ಜಿಲ್ಲಾ ಸುದ್ದಿ

ಲೇವಾದೇವಿಗಾರ ಸಂದೀಪ್ ರೆಡ್ಡಿ ಕೊಲೆಗಾರರ ಬಂಧನ

ಲೇವಾದೇವಿಗಾರರೊಬ್ಬರ ಕೊಲೆ ಪ್ರಕರಣ ಭೇದಿಸಿರುವ ಸುಬ್ರಮಣ್ಯ ಪುರ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು...

ಲೇವಾದೇವಿಗಾರ ಸಂದೀಪ್ ರೆಡ್ಡಿ ಕೊಲೆಗಾರರ ಬಂಧನ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಲೇವಾದೇವಿಗಾರರೊಬ್ಬರ ಕೊಲೆ ಪ್ರಕರಣ ಭೇದಿಸಿರುವ ಸುಬ್ರಮಣ್ಯ ಪುರ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 
ಜೆ.ಪಿ.ನಗರ ನಿವಾಸಿಗಳಾದ ನಾಗರಾಜ್ (39), ಮಹದೇವ (25), ಪ್ರವೀಣ್ (23), ಶ್ರೀನಿವಾಸ್ (25), ರವಿ (27) ಮತ್ತು ಚಂದ್ರ (38) ಬಂಧಿತರು. ಆರೋಪಿಗಳು ಜ.8ರಂದು ರಾಘವನಗರ ನಿವಾಸಿ ಸಂದೀಪ್ ರೆಡ್ಡಿ ಅವರ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
ಲೇವಾದೇವಿಗಾರ ಸಂದೀಪ್ ರೆಡ್ಡಿ ಮತ್ತು ಆರೋಪಿ ನಾಗರಾಜ್ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಹಣಕಾಸು ವ್ಯವಹಾರದ ವಿಚಾರವಾಗಿ ಇಬ್ಬರ ನಡುವೆ ಸಣ್ಣ ಜಗಳವೂ ನಡೆದಿತ್ತು. ಆ ಘಟನೆಯಿಂದ ಸಂದೀಪ್ ರೆಡ್ಡಿ ಮೇಲೆ ದ್ವೇಷಕಾರುತ್ತಿದ್ದ ನಾಗರಾಜ್ ಹೇಗಾದರೂ ಮಾಡಿ ಆತನನ್ನು ಮುಗಿಸಲು ಸಂಚು ರೂಪಿಸುತ್ತಿದ್ದ. ತನ್ನ ಈ ದುಷ್ಕೃತ್ಯಕ್ಕೆ ಸ್ನೇಹಿತರ ನೆರವು ಬೇಡಿದ್ದ. 
ಅಡ್ಡಗಟ್ಟಿ ಕೊಲೆ: ಜ.8ರಂದು ಸಂದೀಪ್ ರೆಡ್ಡಿ ಯಾವುದೋ ಕೆಲಸದ ನಿಮಿತ್ಯ ತಮ್ಮ ಕಾರಿನಲ್ಲಿ ಸುಬ್ರಮಣ್ಯಪುರಕ್ಕೆ ತೆರಳಿದ್ದರು. ಬಳಿಕ ರಾತ್ರಿ 11ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದಾಗ ಮಾರ್ಗ ಮಧ್ಯೆ ಪುಟ್ಟೇನಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ಅಡ್ಡಗಟ್ಟಿದ ಆರೋಪಿಗಳು, ಮಾರಕಾಸ್ತ್ರಗಳಿಂದ ಸಂದೀಪ್ ರೆಡ್ಡಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಬಳಿಕ ಸ್ಥಳ ಪರಿಶೀಲಿಸಿದ್ದ ಪೊಲೀಸರು ನಾಗರಾಜ್ ಈ ಕೃತ್ಯ ಎಸಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು. 
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ತೀವ್ರಶೋಧ ನಡೆಸಿದ್ದರು. ಕೊನೆಗೆ ಆರೋಪಿಗಳು ಕನಕಪುರದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. 
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆ ಸಂಬಂಧ ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಿದ್ದರು. ಮನವಿ ಪುರಸ್ಕರಿಸುವ ನ್ಯಾಯಾಲಯ ಜ.23ರವರೆಗೆ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.