ಕಬ್ಬನ್ ಆಸ್ತಿ ಕಾವಲಿಗೆ ಸಮಿತಿ
ಕಬ್ಬನ್ ಉದ್ಯಾನ ಆಸ್ತಿ ಕಾವಲಿಗೆ ರಾಜ್ಯ ಸರ್ಕಾರ ಕಣ್ಗಾವಲಿಡಲು ಮುಂದಾಗಿದೆ. ಈ ಪ್ರದೇಶದಲ್ಲಿ ಒತ್ತುವರಿ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಉದ್ಯಾನದ ಸುತ್ತಲಿರುವ ಕಟ್ಟಡ ನಿರ್ಮಾಣ ಅಥವಾ ನವೀಕರಣಕ್ಕೆ ಸರ್ಕಾರದ ಉನ್ನತ ಮಟ್ಟದ ಸಮಿತಿಯ ಪೂರ್ವಾನುಮತಿ...

ಬೆಂಗಳೂರು: ಕಬ್ಬನ್ ಉದ್ಯಾನ ಆಸ್ತಿ ಕಾವಲಿಗೆ ರಾಜ್ಯ ಸರ್ಕಾರ ಕಣ್ಗಾವಲಿಡಲು ಮುಂದಾಗಿದೆ. ಈ ಪ್ರದೇಶದಲ್ಲಿ ಒತ್ತುವರಿ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಉದ್ಯಾನದ ಸುತ್ತಲಿರುವ ಕಟ್ಟಡ ನಿರ್ಮಾಣ ಅಥವಾ ನವೀಕರಣಕ್ಕೆ ಸರ್ಕಾರದ ಉನ್ನತ ಮಟ್ಟದ ಸಮಿತಿಯ ಪೂರ್ವಾನುಮತಿ ಕಡ್ಡಾಯ ಎಂದು ತೋಟಗಾರಿಕೆ ಇಲಾಖೆ ಆದೇಶಿಸಿದೆ.
ತೋಟಗಾರಿಕೆ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕಬ್ಬನ್ ಆವರಣದಲ್ಲಿ ಯಾವುದೇ
ಹೊಸ ನವೀಕರಣ ಅಥವಾ ಕಾಮಗಾರಿಗೆ ಸಮಿತಿಯ ಅನುಮತಿ ಕಡ್ಡಾಯ. ಕಳೆದ ಜುಲೈನಲ್ಲಿ ಕಬ್ಬನ್ ಪಾರ್ಕ್ ನಡಿಗೆ ದಾರರ ಸಂಘ ಯವನಿಕಾ, ಐಎಂಸಿಎ ಅಕ್ರಮ ಭೂ ಒತ್ತುವರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಆಡಿಯರಿಗೆ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈಗಾಗಲೇ ಪುನರ್ ಸಮೀಕ್ಷೆ ನಡೆಸಿದೆ.
ಕಬ್ಬನ್ ವ್ಯಾಪ್ತಿಯ ಜಾಗ ವನ್ನು ಭೂಗಳ್ಳರಿಂದ ರಕ್ಷಿಸುವುದು ಸರ್ಕಾರದ ನಿಲುವಾಗಿದೆ. ಮೂರು ತಿಂಗಳ ಹಿಂದೆ ಕಬ್ಬನ್ ವ್ಯಾಪ್ತಿಗೆ ಸೇರದ ಹಲವಾರು ಕಟ್ಟಡಗಳ ಪಟ್ಟಿ ತಯಾರಿಸಿ ಅವುಗಳನ್ನು ವ್ಯಾಪ್ತಿಯಿಂದ ಕೈ ಬಿಡಲಾಗಿದೆ. ಇಂತಹ ಕಟ್ಟಡಗಳ ಯಾವುದೇ ಕಾಮಗಾರಿ, ನವೀಕರಣಗಳಿದ್ದರೂ ಸಮಿ ತಿಯ ಅನುಮತಿ ಪಡೆಯಲೇಬೇಕು. ಉದ್ಯಾನ ವ್ಯಾಪ್ತಿ ಯಿಂದ ಹೊರಗಿಟ್ಟಿರುವ ಕಟ್ಟಡಗಳೆಂದರೆ, ಹೈಕೋರ್ಟ್ ಕಟ್ಟಡ, ಹಳೆಯ ಕೆಜಿಐಡಿ ಕಟ್ಟಡ, ಹಳೆಯ ಚುನಾವಣಾಧಿಕಾರಿಗಳ ಕಚೇರಿ, ಜಿಪಿಒ, ವಿಶ್ವೇಶ್ವರಯ್ಯ ಕಟ್ಟಡ, ಬಾಲಭವನ,
ತೋಟಗಾರಿಕೆ ಇಲಾಖೆ ಡಿಡಿಎಚ್ ಕಚೇರಿ ಸೇರಿ ಒಟ್ಟು 27 ಕಟ್ಟಡಗಳು . ಕಬ್ಬನ್ ಉದ್ಯಾನ 245.31 ಎಕರೆಯಿಂದ 167.17 ಎಕರೆಗೆ ಸೀಮಿತವಾಗಿದೆ. ಕಬ್ಬನ್ ಉದ್ಯಾನದಲ್ಲಿ 27 ಕಟ್ಟಡಗಳು 92.1 ಎಕರೆ ಯಲ್ಲಿ ವ್ಯಾಪಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


