ಧಾರವಾಡ

ಸಾಮೂಹಿಕ ಮದುವೆ ಉತ್ತಮ

Published On :

ಧಾರವಾಡ: ದುಬಾರಿಯ ಈ ದಿನಗಳಲ್ಲಿ ಮದುವೆ ಮಾಡುವುದು ಅತ್ಯಂತ ಕಠಿಣ ಕೆಲಸ. ಈ ನಿಟ್ಟಿನಲ್ಲಿ ಆಡಂಬರದ ಮದುವೆಗಳಿಗಿಂತ ಸಾಮೂಹಿಕ ಮದುವೆಗಳು ಹೆಚ್ಚು ಸಹಕಾರಿ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಸೈದಾಪುರದಲ್ಲಿ ಅಂಬಾಭವಾನಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಆಡಂಬರಕ್ಕೆ ಅಸ್ಪದ ನೀಡದೆ, ಸರಳ ವಿವಾಹಗಳ ಮೂಲಕ ಸಂಘ ಸಂಸ್ಥೆಗಳು ಸಮಾಜಕ್ಕೆ ಮಾದರಿಯಾಗಬೇಕಿದೆ. ಇಂದಿನ ದಿನಮಾನಗಳಲ್ಲಿ ಬಡವರು ಮದುವೆಯಾಗದಂತಹ ಪರಿಸ್ಥಿತಿ ಇದೆ. ಇಂತಹ ವಿವಾಹಗಳು ಬಡವರ ಪಾಲಿಗೆ ಅತ್ಯಂತ ಅನುಕೂಲ ಕಲ್ಪಿಸುವ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು ಎಂದರು.
ಉಪಮೇಯರ್ ಭಾರತಿ ಪಾಟೀಲ ಮಾತನಾಡಿ, ಅಂಬಾಭವನಿ ಮಹಿಳಾ ಮಂಡಳವು ಇಂತಹ ಸಾಹಸಕ್ಕೆ ಕೈ ಹಾಕಿ, ಅತ್ಯಂತ ಯಶಸ್ವಿಯಾಗಿ ಸಾಮೂಹಿಕ ವಿವಾಹ ಮಾಡಿರುವುದು ಮೆಚ್ಚುವ ವಿಷಯ. ಮಹಿಳೆಯರು ಸಮಾಜ ಬದಲಿಸುವ ಶಕ್ತಿ ಹೊಂದಿದ್ದಾರೆ ಎನ್ನುವುದಕ್ಕೆ ಇಂದಿನ ಸಾಮೂಹಿಕ ವಿವಾಹ ಸಮಾರಂಭವೇ ಸಾಕ್ಷಿ ಎಂದರು.
ಆನಂದಬಾಯಿ ಕಟಾರೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅಶೋಕ ಕಾಟವೆ, ಗುರುರಾಜ ಹುಣಸಿಮರದ, ನಿಜನಗೌಡ ಪಾಟೀಲ, ಸಿ.ಎಸ್. ಪಾಟೀಲ, ಸುರೇಶ ಮೇಸ್ತ್ರಿ, ಮಾಧವಸಾ ಕಟಾರೆ, ಸುರೇಂದ್ರ ಸಾಜಡಿ, ಬಾಳು ಇರಕಲ, ಪಾಲಿಕೆ ಸದಸ್ಯರಾದ ರಾಜೇಶ್ವರಿ ಜಡಿ ಇದ್ದರು. ಮೋಹನ ರಾಮದುರ್ಗ ಸ್ವಾಗತಿಸಿದರು. ಅಶೋಕ ಏಣಿಗಿ ವಂದಿಸಿದರು. ಸಂಗಮೇಶ ಅನ್ಸಿ ನಿರೂಪಿಸಿದರು. ಸಾಮೂಹಿಕ ವಿವಾಹದಲ್ಲಿ ಸರ್ವಧರ್ಮದ 26 ನವಜೋಡಿಗಳು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.