ್ನುಳಿದ ಯಾವುದೇ ಪಕ್ಷಗಳು ಶುಕ್ರವಾರ ನಾಮಪತ್ರ ಸಲ್ಲಿಸಲು ಮುಂದಾಗಿಲ್ಲ. ಇನ್ನು, ಕಲಘಟಗಿ ಪಟ್ಟಣ ಪಂಚಾಯ್ತಿಗೆ ಒಟ್ಟು 46 ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್‌ನಿಂದ ಒಂಬತ್ತು, ಬಿಜೆಪಿ ಐದು, ಜೆಡಿಎಸ್ ಒಂಬತ್ತು, ಬಿಎಸ್ಸಾರ್ ಆರು, ಕೆಜೆಪಿಯಿಂದ ಎಂಟು ಹಾಗೂ ಪಕ್ಷೇತರದಿಂದ ಒಂಭತ್ತು ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ, ಕುಂದಗೋಳ ಪಟ್ಟಣ ಪಂಚಾಯ್ತಿಗೆ ಒಟ್ಟು 37 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿಯಿಂದ 13, ಜೆಡಿಎಸ್‌ನಿಂದ 11, ಬಿಎಸ್ಸಾರ್‌ನಿಂದ ಒಂದು ಹಾಗೂ ಕೆಜೆಪಿಯಿಂದ 12 ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ ಶುಕ್ರವಾರ ನಡೆದ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ 47, ಬಿಜೆಪಿ 86, ಕೆಜೆಪಿ 47, ಜೆಡಿಎಸ್ 74, ಬಿಎಸ್ಸಾಆರ್ 16 ಹಾಗೂ 41 ಪಕ್ಷೇತರ ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.