ಸಜ್ಜನರಾವ್ ವೃತ್ತದಲ್ಲಿ 7ರಿಂದ ಅವರೆ ಮೇಳ
ಜನರ ಬಾಯಲ್ಲಿ ನೀರೂರಿಸುವ ಅವರೆ ಮೇಳ ಜ.7ರಿಂದ 24ರವರೆಗೆ ಸಜ್ಜನ್ ರಾವ್ ವೃತ್ತ ದಲ್ಲಿ ನಡೆಯಲಿದೆ. ಅವರೆಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳು ಜನರನ್ನು ಬರಸೆಳೆಯಲಿದೆ...

ಬೆಂಗಳೂರು: ಜನರ ಬಾಯಲ್ಲಿ ನೀರೂರಿಸುವ ಅವರೆ ಮೇಳ ಜ.7ರಿಂದ 24ರವರೆಗೆ ಸಜ್ಜನ್ ರಾವ್ ವೃತ್ತ ದಲ್ಲಿ ನಡೆಯಲಿದೆ. ಅವರೆಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳು ಜನರನ್ನು ಬರಸೆಳೆಯಲಿದೆ.
ಈ ಬಾರಿ ಹಿತಕಬೇಳೆ ಕಷಾಯ ಹೊಸ ಬಗೆಯದಾಗಿದೆ. ಸುಮಾರು 500ಜನ ರೈತರು ನೇರವಾಗಿ ಪಾಲ್ಗೊಳ್ಳಲಿದ್ದಾರೆ. ಮೇಳವನ್ನು ಶಾಸಕ ಆರ್.ವಿ. ದೇವರಾಜ್ ಉದ್ಘಾಟಿಸಲಿದ್ದು, ಸಚಿವ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ಬಿಬಿಎಂಪಿ ಸದಸ್ಯೆ ವಾಣಿ ವಿ ರಾವ್, ಸಮಾಜ ಸೇವಕಿ ಮಮತಾ ದೇವರಾಜ್ ನಟ ಯಶ್, ಪ್ರಜ್ವಲ್ ದೇವರಾಜ್ ಆಗಮಿಸಲಿದ್ದಾರೆ. ಅವರೆ ಬೆಳೆಗಾರರಿಗೆ ಅನುಕೂಲ ಮಾಡುವ ಉದ್ದೇಶದಿಂದ ಮೇಳ ಆರಂಭಿಸಿದ್ದೇವೆ ಎಂದು ಗೀತಾ ಶಿವಕುಮಾರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


