ಕೆರೆಗೆ ಬಿದ್ದ ಆನೆ ಸಾವು
ಸಮೀಪದ ಸರಗೂರು ಬಳಿ ಆಹಾರ ಅರಸಿ ಬಂದಿದ್ದ ಗಂಡಾನೆಯೊಂದು ಆಕಸ್ಮಿಕವಾಗಿ ಧನಗೆರೆಕಟ್ಟೆ ಕೆರೆಗೆ ಬಿದ್ದು ಬುಧವಾರ...

Published On :
ಕೊಳ್ಳೆಗಾಲ: ಸಮೀಪದ ಸರಗೂರು ಬಳಿ ಆಹಾರ ಅರಸಿ ಬಂದಿದ್ದ ಗಂಡಾನೆಯೊಂದು ಆಕಸ್ಮಿಕವಾಗಿ ಧನಗೆರೆಕಟ್ಟೆ ಕೆರೆಗೆ ಬಿದ್ದು ಬುಧವಾರ ಮೃತಪಟ್ಟಿದೆ.
ಸರಗೂರಿನ ಬಳಿಯ ಜಮೀನಿನ ಪೊದೆಯಲ್ಲಿ ಮಂಗಳವಾರ ರಾತ್ರಿ ಬೀಡುಬಿಟ್ಟಿದ್ದ ನಾಲ್ಕು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಓಡಿಸುವ ಪ್ರಯತ್ನದಲ್ಲಿದ್ದಾಗ ಗಂಡಾನೆಯೊಂದು ಓಡುವ ಭರದಲ್ಲಿ ಕಾಲು ಜಾರಿ ಕೆರೆಗೆ ಬಿದ್ದಿದೆ.
ಕಾಡಿನಿಂದ ಆಹಾರವನ್ನರಸಿ ಬಂದಿದ್ದ ಆನೆಗಳು ಹೊಲದಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿದ್ದವು. ಇದರಿಂದ ಆತಂಕಗೊಂಡ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಅಮರ ನಾರಾಯಣ್, ಅರಣ್ಯ ಇಲಾಖೆಯ ಎಸಿಎಫ್ ಶಿವರಾಮಯ್ಯ, ಫಾರೆಸ್ಟರ್ ಶಿವಕುಮಾರ್ ನೇತೃತ್ವದಲ್ಲಿ ಎರಡೂ ಇಲಾಖೆಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸುವಾಗ ಘಟನೆ ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


