ಜಿಲ್ಲಾ ಸುದ್ದಿ

ಶಿರಸ್ತ್ರಾಣ ಧರಿಸದಿದ್ರೆ 20ರಿಂದ ದಂಡ ಅಸ್ತ್ರ

ಸುರಕ್ಷತೆ ದೃಷ್ಟಿಯಿಂದ ದ್ವಿಚಕ್ರ ವಾಹನ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ನಿಯಮ ಪಾಲಿಸದಿದ್ದರೆ ಚಾಲಕನಿಗೆ ದಂಡ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ...

ಶಿರಸ್ತ್ರಾಣ ಧರಿಸದಿದ್ರೆ 20ರಿಂದ ದಂಡ ಅಸ್ತ್ರ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಸುರಕ್ಷತೆ ದೃಷ್ಟಿಯಿಂದ ದ್ವಿಚಕ್ರ ವಾಹನ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ನಿಯಮ ಪಾಲಿಸದಿದ್ದರೆ ಚಾಲಕನಿಗೆ ದಂಡ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯ ಸರ್ಕಾರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಗರ್ ಆಸ್ಪತ್ರೆಯು ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ (ಸಂಚಾರ) ಪೊಲೀಸ್ ಆಯುಕ್ತ ಎಂ.ಎ.ಸಲೀಂ ಈ ವಿಷಯ ತಿಳಿಸಿದರು.

ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರ ಸಾವು ನೋವುಗಳು ಹೆಚ್ಚಾಗುತ್ತಿದ್ದವು. ಇದೀಗ ಅವರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವುದರಿಂದ ಸವಾರರು ಪ್ರಾಣಾಪಾಯದಿಂದ ಪಾರಾಗಲಿದ್ದಾರೆ. ನಿಯಮ ಜಾರಿಯಾಗಿದ್ದರೂ ಒಂದು ವಾರ ಸವಾರರಲ್ಲಿ ಹೆಲ್ಮೆಟ್ ಕುರಿತು ಅರಿವು ಮೂಡಿಸಲು ನಿರ್ಧರಿಸಿದ್ದು, ಈಗಾಗಲೇ ಚಾಲನೆ ನೀಡಲಾಗಿದೆ. ಜ.20ರಿಂದ ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದೆಂದು ತಿಳಿಸಿದರು.

ನಗರದ ಜನ ಕಾನೂನುಗಳ ಬಗ್ಗೆ ಬಲ್ಲವರಾಗಿದ್ದಾರೆ. ಈ ಹಿಂದೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದಾಗಲೂ ಉತ್ತಮವಾಗಿ ಸ್ಪಂದಿಸಿದ್ದು ನಿಯಮ ಪಾಲಿಸಿದ್ದರು. ಅದೇ ರೀತಿ ಹೆಲ್ಮೆಟ್ ನಿಯಮವನ್ನೂ ಪಾಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ದೆಹಲಿ, ಜೈಪುರ, ಚಂಡೀಗಢ ಮತ್ತಿತರ ನಗರಗಳಲ್ಲಿ ಈಗಾಗಲೇ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುತ್ತಿದ್ದಾರೆ.
 
