ಅಕ್ರಮ ಹಣ ಸಾಗಣೆ 13 ಮಂದಿ ಬಂಧನ
ನಗರದಲ್ಲಿ ನಡೆಯುತ್ತಿದ್ದ ಬಹುದಡ್ಡ ಹವಾಲ ದಂಧೆಯನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 13 ಮಂದಿಯನ್ನು ಬಂಧಿಸಿದ್ದಾರೆ...

ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಬಹುದಡ್ಡ ಹವಾಲ ದಂಧೆಯನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 13 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ರು.1.18 ಕೋಟಿ, 16 ಮೊಬೈಲ್ ಫೋನ್, 2 ನೋಟು ಎಣಿಕೆ ಯಂತ್ರ, 24 ರಬ್ಬರ್ ಸೀಲು, ಕಂಪ್ಯೂಟರ್ ಸೇರಿ ಕೆಲ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀರಾಂಪುರದ ಆರ್,ಧರ್ಮೇಂದರ್ (42), ಕಾವೇರಿನಗರದ ಚಂಪಾಲಾಲ್ (30), ನಗರ್ತಪೇಟೆಯ ಮಹದೇವಪ್ (22), ಜೀತುಸಿಂಗ್ (18), ಚಿತ್ರದುರ್ಗದ ವಿಕ್ರಮ್ (21), ಸಂಜೀವಿನಿ ನಗರದ ಅರುಣ್ ಎ ಕುಮಾರ್ (36), ಲಗ್ಗೆರೆಯ ಪ್ರಕಾಶ್ (30), ಚಿಕ್ಕಬಳ್ಳಾಪುರದ ಗೋಪಾಲ್ (36), ಹನುಮಂತ ನಗರದ ದಿನೇಶ್ (36), ವೃಷಭಾವತಿ ನಗರದ ಪುರುಷೋತ್ತಮ (45), ತ್ಯಾಗರಾಜನಗರದ ಸುನಿಲ್ (42), ಆರ್ ಟಿ ಸ್ಟ್ರೀಟ್ ನ ಭಗವಾನ್ (30) ಮತ್ತು ಎಟಿ ಸ್ಟ್ರೀಟ್ ನ ಕುನಾಲ್ (34) ಬಂಧಿತ ಆರೋಪಿಗಳು.
ಇವರು ನಗರ್ತ ಪೇಟೆ ಸಿ.ಟಿ.ಸ್ಟ್ರೀಟ್ ನಲ್ಲಿರುವ ಮಹಾವೀರ್ ಬುಲಿಯನ್ಸ್ ಅಂಗಡಿಯಲ್ಲಿ ಅನಧಿಕೃತವಾಗಿ ಹಣ ಸಂಗ್ರಹಿಸಿದ್ದು, ಹವಾಲ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಭೂಗತ ಪಾತಕಿಗಳಿಗೂ ಹಣ ರವಾನೆಯಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಆರೋಪಿಗಳು ಹವಾಲ ದಂಧೆಯಲ್ಲಿ ತೊಡಗಿರುವುದು ಕಂಡು ಬಂದಿದೆ.
ಚಿನ್ನಾಭರಣ ವ್ಯಾಪಾರಿಯೇ ಸೂತ್ರಧಾರ
ಪ್ರಮುಖ ಆರೋಪಿ ಅಂಗಡಿ ಮಾಲೀಕ ಧರ್ಮೇಂಧರ್ ಪ್ರಕರಣದ ಸೂತ್ರಧಾರ. ಈತ ಹವಾಲ ಹಣ ಸ್ವೀಕರಿಸಲು ಚಂಪಾಲಾಲ್ ಎಂಬುವನ ನೇಮಿಸಿಕೊಂಡಿದ್ದ. ಉಳಿದ ಆರೋಪಗಳ ಪೈಕಿ ಕೆಲವರು ನೇರವಾಗಿ ಹವಾಲ ಮೂಲಕ ಹಣ ರವಾನೆ ಮಾಡಲು ಬಂದಿದ್ದರು. ಇನ್ನು ಕೆಲವರು ತಮ್ಮ ಮಾಲೀಕರ ಸೂಚನೆ ಮೇರೆಗೆ ಹಣ ನೀಡಲು ಬಂದಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಧರ್ಮೇಂದರ್ ಚಿನ್ನಾಭರಣ ವ್ಯಾಪಾರಿ ಎಂಬುದಾಗಿ ಬಿಂಬಿಸಿಕೊಂಡಿದ್ದಾನೆ. ಆದರೆ, ಹವಾಲ ದಂಧೆಯಲ್ಲಿ ತೊಡಗಿಸಿಕೊಂಡು ನಾನಾ ರಾಜ್ಯಗಳಿಗೆ ಹಣ ರವಾನೆ ಮಾಡುವ ಜಾಲ ಹೊಂದಿದ್ದಾನೆ. ನಾನು ರವಾನಿಸಬೇಕಾದ ಸ್ಥಳದ ಅನುಗುಣವಾಗಿ ಪ್ರತಿ ಲಕ್ಷಕ್ಕೆ ರು.300ರಿಂದ ರು.400 ಕಮಿಷನ್ ಪಡೆಯುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


