ಬಾಗಲಕೋಟೆ

ಮತದಾರರ ಋಣ ತೀರಿಸಿದ್ದೇನೆ: ಕಾರಜೋಳ

Published On :

ಮುಧೋಳ: ಶಾಸಕನಾಗಿ, ಸಚಿವನಾಗಿ ಸಾಕಷ್ಟು ಕ್ಷೇತ್ರದ ಅಭಿವೃದ್ಧಿಪರ ಕೆಲಸ-ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ. ಮತದಾರರು ನನಗೆ ಆಶಿರ್ವಾದ ಮಾಡಿರುವುದಕ್ಕೆ ನಾನು ಅವರ ಋಣ ತೀರಿಸುತ್ತಿದ್ದೇನೆ ಎಂದು ಮುಧೋಳ ಕ್ಷೇತ್ರದ ಶಾಸಕ, ಸಚಿವ ಗೋವಿಂದ ಕಾರಜೋಳ ಹೇಳಿದರು.
ಈಚೇಗೆ ತಾಲೂಕಿನ ಶಿರೋಳ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿಯಲ್ಲಿ ರು. 1.4 ಕೋಟಿ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ 176 ತಾಲೂಕಿನಲ್ಲಿ ಆಗಲಾರದಷ್ಟು ಅಭಿವೃದ್ಧಿ ಕೆಲಸಗಳು ಮುಧೋಳ ತಾಲೂಕಿನಲ್ಲಿ ಆಗಿರುವುದು ಹೆಮ್ಮೆಯ ಸಂಗತಿ. ತಾಲೂಕಿನಲ್ಲಿ ಒಟ್ಟು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ, ಮುಧೋಳದಲ್ಲಿ 100 ಹಾಸಿಗೆ ಆಸ್ಪತ್ರೆ, ಮಹಾಲಿಂಗಪುರದಲ್ಲಿ 50 ಹಾಸಿಗೆ ಆಸ್ಪತ್ರೆ, ಶಿರೋಳ ಮತ್ತು ಕುಳಲಿಯಲ್ಲಿ ಆಯುರ್ವೇದ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ.
ಶಿರೋಳ ಗ್ರಾಮದಲ್ಲಿ ಕೆರೆ, ರಸ್ತೆ, ಹೈಸ್ಕೂಲ್, ಕುಡಿಯುವ ನೀರಿನ ಯೋಜನೆ, ಪಶು ಆಸ್ಪತ್ರೆ ಸೇರಿದಂತೆ ಸಾಕಷ್ಟು ಕೆಲಸಗಳು ಆಗಿವೆ. ಶಿರೋಳ ಗ್ರಾಮದ ಜನತೆಗೆ ಸರ್ಕಾರದ ಕೆಲಸಗಳನ್ನು ತೆಗೆದುಕೊಳ್ಳಲು ಮುಂಚೂಣಿಯಲ್ಲಿದ್ದಾರೆ. ಇದರಿಂದ ಅವರ ಶಿಸ್ತು ಮತ್ತು ಒಕ್ಕಟ್ಟು ಇತರೆ ಗ್ರಾಮಸ್ಥರಿಗೆ ಮಾದರಿಯಾಗಿದೆ ಎಂದರು.
ಡಿಎಚ್‌ಓ ಡಾ.ಎಸ್. ಗುಂಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಚಂದ್ರವ್ವ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಶಿರೋಳ ಶಂಕರಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ, ತಾಪಂ ಅಧ್ಯಕ್ಷ ಸದಾಶಿವ ಸಂಕ್ರಟ್ಟಿ, ದುರ್ಗವ್ವ ರಗಪ್ಪಗೋಳ, ತಾಪಂ ಸದಸ್ಯೆ ದುಂಡವ್ವ ವಾಲಿಮರದ, ಗ್ರಾಪಂ ಉಪಾಧ್ಯಕ್ಷೆ ಶಂಕ್ರವ್ವ ಕುರಿ, ಸೋಮಲಿಂಗಯ್ಯ ಗಣಾಚಾರಿ, ಅನಂತ ಘೋರ್ಪಡೆ, ತುಳಜಪ್ಪ ವಾಲಿಮರದ, ಬಿಜೆಪಿ ಯುವ ಧುರೀಣ ಅರುಣ ಕಾರಜೋಳ, ಬಸಪ್ಪ ವಾಲಿಮರದ, ಮಹಾದೇವಪ್ಪ ಗುಣದಾಳ, ವೀರಪ್ಪ ಹೊಸೂರ, ಗಿರಿಮಲ್ಲಯ್ಯ ಗಣಾಚಾರಿ, ಅಭಿಯಂತರ ಡಿ.ವ್ಹಿ. ಜತ್ತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.