ಬಾಗಲಕೋಟೆ

ಬೀಳಗಿಯಲ್ಲಿ

Published On :

ಬೀಳಗಿ: ಪಟ್ಟಣದ ಸಮಸ್ತ ಮುಸ್ಲಿಂ ಸಮಾಜದವರು ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನೂರಾರು ಮುಸ್ಲಿಂ ಬಾಂಧವರು ಮತ್ತು ಶಾಲಾ ಮಕ್ಕಳು ಸೇರಿ ಇಲ್ಲಿನ ಟಿಪ್ಪು ಸುಲ್ತಾನ ವೃತ್ತದಿಂದ ಆರಂಭವಾದ ಮೆಕ್ಕಾ ಮದೀನಾ ಭಾವಚಿತ್ರದ ಭವ್ಯ ಮೆರವಣಿಗೆ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮುಖಾಂತರ ಸಂಚರಿಸಿ ಜಾಮೀಯಾ ಮಸ್ಜೀದ್ ಶಾಲಾ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಗೆ ತಲುಪಿತು.
ವೇದಿಕೆಯಲ್ಲಿ ಶಾಲಾ ಮಕ್ಕಳ ವಿವಿಧ ಕಾರ್ಯಕ್ರಮಗಳು ಸೇರಿದಂತೆ ಗುಲ್ಬರ್ಗಾದ ಜನಾಬ ಹಜರತ್ ಅಲ್ಫಾನಾ ಅಬ್ದುಲ್  ಹಕಿಂ ಹಾಗೂ ಜಮಖಂಡಿಯ ಹಜರತ್ ಮೌಲಾನಾ ಜುನೇದ ರಜಾಸಾಬ ಇವರಿಂದ ಮಹಮ್ಮದ್ ಪೈಗಂಬರರ ಜೀವನ ಶೈಲಿ, ನಡೆ ನುಡಿ ಮತ್ತು ಅವರ ಆದರ್ಶ ಕುರಿತಾಗಿ ಉಪನ್ಯಾಸ ನೀಡಿದರು. ಬಸೀರ ಮುಲ್ಲಾ,ಅಲಿಂ ಭಾಯಿಸರಕಾರ, ಬಾಬಾ ಮುಲ್ಲಾ, ಶಬ್ಬೀರ ಬಾಗವಾನ, ರಫೀಕ ಸಾರವಾಡ, ಅಜೀಜ್ ಬಾಯಿಸರಕಾರ, ಕಾಸಿಂ ಗೋಠೆ, ಬಾಬಾಸಾಬ ಬಾಗವಾನ, ಮಹಮ್ಮದ ಕಮತರ,ಅಬುಬಕರ ಮುಜಾವರ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.