ಕಲೆಯ ಕಾರು ಬಾರಿಗೆ ಕುಮಾರಕೃಪಾ ರಸ್ತೆ ಸಜ್ಜು
ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿವರ್ಷ ನಡೆಸುವ ಚಿತ್ರಸಂತೆಯು ಈ ಸಲ ಭಾನುವಾರ ಇಡೀ ದಿನ ನಡೆಯಲಿದೆ. ಈ ಸಂತೆಯಲ್ಲಿ ಗಣ್ಯರು, ಖ್ಯಾತ ಕಲಾವಿದರು ಸೇರಿದಂತೆ ಭಾರಿ...

ಚಿತ್ರಸಂತೆಗೆ ಸಿಎಂ ಚಾಲನೆ ಇಂದು; ಸಂಜೆ 7ರ ತನಕ ಸಂಚಾರ ನಿರ್ಬಂಧ
50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ 60ಕ್ಕೂ ಹೆಚ್ಚು ಸಿಸಿ ಕ್ಯಾಮರಾ
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿವರ್ಷ ನಡೆಸುವ ಚಿತ್ರಸಂತೆಯು ಈ ಸಲ ಭಾನುವಾರ ಇಡೀ ದಿನ ನಡೆಯಲಿದೆ. ಈ ಸಂತೆಯಲ್ಲಿ ಗಣ್ಯರು, ಖ್ಯಾತ ಕಲಾವಿದರು
ಸೇರಿದಂತೆ ಭಾರಿ ಸಂಖ್ಯೆ ಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಈ ಸಂತೆಯು ಶಿವಾನಂದ ಸರ್ಕಲ್ ನಿಂದ ವಿಂಡ್ಸರ್ ಮಾ್ಯನರ್ ಹೋಟೆಲ್ ವೃತ್ತದವರೆಗೆ ನಡೆಯಲಿದೆ. ಬೆಳಗ್ಗೆ 8ರಿಂದಲೇ ಚಿತ್ರಸಂತೆ ಆರಂಭವಾಗುತ್ತದೆ. 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮ ಯ್ಯ ಅವರು ಸಾಂಪ್ರದಾಯಿಕವಾಗಿ ಚಿತ್ರಸಂತೆಉದ್ಘಾಟಿಸುವರು. ಸಂತೆಯು ರಾತ್ರಿ 8ರವರೆಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಕುಮಾರಕೃಪಾ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಈ ರಸ್ತೆಯಲ್ಲಿ ಎಲ್ಲ ಮಾದರಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ಅಂತೆಯೇ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತಾತ್ಕಾಲಿಕವಾಗಿ ಬದಲಿ ಮಾರ್ಗ ಸೂಚಿಸಲಾಗಿದೆ. ಸಂತೆ ಮುಗಿದ ಕೂಡಲೇ ಎಲ್ಲ ಕಲಾವಿದರನ್ನೊಳಗೊಂಡಂತೆ `ಸ್ವಚ್ಛಭಾರತ ಅಭಿಯಾನ'ದ ಶೀರ್ಷಿಕೆಯಡಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಮಾರ್ಗ ಬದಲು: ಮೆಜೆಸ್ಟಿಕ್‍ನಿಂದ ಬಳ್ಳಾರಿ ರಸ್ತೆ ಕಡೆಗೆ ಸಾಗುವ ಬಿಎಂಟಿಸಿ ಮತ್ತು ಕೆಎಸ್‍ಆರ್ ಟಿಸಿ ಬಸ್‍ಗಳು ರೇಸ್‍ವ್ಯೂ ಜಂಕ್ಷನ್‍ನಿಂದ ಮುಂದೆ ಸಾಗಿ ಟ್ರಿಲೈಟ್ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ ಪೊಲೀಸ್ ಠಾಣೆ
ಜಂಕ್ಷನ್, ವಿಂಡ್ಸರ್ ಮಾ್ಯನರ್ ಜಂಕ್ಷನ್ ಮೂಲಕ ಬಳ್ಳಾರಿ ರಸ್ತೆ ಸೇರಬೇಕು.
