ಮಂಗಳೂರಲ್ಲೂ ಪರದಾಟ ಹಳ್ಳಿ ಜನ ಕಾದು ವಾಪಸ್
ಜಿಲ್ಲೆಯಲ್ಲಿಯೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತೊಂದರೆಯಾಗಿದೆ. ಬೆಳಗ್ಗೆ 10ರಿಂದ ಸಂಜೆ 5.15ರವರೆಗೂ ಸರ್ವರ್‍ಗಳು ನಿಧಾನವಾಗಿ ಕೋರ್ ಬ್ಯಾಂಕಿಂಗ್ ಕೆಲಸಕ್ಕೆ ತೊಂದರೆಯಾಗುತ್ತಿದೆ...

ಮಂಗಳೂರು: ಜಿಲ್ಲೆಯಲ್ಲಿಯೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತೊಂದರೆಯಾಗಿದೆ. ಬೆಳಗ್ಗೆ 10ರಿಂದ ಸಂಜೆ 5.15ರವರೆಗೂ ಸರ್ವರ್‍ಗಳು ನಿಧಾನವಾಗಿ ಕೋರ್ ಬ್ಯಾಂಕಿಂಗ್ ಕೆಲಸಕ್ಕೆ ತೊಂದರೆಯಾಗುತ್ತಿದೆ.
ಇದರಿಂದ ಅಂಚೆ ಕಚೇರಿಗಳಲ್ಲಿ ಗ್ರಾಹಕರಿಗೆ ತೊಂದರೆಯಾಗಿದೆ. ದೇಶದಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಈ ತೊಂದರೆ ಕಾಣಿಸಿದೆ. ಪಿನಾಕಲ್ ಸಾಫ್ಟ್ ವೇರ್‍ನಿಂದ ಇನ್ಫೋಸಿಸ್ ತಂತ್ರಜ್ಞರು ಕೋರ್ ಬ್ಯಾಂಕಿಂಗ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆಸುತ್ತಿದ್ದಾರೆ. ಕೋರ್ ಬ್ಯಾಂಕಿಂಗ್ ನಲ್ಲಿ ಒಂದು ಅಂಚೆ ಕಚೇರಿಯ ಗ್ರಾಹಕರ ಎಲ್ಲ ವಿವರಗಳನ್ನು ಎಲ್ಲ ಅಂಚೆ ಕಚೇರಿಗಳಿಗೆ ಡಾಟಾ ಮೂಲಕ ರವಾನಿಸುವುದು. ಈ ಸೌಲಭ್ಯದಿಂದ ಗ್ರಾಹಕರು ಯಾವುದೇ ಅಂಚೆ ಕಚೇರಿಯಲ್ಲಿ ಹಣಕಾಸು ವಹಿವಾಟು ನಡೆಸಬಹುದು.
ಅಂಚೆ ಕಚೇರಿಯ ಬ್ಯಾಂಕಿಂಗ್‍ನ ಮುಖ್ಯ ಸರ್ವರ್ ಮುಂಬಯಿನಲ್ಲಿದೆ. ಎಲ್ಲ ಅಂಚೆ ಕಚೇರಿಗಳ ಸರ್ವರ್ ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದ್ದು ಸರ್ವರ್‍ಗಳ ಕೆಲಸ ನಿಧಾನವಾಗುತ್ತಿದೆ. ಈ ಕಾರ್ಯ ಮಾರ್ಚ್ ಒಳಗೆ ಮುಕ್ತಾಯಗೊಳ್ಳಬೇಕು. ರಾಜ್ಯದಲ್ಲಿ ಸುಮಾರು 1,580 ಅಂಚೆ ಕಚೇರಿಗಳಿದ್ದು, ಇನ್ನೂ 70 ಕಚೇರಿಗಳನ್ನು ಕೋರ್‍ಬ್ಯಾಂಕಿಂಗ್ ಸೌಲಭ್ಯಕ್ಕೆ ಸೇರ್ಪಡೆಗೊಳಿಸಲು ಬಾಕಿ ಇದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ 28 ಸಾವಿರ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