ಉಷ್ಣಾಂಶ ಏರಿಕೆಯಾದ ಸಂದರ್ಭದಲ್ಲೂ ನಿಯಮ ಪಾಲಿಸುತ್ತಿದ್ದಾರೆ. ಆ ಭಾಗದ ಹವಾಮಾನಕ್ಕೆ ಹೋಲಿಸಿದರೆ ನಗರದಲ್ಲಿ ಉತ್ತಮ ವಾತಾವರಣವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೆದುಳು ಹಾನಿ-ಶಾಶ್ವತ ವಿಕಲತೆ: ಸಾಗರ್ ಆಸ್ಪತ್ರೆಯ ನರರೋಗ ತಜ್ಞ ಡಾ.ಮಧುಸೂದನ್ ಮಾತನಾಡಿ, ಅಪಘಾತಗಳ ಅಂಕಿ-ಅಂಶಗಳ ಪ್ರಕಾರ ದ್ವಿಚಕ್ರ ವಾಹನ ಸವಾರರ ಸಾವಿನ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿದೆ. ವರ್ಷದಿಂದ ವರ್ಷಕ್ಕೆ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ದ್ವಿಚಕ್ರ ವಾಹನ ಅಪಘಾತಗಳಿಂದ ಉಂಟಾಗುವ ಮೆದುಳಿನ ಹಾನಿಯಿಂದ ಶಾಶ್ವತ ವಿಕಲತೆ ಮತ್ತು ದಿಡಿsೀರ್ ಸಾವು ಸಂಭವಿಸುತ್ತದೆ. ದೇಶದಲ್ಲಿ ಪ್ರತಿ ವರ್ಷ 4 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ 2020ಕ್ಕೆ ಅಪಘಾತಗಳಿಂದ 5.46 ಲಕ್ಷ ಮಂದಿ ಮರಣ ಹೊಂದಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂದು ದೇಶದ 1000 ವಾಹನಗಳಿಗೆ 35 ಅಪಘಾತಗಳು ನಡೆಯುತ್ತಿವೆ. ಇದು ಪ್ರಪಂಚದಲ್ಲಿಯೇ ಅಧಿಕ ಸಂಖ್ಯೆಯದ್ದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಸಂಭವಿಸುವ ಅಪಘಾತಗಳಲ್ಲಿ ದಿನಕ್ಕೆ ಒಬ್ಬ ದ್ವಿಚಕ್ರ ವಾಹನ ಸವಾರ ಮೃತಪಡುತ್ತಿದ್ದಾನೆ. ನಗರದಲ್ಲಿ ನಿತ್ಯ ಸಂಚರಿಸುವ ವಾಹನಗಳ ಪೈಕಿ ಶೇ.40ರಿಂದ 70 ರಷ್ಟು ದ್ವಿಚಕ್ರವಾಹನಗಳಾಗಿವೆ. ದ್ವಿಚಕ್ರ ವಾಹನ ಅಪಘಾತದಿಂದ ಮೃತಪಡುವ ನಾಲ್ವರ ಪೈಕಿ ಒಬ್ಬ ಹಿಂಬದಿ ಸವಾರನಾಗಿದ್ದಾನೆ. ಈ ಅಂಕಿ-ಅಂಶಗಳನ್ನು ನೋಡಿದಾಗ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಪ್ರತಿ ವರ್ಷ 1.2 ಮಿಲಿಯನ್ ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟು ಲಕ್ಷಾಂತರ ಮಂದಿ ಗಾಯಗೊಳುತ್ತಿದ್ದಾರೆ. ಅಲ್ಲದೆ, ಅಂಗವೈಕಲ್ಯತೆಗೆ ಒಳಗಾಗುತ್ತಿದ್ದಾರೆ. ನಗರದಲ್ಲಿ 41 ಲಕ್ಷ ದಿಚಕ್ರ ವಾಹನ ಸವಾರರಿದ್ದು, ಕಳೆದ ಸಾಲಿನಲ್ಲಿ ಹೆಲ್ಮೆಟ್ ಧರಿಸದ 17.7 ಲಕ್ಷ ಮಂದಿ ಸವಾರರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದರು.

ಶೇ.20ರಿಂದ 30ರಷ್ಟು ಅಪಘಾತ ಕಡಿಮೆ: ದ್ವಿಚಕ್ರ ವಾಹನ ಅಪಘಾತಗಳಿಂದ ವಿಕಲಚೇತನ ಉಂಟಾಗುತ್ತದೆ. ದೇಹದ ಪ್ರಮುಖ ಭಾಗಗಳು ನಿಷ್ಕ್ರಿಯವಾಗುತ್ತವೆ. ಕೆಲವೊಮ್ಮೆ ಕೇಂದ್ರ ನರ
ವ್ಯವಸ್ಥೆಗೆ ಪೆಟ್ಟು ಬಿದ್ದು ಶಾಶ್ವತ ವಿಕಲತೆ, ಪಾಶ್ರ್ವವಾಯು ಸಂಭವಿಸುತ್ತದೆ. ದೆಹಲಿ ಐಐಟಿಯ ಟ್ರಾನ್ಸ್‍ಪೋರ್ಟ್ ರೀಸರ್ಚ್ ಆ್ಯಂಡ್ ಇನ್‍ಕ್ವೈರಿಯ ಕೋ ಆರ್ಡಿನೇಟರ್ ದಿನೇಶ್ ಮೋಹನ್ ಅವರ ಅಧ್ಯಯನದ ಪ್ರಕಾರ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಬಳಸುವುದರಿಂದ ಶೇ.20ರಿಂದ 30ರಷ್ಟು ಅಪಘಾತಗಳನ್ನು ಕಡಿಮೆ ಮಾಡಬಹುದು. ಹೆಲ್ಮೆಟ್ ಧರಿಸಿದ ಚಾಲಕರಿಗೆ ಹೋಲಿಸಿದರೆ ಹೆಲ್ಮೆಟ್ ಧರಿಸದ ಚಾಲಕರ ಸಾವಿನ ಸಂಭವನೀಯತೆ ಶೇ.2.5 ಪಟ್ಟು ಹೆಚ್ಚಾಗಿರುತ್ತದೆ. ಅತ್ಯಂತ ಕಡಿಮೆ ವೇಗದ ಅಪಘಾತದಿಂದಲೂ ತಲೆಗೆ ಗಾಯವಾಗ
ಬಹುದೆಂದು ಅಧ್ಯಯನ ವರದಿ ಹೇಳಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.