ಜಿಲ್ಲಾ ಸುದ್ದಿ

ಜೇಬು ಕತ್ತರಿಸಲು ಹೋಗಿ ಹೊಟ್ಟೆಯನ್ನೇ ಕತ್ತರಿಸಿದ ಕಳ್ಳ

ಹಣ ಕದಿಯಲು ಹೋದ ಕಳ್ಳರು ಜೇಬು ಕತ್ತರಿಸಲು ಹೋಗಿ ವ್ಯಕ್ತಿಯ ಹೊಟ್ಟೆಯನ್ನೇ ಕತ್ತರಿಸಿ ಹಾಕಿರುವ ಘಟನೆ ಶುಕ್ರವಾರ ಮುದ್ದೇ ಬಿಹಾಳದಲ್ಲಿ ನಡೆದಿದೆ...

ಜೇಬು ಕತ್ತರಿಸಲು ಹೋಗಿ ಹೊಟ್ಟೆಯನ್ನೇ ಕತ್ತರಿಸಿದ ಕಳ್ಳ
ಸಾಂದರ್ಭಿಕ ಚಿತ್ರ
Published On :

ಬಿಜಾಪುರ: ಹಣ ಕದಿಯಲು ಹೋದ ಕಳ್ಳರು ಜೇಬು ಕತ್ತರಿಸಲು ಹೋಗಿ ವ್ಯಕ್ತಿಯ ಹೊಟ್ಟೆಯನ್ನೇ ಕತ್ತರಿಸಿ ಹಾಕಿರುವ ಘಟನೆ ಶುಕ್ರವಾರ ಮುದ್ದೇ ಬಿಹಾಳದಲ್ಲಿ ನಡೆದಿದೆ.

ಮುದ್ದೇ ಬಿಹಾಳದ ಆಲೂರು ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಗೂಳಿ ಜೇಬುಗಳ್ಳರಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ತಮ್ಮ ಮಗ  ಡಾ. ವಿಜಯ ಕುಮಾರನಿಂದ ಹಣ ಪಡೆದು ಊರಿಗೆ ವಾಪಸಾಗಲು ಬಸ್ ನಿಲ್ದಾಣದಲ್ಲಿ ಬಂದು ಬಸ್ ಏರುವಾಗ ನೂಕು ನುಗ್ಗಲಿನಲ್ಲಿ ನಾಲ್ಕೈದು ಮಂದಿ ಅವರನ್ನು ತಳ್ಳಾಡಿದ್ದಾರೆ. ಈ ವೇಳೆ ಅವರ  ಹೊಟ್ಟೆಗೆ ಏನೋ ಗೀಚಿದಂತಾಗಿದೆ.

ತಳ್ಳಾಟದಲ್ಲಿ ಏನೋ ಗೀಚಿಕೊಂಡಿರಬೇಕು ಎಂದು ತಿಳಿದ ಚಂದ್ರಾಮಪ್ಪ ಅದನ್ನು ನಿರ್ಲಕ್ಷಿಸಿ ಬಸ್ ಹತ್ತಿದ್ದಾರೆ. ಆದರೆ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ತಮ್ಮ ಜೇಬು ನೋಡಿಕೊಂಡ  ಚಂದ್ರಾಮಪ್ಪ ಅವರಿಗೆ ಶಾಕ್ ಕಾದಿತ್ತು. ಜೇಬಿನಲ್ಲಿದ್ದ ಸುಮಾರು 22 ಸಾವಿರ ರುಗಳನ್ನು ಕಳ್ಳರು ಎಗರಿಸಿದ್ದರು. ಮತ್ತೊಂದೆಡೆ ತಮ್ಮ ಶರ್ಟ್ ನಲ್ಲಿ ರಕ್ತ ಸೋರುತ್ತಿದ್ದನ್ನು ಗಮನಿಸಿದ ಚಂದ್ರಾಮಪ್ಪ  ಅವರು ಕೂಡಲೇ ತಮ್ಮ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಬಸ್ ನಿಲ್ದಾಣಕ್ಕೆ ಧಾವಿಸಿದ ಅವರ ಮಗ ಚಂದ್ರಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.  ಹರಿದುಹೋಗಿದ್ದ ಚಂದ್ರಾಮಪ್ಪ ಅವರಿಗೆ ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ ಮುದ್ದೆ ಬಿಹಾಳದಲ್ಲಿ ಜೇಬುಗಳ್ಳರ ತಂಟೆ ಹೆಚ್ಚಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.