ಮೆಟ್ರೋ 2ನೇ ಹಂತ ಶೀಘ್ರ
ಬೆಂಗಳೂರು ಮಹಾನಗರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೆಟ್ರೋದ ಮೊದಲನೇ ಹಂತ ಶೇ.97ರಷ್ಟು ಪೂರ್ಣಗೊಂಡಿದ್ದು, ಪ್ರಸ್ತುತ 2ನೇ ಹಂತದ ಕಾಮಗಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಖರೋಲ ತಿಳಿಸಿದ್ದಾರೆ...
ಬೆಂಗಳೂರು: ಬೆಂಗಳೂರು ಮಹಾನಗರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೆಟ್ರೋದ ಮೊದಲನೇ ಹಂತ ಶೇ.97ರಷ್ಟು ಪೂರ್ಣಗೊಂಡಿದ್ದು, ಪ್ರಸ್ತುತ 2ನೇ ಹಂತದ ಕಾಮಗಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಖರೋಲ ತಿಳಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾ ಒಕ್ಕೂಟವು ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಗರದ ವೈಟ್ ಪಿsೀಲ್ಡ್‍ನಿಂದ ಬೈಯಪ್ಪನಹಳ್ಳಿ, ಮೈಸೂರು ರಸ್ತೆಯ ಮಾರ್ಗದಲ್ಲಿ 6 ಪಥದ ಮೆಟ್ರೋ ನಿರ್ಮಿಸಲಾಗುವುದು. ಈ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಅಲ್ಲಿ ನೆಲಸಮ ಮಾಡಿದ 50ಕ್ಕೂ ಹೆಚ್ಚು ಮನೆಗಳ ಮಾಲೀಕರಿಗೆ ಪರಿಹಾರ ತಲುಪಿಸಲಾಗುತ್ತಿದೆ. ಮೆಟ್ರೋ ನಿರ್ಮಾಣಕ್ಕೆ ಗುತ್ತಿಗೆಯನ್ನೂ ನೀಡಲಾಗಿದೆ. ಜಯನಗರ, ಆರ್‍ಎನ್ ರಸ್ತೆ, ಬೊಮ್ಮಸಂದ್ರದಲ್ಲಿ ಕೆಲಸ ಆರಂಭಕ್ಕೆ ಅನುಮತಿ ಸಿಕ್ಕಿದೆ. ಕಾಮಗಾರಿಯ ಪೂರ್ಣ ವಿನ್ಯಾಸವನ್ನು ಐಐಎಸ್ಸಿ ನಿರ್ವಹಿಸಿದೆ ಎಂದು ಖರೋಲ ವಿವರಿಸಿದರು.
ಕಳೆದ 2015ರಿಂದ ಆರಂಭವಾದ ಮೆಟ್ರೋ ಮೊದಲನೇ ಹಂತದ ಕಾಮಗಾರಿಗೆ ಹಲವು ತೊಡಕುಗಳು ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಈಗಾಗಲೇ ಚಿಕ್ಕಪೇಟೆಯಿಂದ ಕೈಗೊಂಡಿರುವ ಸುರಂಗ ಮಾರ್ಗ ನಿರ್ಮಾಣದಲ್ಲಿ ಕಲ್ಲುಬಂಡೆಗಳು, ಮಣ್ಣು ಉದುರುತ್ತಿರುವುದಕ್ಕೆ ತೊಡಕಾಗಿದೆ. ಇದಕ್ಕೆ ನಮ್ಮ ಯೋಜನೆಗಳಲ್ಲಿನ ಲೋಪ ಕಾರಣವಾಗಿರಬಹುದೆ? ಎಂಬ ಅನುಮಾನ ಕಾಡುತ್ತಿದೆ. ಆದರೂ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮಾಚ್‍ನಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್‍ನ ಸುರಂಗ ಮಾರ್ಗ, ಮೇ ತಿಂಗಳಲ್ಲಿ ರೀಚ್ ತ್ರೀ ಮಾರ್ಗ ಹಾಗೂ ಜೂನ್‍ನಲ್ಲಿ ಉತ್ತರ-ದಕ್ಷಿಣ ಕಾರಿಡಾರ್ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದರೂ, ನಿಗದಿತ ಅವಧಿಗಿಂತ ಒಂದೆರಡು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ ಎಂದು ಸ್ಪಷ್ಟಪಡಿಸಿದರು.
ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್‍ನಲ್ಲಿ ಅತ್ಯುತ್ತಮ ದರ್ಜೆಯ ನಿಲ್ದಾಣ ನಿರ್ಮಿಸಲಿದ್ದು, ಇಲ್ಲಿ ಮೂರು ಮುಖ್ಯ ವಾಣಿಜ್ಯ ಸಂಕೀರ್ಣಗಳು ಬರಲಿವೆ. 10 ಸಾವಿರ ಮಂದಿ ಓಡಾಡಲು ಅನುಕೂಲವಾಗುವಂತೆ 45 ಸ್ಟೇರ್‍ಕೇಸ್ ನಿರ್ಮಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ 20 ಎಸ್ಕಲೇಟರ್ ಅಳವಡಿಸಲಾಗಿದೆ. ಸಿವಿಲ್, ಗ್ರಾನೈಟ್, ಎಲೆಕ್ಟ್ರಿಕಲ್ ಕೆಲಸ ಮುಗಿದಿದ್ದು
ಅಂತಿಮ ರೂಪ ನೀಡಲಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

