ತರಕಾರಿ ಬೆಲೆ ಏರಿಕೆ. ಗ್ರಾಹಕರ ಜೇಬಿಗೆ ಕತ್ತರಿ
ಹಾಲಷ್ಟೇ ಅಲ್ಲ, ತರಕಾರಿ ಬೆಲೆಯೂ ಏರಿದೆ. ಅಲ್ಲದೇ ಮೂರು ತಿಂಗಳಿಂದ ತರಕಾರಿ ಬೆಲೆ ಹೆಚ್ಚುತ್ತಲೇ ಇದೆ. ಪರಿಣಾಮ ಇನ್ನು ಕೆಲವೇ ದಿನಗಳಲ್ಲಿ ಊಟ ತಿಂಡಿ ....

ಬೆಂಗಳೂರು: ಹಾಲಷ್ಟೇ ಅಲ್ಲ, ತರಕಾರಿ ಬೆಲೆಯೂ ಏರಿದೆ. ಅಲ್ಲದೇ ಮೂರು ತಿಂಗಳಿಂದ ತರಕಾರಿ ಬೆಲೆ ಹೆಚ್ಚುತ್ತಲೇ ಇದೆ. ಪರಿಣಾಮ ಇನ್ನು ಕೆಲವೇ ದಿನಗಳಲ್ಲಿ ಊಟ ತಿಂಡಿ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆಯಿದೆ. ಸಗಟು ವ್ಯಾಪಾರದಲ್ಲಿ ರು. 25 ಇದ್ದ ಟಮೊಟೋ ಬೆಲೆ ರು.60 ತಲುಪಿದೆ. ಕೆ.ಆರ್ ಮಾರುಕಟ್ಟೆಗೆ ಬರುತ್ತಿರುವ ಟಮೊಟೊ ಪ್ರಮಾಣ ಕಡಿಮೆಯಾಗಿದ್ದು ದಿಢೀರ್ ಬೆಲೆ ಏರಿಕೆಗೆ ಕಾರಣವಾಗಿದೆ. ಚಿಲ್ಲರೆ ಮಾರಾಟಗಾರರು ರು. 70 ವರಗೊ ಮಾರಾಟ ಮಾಡುತ್ತಿದ್ದಾರೆ, ತಮಿಳುನಾಡಿನಲ್ಲಿ ಇತ್ತೀಚೆಗೆ ನೆರೆ ಬಂದ್ದಿದ ಕಾರಣ ಅಲ್ಲಿನ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.
ಹಾಗೆಯೇ ಕರ್ನಾಟಕದಲ್ಲಿ ಒಂದು ತಿಂಗಳ ಹಿಂದೆ ಬಂದಿದ್ದ ಮಳೆಯಿಂದಾಗಿ ರೈತರು ಅಂದುಕೊಂಡಷ್ಟು ತರಕಾರಿ ಬೆಳೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಬೆಳೆದ ಅರ್ಧಭಾಗಕ್ಕಿಂತ ಹೆಚ್ಚಿನದನ್ನು ತಮಿಳುನಾಡಿಗೆ ಕಳುಹಿಸಲಾಗಿದೆ.ಅಲ್ಲಿಯೂ ಬೆಳೆ ಸಂಪೂರ್ಣ ನಾಶವಾಗಿದೆ.
ಜೊತೆಗೆ ನಿರೀಕ್ಷಿತ ಮಟ್ಟದಲ್ಲಿ ತರಕಾರಿ ಬೆಂಗಳೂರಿಗೆ ಬಾರದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಈಗಾಗಲೇ ನಾಸಿಕ್‍ನಿಂದ ಟೊಮೆಟೋ ಕ್ಯಾರೆಟ್ ನಮ್ಮ ರಾಜ್ಯಕ್ಕೆ ಬರುತ್ತಿದೆ ಹಾಗೆಯೇ ಬೀನ್ಸ್, ಸೌತೆಕಾಯಿ, ಬೆಂಡೆಕಾಯಿ, ಕ್ಯಾರೆಟ್ ದರದಲ್ಲಿ ಸಾಕಷ್ಟು ಏರಿಕೆ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


