ಎರಡು ಹನಿ ಹಾಕಿಸಿ, ಪೊಲಿಯೋ ತೊಲಗಿಸಿ
ರಾಷ್ಟ್ರೀಯ ಪಲ್ಸ್ ಪೊಲಿಯೋ ಅಭಿಯಾನದ ಮೊದಲನೇ ಹಂತದ ಕಾರ್ಯಕ್ರಮ ಭಾನುವಾರ ರಾಜ್ಯಾದ್ಯಂತ ಯಶಸ್ವಿಗೊಂಡಿದ್ದು, ಒಟ್ಟಾರೆ ಶೇ.86.83ರಷ್ಟು ...

ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೊಲಿಯೋ ಅಭಿಯಾನದ ಮೊದಲನೇ ಹಂತದ ಕಾರ್ಯಕ್ರಮ ಭಾನುವಾರ ರಾಜ್ಯಾದ್ಯಂತ ಯಶಸ್ವಿಗೊಂಡಿದ್ದು, ಒಟ್ಟಾರೆ ಶೇ.86.83ರಷ್ಟು ಪೊಲಿಯೋ ಹನಿ ಹಾಕಲಾಗಿದೆ.
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ರುಷಿತಾ ಎಂಬ ಮಗುವಿಗೆ ಪೊಲಿಯೋ ಹನಿ ಹಾಕಿ ಚಾಲನೆ ನೀಡಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಟೌನ್ ಹಾಲ್ ಬಳಿ ಇರುವ ದಾಸಪ್ಪ ಆಸ್ಪತ್ರೆಯಲ್ಲಿ ಮಗುವಿಗೆ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಪೊಲಿಯೋ ಹನಿ ಹಾಕಿ ನಗರದ ಮಟ್ಟದ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಇದೇ ವೇಳೆ ಸಚಿವ ಖಾದರ್ ತಮ್ಮ ಮೊಬೈಲ್ ನಲ್ಲಿ ಸೆಲ್ಫಿಯನ್ನೂ ತೆಗೆದುಕೊಂಡು ಖುಷಿ ಪಟ್ಟರು.
ಆರೋಗ್ಯ ಇಲಾಖೆಯು ಹಮ್ಮಿಕೊಂಡಿದ್ದ ಮೊದಲನೆ ಹಂತದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. 5 ವರ್ಷದೊಳಗಿನ 74.25 ಲಕ್ಷ ಮಕ್ಕಳನ್ನು ಗುರುತಿಸಲಾಗಿದ್ದು, 64,46,530 ಮಕ್ಕಳಿಗೆ ಪೊಲಿಯೋ ಹನಿ ಹಾಕಲಾಗಿದೆ. ಮೊದಲ ದಿನ ಶೇ.96.17 ಮಕ್ಕಳು ಪೊಲಿಯೋ ಹನಿ ಹಾಕಿಸಿಕೊಂಡರು. ಇದಕ್ಕಾಗಿ 32617 ಬೂತ್‍ಗಳು, 51732 ತಂಡಗಳು, 103464 ಲಸಿಕಾ ಕಾರ್ಯಕರ್ತರು, 6522 ಮೇಲ್ವಿಚಾರಕರು, 1205 ಸಂಚಾರಿ ತಂಡಗಳು ಹಾಗೂ 1736 ಟ್ರಾನ್ಸಿಟ್ ಟೀಮ್ ಗಳನ್ನು ನಿಯೋಜಿಸಲಾಗಿತ್ತು.
ಜಿಲ್ಲಾ ಮಟ್ಟದಲ್ಲಿ ಮಂಡ್ಯ ಮೊದಲ ಸ್ಥಾನದಲ್ಲಿದ್ದರೆ ಕೊಡಗು ಎರಡನೇ ಸ್ಥಾನ, ಬೆಂಗಳೂರು ಗ್ರಾ.3ನೇ ಸ್ಥಾನ ಹಾಗೂ ಕಲಬುರಗಿ ಕೊನೆಯ ಸ್ಥಾನದಲ್ಲಿವೆ. ಎಲ್ಲ ಜಿಲ್ಲೆಗಳಲ್ಲಿ ಆಯಾ ಡಿಸಿ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮನ್ವಯ ಸಮಿತಿಯ ನಿರ್ದೇಶನದಂತೆ ಕಾರ್ಯಕ್ರಮವನ್ನು ನಡೆಸಲಾಯಿತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


