ಜಿಲ್ಲಾ ಸುದ್ದಿ

ಕೆರೆಯಲ್ಲಿ ಮುಳುಗಿ ಬಾಲಕರಿಬ್ಬರು ಸಾವು

ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ...

ಕೆರೆಯಲ್ಲಿ ಮುಳುಗಿ ಬಾಲಕರಿಬ್ಬರು ಸಾವು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಕೆಂಪಾಪುರದ ರೋಹಿತ್ (16) ಮತ್ತು ರಿಶಿಕೇಷ್ (16) ಮೃತಪಟ್ಟವರು, ರಾಚೇನಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದಾಗ ಈ ಘಟನೆ ನಡೆದಿದ್ದು, ಹೃಷಿಕೇಶ್ ನ ಸಹೋದರ ಅಭಿಷೇಕ್ ಹಾಗೂ ಸಂಬಂಧಿ ರಾಘವೇಂದ್ರ ಅಪಾಯದಿಂದ ಪಾರಾಗಿದ್ದಾರೆ.

ನಗರದ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ಬಾಲಕರು ಶುಕ್ರವಾರ ಶಾಲೆಗೆ ಚಕ್ಕರ್ ಹಾಕಿ ಮನೆಯಲ್ಲೇ ಉಳಿದಿದ್ದರು. ಈ ವೇಳೆ ನಾಲ್ವರು ಸೇರಿಕೊಂಡು ಕೆರೆಗ ಈಜಲು ಹೋಗಲು ತೀರ್ಮಾನಿಸಿದ್ದರು. ಬಳಿಕ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಮನೆಯವರಿಗೆ ತಿಳಿಸಿ ಮಧ್ಯಾಹ್ನ ಮನೆಯಿಂದ ಹೊರಬಿದ್ದರು.

ಸೀದಾ ರಾಚೇನಹಳ್ಳಿ ಕೆರೆಗೆಯತ್ತ ತಮ್ಮ ಪ್ರಯಾಣ ಮುಂದುವರಿಸಿದ್ದರು. ಕೆರೆಯಲ್ಲಿ ಈಜು ನಿಷೇಧಿಸಿದ್ದರೂ ಕಳ್ಳ ಮಾರ್ಗದಲ್ಲಿ ಕೆರೆ ದಡ ಪ್ರವೇಶಿಸಿದ್ದಾರೆ. ಈ ವೇಳೆ ರೋಹಿತ್ ಮತ್ತು ರಿಶಿಕೇಷ್ ಬಟ್ಟೆ ಬಿಟ್ಟಿಟ್ಟು ನೀರಿಗೆ ಇಳಿದ್ದರು. ಉಳಿದಿಬ್ಬರು ದಡದಲ್ಲಿ ನಿಂತು ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿಯುತ್ತಿದ್ದರು. ಈವೇಳೆ ರೋಹಿತ್ ಮತ್ತು ರಿಶಿಕೇಷ್ ಕೊಂಚ ಮುಂದೆ ಸಾಗಿದಾಗ ಆಳವಾದ ಜಾಗದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ದಡದ ಮೇಲಿದ್ದ ಉಳಿದಿಬ್ಬರು, ಇವರು ನೀರಿನಲ್ಲಿ ಮುಳುಗುವುದನ್ನು ಕಂಡು ಕೂಗಾಡಿದ್ದಾರೆ. ಕೂಡಲೇ ಕೆಲ ಸ್ಥಳೀಯರು ಕೆರೆ ಬಳಿಗೆ ಆಗಮಿಸಿದ್ದಾರೆ. ಆ ವೇಳೆಗಾಗಲೇ ಬಾಲಕರಿಬ್ಬರು ಕೆರೆಗೆ ಹಾರವಾಗಿದ್ದರು. ಬಳಿಕ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಬಾಲಕರ ಶವ ಹೊರ ತೆಗಿದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.