ರೇಪ್ ಕಥೆಗೆ ಬಾಲಕಿ ಪ್ರೀತಿ ಕಾರಣವಂತೆ!
ಬೆಳಗ್ಗೆ ನಡೆದ ಅತ್ಯಾಚಾರ ಸಂಜೆ ಪ್ರೇಮ ಪುರಾಣವಾಗಿ ತಿರುವು ಪಡೆದ ಪ್ರಕರಣ ಇದು! ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದೇ ನಂಬಲಾಗಿತ್ತು...

ಸೂಲಿಬೆಲೆ: ಬೆಳಗ್ಗೆ ನಡೆದ ಅತ್ಯಾಚಾರ ಸಂಜೆ ಪ್ರೇಮ ಪುರಾಣವಾಗಿ ತಿರುವು ಪಡೆದ ಪ್ರಕರಣ ಇದು! ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದೇ ನಂಬಲಾಗಿತ್ತು.
ಕಾರಣ, ಆಕೆಯ ಹೇಳಿಕೆಯೇ ಹಾಗಿತ್ತು. ಆದರೆ, ಸಂಜೆಯಾಗುತ್ತಿದ್ದಂತೆ ಸತ್ಯ ಬಯಲಾಗಿದೆ. ಆಗಿದ್ದು ಸಾಮೂಹಿಕ ಅತ್ಯಾಚಾರವಲ್ಲ. ಪ್ರೇಮ ಕಥೆ ಬಯಲಾಗುತ್ತದೆಂಬ ಹೆದರಿಕೆಗೆ
ಆಕೆ ಹೆಣೆದ ಕಟ್ಟು ಕಥೆ ಇದು ಎಂದು! ಈ ಪ್ರಸಂಗ ನಡೆದಿದ್ದು ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯ ಕ್ರಾಸ್ ಸಮೀಪ ನಿರ್ಮಾಣವಾಗುತ್ತಿರುವ ವಿಲ್ಲಾ ಕಾಮಗಾರಿ ಪ್ರದೇಶದಲ್ಲಿ.
ಈಕೆ ಆಂಧ್ರದ ಕುಪ್ಪಂ ಜಿಲ್ಲೆಯ ಕುಟುಂಬದವಳಾಗಿದ್ದು, ಪೋಷಕರು ಕೂಲಿಗಾಗಿ ಇಲ್ಲಿಗೆ ಬಂದಿದ್ದರು.
ಆಗಿದ್ದೇನು?: ಇಲ್ಲಿ ವಿಲ್ಲಾಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರಿಂದ ಕೂಲಿಕಾರ್ಮಿಕರಿಗೆ ಅಲ್ಲೇ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಲಾಗಿತ್ತು. ಆಂಧ್ರ, ಓರಿಸ್ಸಾ ಸೇರಿದಂತೆ ಹಲವು ರಾಜ್ಯಗಳಿಂದ ಕೂಲಿಗಾಗಿ ಇಲ್ಲಿಗೆ ಬಂದಿದ್ದರು. ಈ ವೇಳೆ ಯುವತಿಯ ಪಕ್ಕದ ಶೆಡ್ನಲ್ಲಿ ವಾಸವಾಗಿದ್ದ ಒಡಿಶಾ ಮೂಲದ ಯುವಕನ ಮೇಲೆ ಯುವತಿಗೆ ಪ್ರೀತಿ ಹುಟ್ಟಿದೆ. ಈ ವಿಷಯ
ಮೊದಲು ಪೋಷಕರಿಗೂ ತಿಳಿದಿದ್ದು, ಆಕೆಯನ್ನು ಕರೆದು ಬುದಿಟಛಿ ಹೇಳಿದ್ದಾರೆ. ಒಪ್ಪಿಕೊಂಡಂತೆ ನಾಟಕವಾಡಿದ ಯುವತಿ, ಶೆಡ್ ಬಿಟ್ಟು ಆತನೊಂದಿಗೆ ಓಡಿಹೋಗಲು ನಿಶ್ಚಯ ಮಾಡಿದ್ದಳು. ಇದೇ ನಿರ್ಧಾರದಿಂದ ತನ್ನ ಬಟ್ಟೆ ತೆಗೆದುಕೊಂಡು ಆತನ ಶೆಡ್ಗೂ ಹೋಗುತ್ತಾಳೆ.
