ಜಿಲ್ಲಾ ಸುದ್ದಿ

ದರೋಡೆ: ಇಬ್ಬರು ಪಾಕಿಸ್ತಾನಿಯರ ಬಂಧನ

ಅರಬ್ ರಾಷ್ಟ್ರಗಳಿಗೆ ತೆರಳುವ ಭಟ್ಕಳಿಗರನ್ನು ದರೋಡೆ ಮಾಡುತ್ತಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಸಂಬಂಧ ಇಬ್ಬರು ಪಾಕಿಸ್ತಾನೀಯರನ್ನು ದುಬೈ...

ದರೋಡೆ: ಇಬ್ಬರು ಪಾಕಿಸ್ತಾನಿಯರ ಬಂಧನ
ಸಾಂದರ್ಭಿಕ ಚಿತ್ರ
Published On :

ಭಟ್ಕಳ: ಅರಬ್ ರಾಷ್ಟ್ರಗಳಿಗೆ ತೆರಳುವ ಭಟ್ಕಳಿಗರನ್ನು ದರೋಡೆ ಮಾಡುತ್ತಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಸಂಬಂಧ ಇಬ್ಬರು ಪಾಕಿಸ್ತಾನೀಯರನ್ನು ದುಬೈ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಭಟ್ಕಳದ ಹಲವು ಚಿನ್ನದ ವ್ಯಾಪಾರಿಗಳು ಮೊದಲಿನಿಂದಲೂ ಸೌದಿ ಅರೇಬಿಯಾ, ದುಬೈನಂಥ ಅರಬ್ ರಾಷ್ಟ್ರಗಳನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಿನ್ನ ಖರೀದಿಸಲು ಹಣ ಹಿಡಿದು ಸಾಗುವ ಭಟ್ಕಳಿಗರಿಗೆ ದರೋಡೆಯ ಆತಂಕ ಕಾಡಲು ಶುರುವಾಗಿದೆ. ಈಗಾಗಲೇ 7-8 ದರೋಡೆ ಪ್ರಕರಣಗಳು ದಾಖಲಾಗಿದ್ದು, ಕೋಟ್ಯಂತರ ರುಪಾಯಿ ದರೋಡೆಕೋರರ ಪಾಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದೊಂದು ವಾರದ ಹಿಂದೆ ದರೋಡೆಕೋರರಿಬ್ಬರು ಸಿಕ್ಕಿಬಿದ್ದಿದ್ದು, ಆರೋಪಿಗಳು ಅರಬ್ ವೇಷದಲ್ಲಿದ್ದ ಪಾಕಿಸ್ತಾನೀಯರು ಎಂಬುದು ಖಚಿತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.