ಇದೇ ಮಾರ್ಗದಲ್ಲಿ ಸಂಚರಿಸುವ ಲಘು ವಾಹನಗಳು ಶಿವಾನಂದ ವೃತ್ತದಲ್ಲಿ ಎಡ ತಿರುವು ಪಡೆದು ನೆಹರು ವೃತ್ತದಲ್ಲಿ ಯು ಟರ್ನ್ ಪಡೆದು ರೈಲ್ವೆ ಪ್ಯಾರಲಲ್ ರಸ್ತೆ, ಬಿಡಿಎ ಫ್ಲೈ ಓವರ್ ಮೂಲಕ ಬಳ್ಳಾರಿ ರಸ್ತೆಗೆ ಸಾಗಬೇಕು. ಬಳ್ಳಾರಿ ರಸ್ತೆ ಕಡೆಯಿಂದ ಮೆಜೆಸ್ಟಿಕ್ ಮತ್ತು ಕೆ.ಆರ್.ಮಾರ್ಕೆಟ್ ಕಡೆಗೆ ಸಾಗುವ ವಾಹನಗಳು ವಿಂಡ್ಸರ್ ಮಾ್ಯನರ್ ವೃತ್ತ, ಹಳೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್, ಎಲ್‍ಆರ್‍ಡಿಇ ಜಂಕ್ಷನ್‍ನಲ್ಲಿ ಬಲತಿರುವು ಪಡೆದು ಬಸವೇಶ್ವರ ವೃತ್ತದ ಮೂಲಕ ಸಾಗಬೇಕೆಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ಚಿತ್ರಸಂತೆಗೆ ಪಾರ್ಕಿಂಗ್ ವ್ಯವಸ್ಥೆ
- ಶಿವಾನಂದ ವೃತ್ತ ಪ್ರವೇಶಿಸಿದರೆ ಗಾಂಧಿಭವನ ಎದುರಿನಲ್ಲಿರುವ ಭಾರತೀಯ ಸೇವಾದಳ ಮೈದಾನ
- ಕುಮಾರಪಾರ್ಕ್ ಈಸ್ಟ್ ಭಾಗದ ಗುರುರಾಜ್ ಕಲ್ಯಾಣ ಮಂಟಪ ಎದುರಿನ ಕ್ರೆಸೆಂಟ್ ರಸ್ತೆ
- ಮಾಧವ ನಗರದ ಕೆಲವು ರಸ್ತೆಗಳಲ್ಲಿ
- ಬೆಳಗ್ಗೆ 8 ರಿಂದಲೇ ಚಿತ್ರಸಂತೆ ಆರಂಭವಾದರೆ ರಾತ್ರಿ 8ರವರೆಗೆ ನಿರಂತರವಾಗಿ ನಡೆಯುತ್ತದೆ
- ಈ ವರ್ಷದಿಂದ ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ 5 ಕಲಾವದಿರಿಗೆ `ಚಿತ್ರಕಲಾ ಸಮಾ್ಮನ್' ಪ್ರದಾನ
- ಇಡೀ ದಿನ ಗಣೇಶ್ ದೇಸಾಯ್, ಕೆ.ಸಿ. ರಮೇಶ್ ಮತ್ತಿತರ ಕಲಾವಿದರಿಂದ ಪರಿಷತ್ ಆವರಣದಲ್ಲಿ ಸಂಗೀತ ರಸಸಂಜೆ
- ವಯಸ್ಸಾದವರು, ವಿಕಲಚೇತನರು ಹಾಗೂ ವಿಶೇಷ ಅತಿಥಿಗಳಿಗೆ ಚಿತ್ರ ಸಂತೆ ನೋಡಲು ವಿಶೇಷ ವಾಹನ. (4 ವಾಹನಗಳಿರುತ್ತವೆ.)
- ತಿಂಡಿ ಇತರೆ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ವಿಶೇಷ ಮಳಿಗೆ
- ತಾತ್ಕಾಲಿಕ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ
- ಮೆಡಿಕಲ್ ವ್ಯವಸ್ಥೆ, ಆ್ಯಂಬುಲೆನ್ಸ್ ಇರುತ್ತೆ.
- ರು.100 ನಿಂದ ರು.1 ಲಕ್ಷ ಮೇಲ್ಪಟ್ಟುವರೆಗೆ ಚಿತ್ರಗಳ ಮಾರಾಟ
- ಶಿವಾನಂದ ವೃತ್ತದ ಸಮೀಪದಿಂದ ವಿಂಡ್ಸರ್ ಮಾ್ಯನರ್ ಸೇತುವೆವ
- ರೆಗೆ 1,000 ಮಳಿಗೆಗಳ ವ್ಯವಸ್ಥೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