ಮಗಳು ಕಾಣದಾದಾಗ ಪೋಷಕರು ಆ ಶೆಡ್ನತ್ತ ಹುಡುಕಿಕೊಂಡು ಬರುವಾಗ ಈಕೆ ಪ್ರಜ್ಞೆ ತಪ್ಪಿ ಬಿದ್ದಿರುತ್ತಾಳೆ. ಎಚ್ಚರವಾದಾಗ ಕೇಳಿದಾಗ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಹೇಳಿದ್ದಾಳೆ.
ಶುರುವಾಯ್ತು ಆತಂಕ!: ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂಬ ಸುದ್ದಿ ಕೇಳಿ ಹೌಹಾರಿದ ಪೋಷಕರು ಆಕೆಯನ್ನು ಸೀದಾ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅಷ್ಟರಲ್ಲಿ ಈ ಸುದ್ದಿ ದೃಶ್ಯ ಮಾಧ್ಯಮಗಳಿಗೆ ಹರಡಿ ಎಲ್ಲೆಡೆ ಬಿತ್ತರಗೊಳ್ಳತೊಡಗುತ್ತದೆ. ಪೊಲೀಸರಿಗೂ ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸುತ್ತಾರೆ. ಅಲ್ಲಿ ಬಾಲಕಿಯನ್ನು ವಿಚಾರಿಸಿದಾಗ ಒಮ್ಮೊಮ್ಮೆ ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದರಿಂದ ಅನುಮಾನ ಮೂಡಿ ವೈದ್ಯರನ್ನು ವಿಚಾರಿಸಲಾಗುತ್ತದೆ. ಆಗ ಪ್ರತಿಕ್ರಿಯೆನೀಡಿದ ವೈದ್ಯರು, ಮೇಲ್ನೋಟಕ್ಕೆ ಅತ್ಯಾಚಾರವಾದ ಯಾವ ಕುರುಹುಗಳೂ ಕಾಣುತ್ತಿಲ್ಲ.
ವೈದ್ಯಕೀಯ ವರದಿ ಬಂದ ಬಳಿಕವೇ ಸತ್ಯ ತಿಳಿಯಲಿದೆ ಎಂದು ತಿಳಿಸಿದಾಗ ಪೊಲೀಸರ ಅನುಮಾನ ಬಲಗೊಳ್ಳುತ್ತದೆ. ಹೀಗಾಗಿ ವಿಚಾರಣೆ ತೀವ್ರಗೊಳಿಸಿದ್ದರಿಂದ ಬಾಲಕಿ ಸತ್ಯ ಹೊರಹಾಕುತ್ತಾಳೆ.
ಅಸಲಿ ಕಥೆ ಏನು?: ``ನಾನು ಪಕ್ಕದ ಶೆಡ್ ನಲ್ಲಿರುವ ಓರಿಸ್ಸಾದ ಯುವಕನನ್ನು ಪ್ರೀತಿಸುತ್ತಿದ್ದೇನೆ. ಆದರೆ, ಇದು ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಓಡಿ ಹೋಗಲು ನಿರ್ಧರಿಸಿ ಆತನ ಶೆಡ್ಗೆ ಹೋದೆ. ಆದರೆ, ಅಷ್ಟರಲ್ಲಿ ನನ್ನ ಪೋಷಕರು ಬಂದಾಗ ಪ್ರಜ್ಞೆ ತಪ್ಪಿದಂತೆ ನಾಟಕವಾಡಿದೆ. ಬಳಿಕ ಅತ್ಯಾಚಾರದ ಕಥೆ ಕಟ್ಟಿದೆ'' ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


