ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಮತ್ತೆ 7 ರೈತರ ಆತ್ಮಹತ್ಯೆ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಇನ್ನೂ ನಿಂತಿಲ್ಲ. ಕೊಪ್ಪಳ ಜಿಲ್ಲೆಯ ಇಬ್ಬರು ಸೇರಿ ಬುಧವಾರ ಮತ್ತೆ ಏಳು ರೈತರು ಸಾವಿನ ದಾರಿ...

ರಾಜ್ಯದಲ್ಲಿ ಮತ್ತೆ 7 ರೈತರ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಇನ್ನೂ ನಿಂತಿಲ್ಲ. ಕೊಪ್ಪಳ ಜಿಲ್ಲೆಯ ಇಬ್ಬರು ಸೇರಿ ಬುಧವಾರ ಮತ್ತೆ ಏಳು ರೈತರು ಸಾವಿನ ದಾರಿ ತುಳಿದಿದ್ದಾರೆ. 
ಕೊಪ್ಪಳ ಜಿಲ್ಲೆಯ ಕಾರಟಗಿಯ ಶೇಷಗಿರಿ ಕ್ಯಾಂಪಿನ ಯಲ್ಲಪ್ಪ ಹರಿಜನ (58) ವಿಷ ಸೇವಿಸಿದ್ದರೆ, ಕೊಪ್ಪಳ ತಾಲೂಕು ಗೋಶಲದೊಡ್ಡಿಯ ಹನುಮಂತಪ್ಪ ವಾಲಿಕಾರ(75) ನೇಣು ಬಿಗಿದುಕೊಂಡಿದ್ದಾರೆ. ಯಲ್ಲಪ್ಪ 7 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು, ಜತೆಗೆ ಕುರಿ ಸಾಕಣೆಯನ್ನೂ ಮಾಡುತ್ತಿದ್ದರು. 
ಕೃಷಿಗೆ ರು.3 ಲಕ್ಷ ಸಾಲ ಮಾಡಿಕೊಂಡಿದ್ದರು. ಇನ್ನು ಬರದಿಂದಾಗಿ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ರು.3 ಲಕ್ಷ ಹಾಗೂ ಖಾಸಗಿಯಾಗಿ ಮಾಡಿಕೊಂಡಿದ್ದ ಕೈಗಡ ತೀರಿಸಲಾಗದೆ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಚಿಕಿತ್ಸೆ ಫಲಿಸದೆ ಸಾವು: ಸಾಲಬಾಧೆಯಿಂದ ಬೇಸತ್ತಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕರಡಿಕೊಪ್ಪ ಗ್ರಾಮದ ಕೆ.ಬಿ.ರವಿ (42), ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮಾಲಂಗಿಯ ರಾಜೇಗೌಡ(45) ವಿಷ ಸೇವಿಸಿದ್ದಾರೆ. ಇವರಲ್ಲಿ ರವಿ ವಿಷ ಸೇವಿಸಿದ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರು ತಕ್ಷಣಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಇವರು ರು.3.50 ಲಕ್ಷ ಸಾಲ ಮಾಡಿಕೊಂಡಿದ್ದರು. 
ಇನ್ನು ರಾಜೇಗೌಡ ಬ್ಯಾಂಕ್ ನಲ್ಲಿ ರು.8.51 ಲಕ್ಷ ಸಾಲ ಮಾಡಿಕೊಂಡಿದ್ದರು. ಧಾರವಾಡದ ಹೊನ್ನಾಪುರದಲ್ಲೂ ಗೌಡಪ್ಪ ಪರಪ್ಪ ಪಾಟೀಲ (55) ಬ್ಯಾಂಕ್ ನಲ್ಲಿ ಮಾಡಿಕೊಂಡಿದ್ದ ರು.60 ಸಾವಿರ ಸಾಲ ತೀರಿಸುವ ದಾರಿ ಕಾಣದೆ ವಿಷ ಸೇವಿಸಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿಯ ಸೋಮೇಗೌಡ (43) ತಾಯಿ ಹೆಸರಿನಲ್ಲಿದ್ದ ಜಮೀನನ್ನು ಖಾಸಗಿಯವರಿಗೆ ಒತ್ತೆ ಇಟ್ಟು ರು.5 ಲಕ್ಷ ಸಾಲ ಪಡೆದು ಕೊಳವೆ ಬಾವಿ ಕೊರೆಸಿದ್ದರು. 
ಆದರೆ, ಬೆಳೆದ ಕಬ್ಬು ಮತ್ತು ಬಾಳೆಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ನಾಗಪ್ಪ ಪುಂಡಲೀಕ ಕಮತಗಿ (38) ಬ್ಯಾಂಕ್‍ಗಳಲ್ಲಿ ರು. 1.5 ಲಕ್ಷ ಸಾಲ ಮಾಡಿದ್ದರು. ಈ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.