ಕಬ್ಬನ್‍ನಲ್ಲಿ ಸಂಗೀತದಿಂಪು
ಪ್ರತಿ ಭಾನುವಾರ ಕಬ್ಬನ್ ಉದ್ಯಾನದಲ್ಲಿ ನೃತ್ಯ ಹಾಗೂ ಸಂಗೀತ ಮೊಳಗುತ್ತಿದೆ. ಅದೇ ರೀತಿ ಈ ವಾರ ಉದ್ಯಾನದ ಉದಯ ರಾಗದಲ್ಲಿ ಸ್ಕಂದ ಕಲಾಮೇಳದ ರತ್ನಾ ಮತ್ತು ತಂಡದಿಂದ ಜಾನಪದ ಗೀತೆಗಳ ಗಾಯನ ಉದ್ಯಾನವೇ ತಲೆದೂಗುವಂತೆ ಮಾಡಿತ್ತು...

ಬೆಂಗಳೂರು: ಪ್ರತಿ ಭಾನುವಾರ ಕಬ್ಬನ್ ಉದ್ಯಾನದಲ್ಲಿ ನೃತ್ಯ ಹಾಗೂ ಸಂಗೀತ ಮೊಳಗುತ್ತಿದೆ. ಅದೇ ರೀತಿ ಈ ವಾರ ಉದ್ಯಾನದ ಉದಯ ರಾಗದಲ್ಲಿ ಸ್ಕಂದ ಕಲಾಮೇಳದ ರತ್ನಾ ಮತ್ತು ತಂಡದಿಂದ ಜಾನಪದ ಗೀತೆಗಳ ಗಾಯನ ಉದ್ಯಾನವೇ ತಲೆದೂಗುವಂತೆ ಮಾಡಿತ್ತು.
ಸಮೃದ್ಧಿ ಸ್ಕೂಲ್ ಆಫ್ ಡ್ಯಾನ್ಸ್ ಅವರಿಂದ ನೃತ್ಯ ಪ್ರದರ್ಶನ, ಸವ್ಯಶ್ರೀ ಮತ್ತು ಸಾಯಿ ವಂಶಿಯವರಿಂದ ನೃತ್ಯ ಜರುಗಿತು. ಡಾ.ಸಿ.ಚಂದ್ರಪ್ಪ ಅವರಿಂದ ಗುಲ್ವಾಡಿ ವೆಂಕಟರಾಯರ ಸಾಹಿತ್ಯ ಪರಿಚಯ ಕುರಿತು ಉಪನ್ಯಾಸ ನಡೆಯಿತು. ಎನರ್ಜಿ ಎಫಿಶೆಯೆನ್ಸಿ ಸರ್ವಿಸಸ್‍ನಿಂದ ಡೆಲ್ಫ್ ಕಾರ್ಯಕ್ರಮದಡಿ ಎಲ್‍ಇಡಿ ಬಲ್ಬ್‍ಗಳನ್ನು ವಿತರಿಸಲಾಯಿತು.
ಬೆಳಗ್ಗೆ 6ರಿಂದ ವಿದ್ಯಾರಣ್ಯ ಸಂಸ್ಥೆಯ ಸ್ವದಾರ ಯೋಜನೆಯಲ್ಲಿ ಫಲಾನುಭವಿಗಳು ಉತ್ಪಾದಿ ಸುತ್ತಿರುವ ವಸ್ತುಗಳಾದ ಮೇಣದಬತ್ತಿ, ಪೊರಕೆ ಮತ್ತು ಉಣ್ಣೆಯ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಉದ್ಯಾನದ ಆವರಣದಲ್ಲಿ ಹಾಪ್‍ಕಾಮï್ಸನಿಂದ ವಿವಿಧ ಕಟ್ ಫ್ರೂಟ್ಸ್, ಡ್ರೈಫ್ರೂಟ್ಸ್, ತಾಜಾ ಹಣ್ಣುಗಳು, ಪ್ಯಾಕ್ ಮಾಡಿದ ತಾಜಾ ತರಕಾರಿ ಮಾರಾಟ ವಿತ್ತು. ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ವಿರುವ ಕಾರಣ ಹೆಚ್ಚು ಜನರು ಬಂದಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


