ಹಾಳಾಗುತ್ತಿರುವ ಕೆರೆಗಳನ್ನು ರಕ್ಷಿಸಿ
ಬೆಂಗಳೂರಿನ ಕೆರೆಗಳು ಇತ್ತೀಚೆಗೆ ಹಾಳಾಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಉಪಾಧ್ಯಕ್ಷ ಎಸ್.ಎಂ. ಜೈಕರ್ ಹೇಳಿದರು...

ಬೆಂಗಳೂರು: ಬೆಂಗಳೂರಿನ ಕೆರೆಗಳು ಇತ್ತೀಚೆಗೆ ಹಾಳಾಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಉಪಾಧ್ಯಕ್ಷ ಎಸ್.ಎಂ. ಜೈಕರ್ ಹೇಳಿದರು.
ನಮ್ಮ ಬೆಂಗಳೂರು ಫೌಂಡೇಷನ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಒಂದು ವೇಳೆ ನಗರದಲ್ಲಿರುವ ಕೆರೆಗಳು ಬತ್ತಿ ಹೋದರೆ, ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆ ಎಂದು ಎಲ್ಲರೂ ಮನಗಾಣಬೇಕು. ಈ ನಿಟ್ಟಿನಲ್ಲಿ ಕೆರೆಗಳನ್ನು ರಕ್ಷಣೆ ಮಾಡಬೇಕು ಎಂದರು. ಕಲೆಗೆ ಅದರಲ್ಲೂ ಚಿತ್ರಕಲೆಗೆ ತನ್ನದೇ ಆದ ಶಕ್ತಿಯಿದೆ. ಇದರಿಂದ ಉತ್ತಮ ಭವಿಷ್ಯವಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡಿ, ಕಲೆ ಕಲೆಯಾಗಿಯೇ ಉಳಿಸಿದೆ. ಅದನ್ನು ವಿಬಿsನ್ನ ರೀತಿಯಲ್ಲಿ ಪ್ರಸ್ತುತಪಡಿಸುವ ದಾರಿಯನ್ನು ಕಂಡುಕೊಳ್ಳಬೇಕು ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು. 40 ವರ್ಷಗಳ ಹಿಂದೆ ಇದೇ ಸ್ಯಾಂಕಿ ಟ್ಯಾಂಕಿ ಕೆರೆ ಬಳಿ ನಾಟಕ ತಯಾರಿ ಮಾಡುತ್ತಿದ್ದೆವು. ಅಂದು ಸಮೃದ್ಧವಾಗಿದ್ದ ಕೆರೆ ಎಲ್ಲರನ್ನು ಪೊೀಷಣೆ ಮಾಡುತ್ತಿತ್ತು. ಆದರೆ, ಇಂದು ನಾವು ಈ ಕೆರೆಯನ್ನು ಪೋಷಣೆ ಮಾಡದಿರುವುದು ದುಃಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 170ಕ್ಕೂ ಹೆಚ್ಚು ಜನ ಕಲಾವಿದರು ಭಾಗವಹಿಸಿದ್ದರು. ವೇದಿಕೆಯಲ್ಲಿ ಎಸ್‍ಪಿಡಬ್ಲ್ಯೂಎ ಉಪಾಧ್ಯಕ್ಷ ಮಲ್ಲಪ್ಪ ಸುಲ್ ದಾಳ್, ರಮೇಶ್ ಶಿವರಾಂ, ಛಾಯಾಗ್ರಾಹಕ ಮಯೂರ್ ಚನ್ನಗೆರೆ, ಅಶ್ವತ್ಥನಾರಾಯಣ್, ನಮ್ಮ ಬೆಂಗಳೂರು ಫೌಂಡೇಷನ್ ಸಿಇಒ ಶ್ರೀಧರ್ ಪಬ್ಬಿಶೆಟ್ಟಿ ಮತ್ತಿತರರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


