ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳ ಟ್ರ್ಯಾಪ್!
ಹನಿಟ್ರ್ಯಾಪ್ ಆಯ್ತು. ಈಗ ಪ್ರೇಮಿಗಳ ಟ್ರ್ಯಾಪ್! ಇದುವರೆಗೆ ಸಾಮಾಜಿಕ ಜಾಲತಾಣ, ಇಂಟರ್‍ನೆಟ್ ಮೆಸೆಜ್‍ಗಳ ಮೂಲಕ ಪುರುಷರನ್ನು ವಂಚಿಸಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಬಗ್ಗೆ ಕೇಳಿದ್ದೀರಿ...

ಬೆಂಗಳೂರು: ಹನಿಟ್ರ್ಯಾಪ್ ಆಯ್ತು. ಈಗ ಪ್ರೇಮಿಗಳ ಟ್ರ್ಯಾಪ್! ಇದುವರೆಗೆ ಸಾಮಾಜಿಕ ಜಾಲತಾಣ, ಇಂಟರ್‍ನೆಟ್ ಮೆಸೆಜ್‍ಗಳ ಮೂಲಕ ಪುರುಷರನ್ನು ವಂಚಿಸಿ ಸುಲಿಗೆ ಮಾಡುತ್ತಿದ್ದ
ಹನಿಟ್ರ್ಯಾಪ್ ಬಗ್ಗೆ ಕೇಳಿದ್ದೀರಿ.
ಈಗ ಪ್ರೇಮಿಗಳ ಟ್ರ್ಯಾಪ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಬಂಧಿತ ಆರೋಪಿ ಪೊಲೀಸರ ಸೋಗಿನಲ್ಲಿ ಕೇವಲ ಪ್ರೇಮಿಗಳ ಗುರಿಯಾಗಿಸಿಕೊಂಡು, ಅವರಿಂದ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ಹೋಟೆಲ್‍ವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಹರಿನಗರದ ಚುಂಚನಘಟ್ಟ ನಿವಾಸಿ ಗಣೇಶ (29) ಬಂಧಿತ ಆರೋಪಿ. ಅಲ್ಲದೆ, ಈತ ಕಳವು ಮಾಡಿದ್ದ ಚಿನ್ನಾಭರಣದ ವಸ್ತುಗಳನ್ನು ಖರೀದಿಸುತ್ತಿದ್ದ ಸಾರಕ್ಕಿ ನಿವಾಸಿ ಲಿಕ್ಮಾರಾಮ್ ಅಲಿಯಾಸ್ ಲಕ್ಷ್ಮಣ ನನ್ನು ಕೂಡ ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಕುಮಾರ್ ತಿಳಿಸಿದ್ದಾರೆ.
ಏನು ಮಾಡುತ್ತಿದ್ದ?: ಪಾರ್ಕ್‍ಗಳಲ್ಲಿ ವಿಹರಿಸುತ್ತಿ ದ್ದ ಪ್ರೇಮಿಗಳೇ ಈತನ ಗುರಿ. ಪ್ರತಿನಿತ್ಯ ಲಾಲ್‍ಬಾಗ್, ಜಯನಗರ ಸುತ್ತಮುತ್ತಲಿರುವ ಪಾರ್ಕ್‍ಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲಿ ಪುರುಷರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಮಹಿಳೆಯರು ಹಾಗೂ ಯುವತಿಯರನ್ನು ಹಿಂಬಾಲಿಸಿ, ಅವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ. ಅಷ್ಟೇ ಅಲ್ಲ, ಪಾರ್ಕ್‍ನಲ್ಲಿ ಅವರು ಕುಳಿತುಕೊಳ್ಳುತ್ತಿದ್ದ ಭಂಗಿ ಹಾಗೂ ಅಶ್ಲೀಲ ಫೋಟೋಗಳನ್ನು ಸೆರೆ ಹಿಡಿದು, ಸಿಸಿಬಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಎಂದು ಹೇಳಿ ಫೋಟೋ ತೋರಿಸಿ ಬೆದರಿಸುತ್ತಿದ್ದ.
ನಿಮ್ಮ ಬಳಿಯಿರುವ ಚಿನ್ನಾಭರಣ ಕೊಡಬೇಕು. ಇಲ್ಲವಾದಲ್ಲಿ ಮನೆಯವರಿಗೆ ತೋರಿಸುತ್ತೇನೆ ಎಂದು ಹೇಳಿ ಸುಲಿಗೆ ಮಾಡುತ್ತಿದ್ದ. ಆರೋಪಿ ಗಣೇಶ್ ಮೂಲತಃ ಕುಂದಾಪುರ ನಿವಾಸಿ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಹೋಟೆಲೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ನಂತರ ಹೆಚ್ಚು ಹಣ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾನೆ ಎಂದು ಡಿಸಿಪಿ ಲೋಕೇಶ್ ಕುಮಾರ್ ತಿಳಿಸಿದರು.
ಹೀಗೆ ಸುಮಾರು ಒಂದೂವರೆ ವರ್ಷಗಳಿಂದ ಜಯನಗರ, ಬನಶಂಕರಿ, ತ್ಯಾಗರಾಜನಗರ, ಬಸವನಗುಡಿ, ಗಿರಿನಗರ, ಸುಬ್ರಹ್ಮಣ್ಯಪುರ ಸೇರಿದಂತೆ ಇತರೆ ಬಡಾವಣೆಗಳಲ್ಲಿ ತನ್ನ ಕೈಚಳಕ ತೋರಿಸುತ್ತಿದ್ದ.
ನಂತರದ ದಿನಗಳಲ್ಲಿ ಇದನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದ ಈತನ ಕೃತ್ಯದಿಂದ ಹೆದರುತ್ತಿದ್ದ ಮಹಿಳೆಯರು, ಪುರುಷರು ತಮ್ಮ ಬಳಿಯಿದ್ದ ಚಿನ್ನಾಭರಣ ನೀಡಿ, ಕಳ್ಳರು ಸರ ಅಪಹರಿಸಿದ್ದಾರೆ ಎಂದು ದೂರು ದಾಖಲಿಸುತ್ತಿದ್ದರು. ಇಂತಹ ಪ್ರಕರಣಗಳು ನಮಗೆ ತಲೆನೋವಾಗಿತ್ತು.
ಅದಕ್ಕಾಗಿಯೇ ತಂಡ ರಚಿಸಿ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಈ ನಡುವೆ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ಆದರೆ, ಆ ಮಹಿಳೆಯ ವರ್ತನೆಯಲ್ಲಿ ನಮಗೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ನಂತರ ಆರೋಪಿ ಚಹರೆಯನ್ನು ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ರು.9 ಲಕ್ಷ
ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


