ಬಯಲು ಸೀಮೆಗೂ ಕಾಲಿಟ್ಟ ವೊಗೆಕಾಯಿ
ಬಾಗಲಕೋಟೆ: ಕರಾವಳಿ, ಮಲೆನಾಡು ಹಾಗೂ ಬೆಂಗಳೂರಿಗೆ ಸೀಮಿತವಾಗಿದ್ದ ವೊಗೆಕಾಯಿಂುಂದೇ ಪ್ರಸಿದ್ಧವಾದ ಸಾಂಬಾರ ಸೌತೆ, ದೊಡ್ಡ ಸೌತೆಕಾಯಿ ಬೆಳೆಯನ್ನು ತೋಟಗಾರಿಕೆ ಮಹಾವಿದ್ಯಾಲಂುದಲ್ಲಿ ಬೆಳೆಯಲಾಗುತ್ತಿದೆ.
ಪ್ರಥಮ ವೊಗೆಕಾಯಿ ಬೆಳೆ ವೀಕ್ಷಿಸಿದ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಬಿ. ದಂಡಿನ, ಈ ಬೆಳೆಯನ್ನು ಉತ್ತರ ಕರ್ನಾಚಕದ ಭಾಗದಲ್ಲಿ ಸಹ ಉತ್ತಮವಾಗಿ ಬೆಳೆಯಬಹುದು. ಈಗಾಗಲೇ ಪ್ರಾಂೋಗಿಕವಾಗಿ ಸ್ವಲ್ಪ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದು, ರೈತರಿಗೆ ಈ ಬಗ್ಗೆ ತಿಳಿವಳಿಗೆ ನೀಡಲಾಗುವುದು ಎಂದರು.
ಉತ್ತರ ಕನ್ನಡ, ಮಂಗಳೂರು, ಉಡುಪಿ ಹಾಗೂ ಬೆಂಗಳೂರು ಸುತ್ತ ಈ ಸೌತೆಗೆ ಬಹಳ ಬೇಡಿಕೆಯಿದ್ದು, ಸಾಂಬಾರ ತಯಾರಿಸಲು ಬಳಸುತ್ತಾರೆ ಎಂದರು. ಸಾಂಬಾರ ಸೌತೆಯ ರಸದಿಂದ ತಂಪು ಪಾನೀಂು ಹಾಗೂ ಜಾಮ್ ತಯಾರಿಸುವ ಬಗ್ಗೆ ಸಂಶೋಧನೆ ನಡೆಸುತ್ತಿರುವ ಡಾ. ಭುವನೇಶ್ವರಿ ಅವರು ತಂಾರಿಸಿದ ಪಾನೀಂು ಸೇವಿಸಿ ಗುಣಮಟ್ಟ ಹಾಗೂ ರುಚಿ ನೋಡಿದ ಕುಲಪತಿ ಡಾ. ದಂಡಿನ್, ಈ ಪಾನೀಂುವನ್ನು ಪ್ರಾಂೋಗಿಕವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಇದರ ದೀರ್ಘಾವಧಿ ಬಳಕೆ ಹಾಗೂ ಸ್ಟೊರೇಜ್ ಪರೀಕ್ಷೆ ನಂತರ ವಾಣಿಜ್ಯ ಬಳಕೆಗೆ ಬಿಡುಗಡೆಗೊಳಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು. ಡಾ. ವಸಂತ ಗಾಣಿಗೇರ, ಡಾ. ಬಿರಾದಾರ, ಡಾ. ಭುವನೇಶ್ವರಿ ಹಾಗೂ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

