ಜಿಲ್ಲಾ ಸುದ್ದಿ

ಬಿಡದಿಯಲ್ಲಿ ಕಾಣೆಯಾಗಿದ್ದ ಮಕ್ಕಳು ಮೆಜೆಸ್ಟಿಕ್'ನಲ್ಲಿ ಸಿಕ್ಕರು

ಬಿಡದಿಯಲ್ಲಿ 6 ಮಕ್ಕಳನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದ ಪ್ರಕರಣವೀಗ ಹೊಸ ತಿರುವನ್ನು ಪಡೆದುಕೊಂಡಿದ್ದು, ಕಾಣೆಯಾಗಿದ್ದ 6 ಮಕ್ಕಳೂ ನಗರದ ಮೆಜೆಸ್ಟಿಕ್ ನಲ್ಲಿ ಶನಿವಾರ ರಾತ್ರಿ ಸಿಕ್ಕಿದ್ದಾರೆ...

ಬಿಡದಿಯಲ್ಲಿ ಕಾಣೆಯಾಗಿದ್ದ ಮಕ್ಕಳು ಮೆಜೆಸ್ಟಿಕ್'ನಲ್ಲಿ ಸಿಕ್ಕರು
ಬಿಡದಿಯಲ್ಲಿ ಕಾಣೆಯಾಗಿದ್ದ ಮಕ್ಕಳು ಮೆಜೆಸ್ಟಿಕ್'ನಲ್ಲಿ ಸಿಕ್ಕರು (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಬಿಡದಿಯಲ್ಲಿ 6 ಮಕ್ಕಳನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದ ಪ್ರಕರಣವೀಗ ಹೊಸ ತಿರುವನ್ನು ಪಡೆದುಕೊಂಡಿದ್ದು, ಕಾಣೆಯಾಗಿದ್ದ 6 ಮಕ್ಕಳೂ ನಗರದ ಮೆಜೆಸ್ಟಿಕ್ ನಲ್ಲಿ ಶನಿವಾರ ರಾತ್ರಿ ಸಿಕ್ಕಿದ್ದಾರೆ.

ಫೆ.4 ರಂದು ಬಿಡದಿಯ 6 ಮಕ್ಕಳು ಕಾಣೆಯಾಗಿದ್ದಾರೆಂದು ಹೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಣೆಯಾದ ಮಕ್ಕಳನ್ನು ದರ್ಶನ್, ಕಿಶಾನ್, ಚಂದ್ರಶೇಖರ್, ಸೂರ್ಯ, ವೇದಶ್ರೀ ಮತ್ತು ಹೇಮಾವತಿ ಎಂದು ಹೇಳಲಾಗುತ್ತಿತ್ತು.

ಘಟನೆ ಕುರಿತಂತೆ ಮಾಹಿತಿ ನೀಡಿರುವ ಅಧಿಕಾರಿಗಳು, ಫೆ.4 ಮಕ್ಕಳು ಟ್ಯೂಷನ್ ಹೋಗುತ್ತೀವೆಂದು ಪೋಷಕರಿಗೆ ಹೇಳಿ ಮನೆಯಿಂದ ಹೋಗಿದ್ದಾರೆ. ನಂತರ ಮನೆಗೆ ಹಿಂದಿರುಗಿಲ್ಲ. ಮಕ್ಕಳು ಎಷ್ಟು ಹೊತ್ತಾದರೂ ಹಿಂದುರಿಗಿ ಬಾರದಿರುವುದರಿಂದ ಭಯಭೀತರಾದ ಪೋಷಕರು ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.

ನಂತರ ತನಿಖೆ ಆರಂಭಿಸಲಾಗಿತ್ತು. ತನಿಖೆ ವೇಳೆ ಎಲ್ಲಾ ಮಕ್ಕಳು ಮೆಜೆಸ್ಟಿಕ್ ನಲ್ಲಿರುವುದಾಗಿ ಮಾಹಿತಿ ತಿಳಿದುಬಂದಿತು. ನಂತರ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಯಿತು ಎಂದು ಹೇಳಿದ್ದಾರೆ.

ಮನೆ ಬಿಟ್ಟಿದ್ದ ಮಕ್ಕಳು ತಮ್ಮ ಬಳಿಯಿದ್ದ ಎಲ್ಲಾ ಹಣವನ್ನು ಖರ್ಚು ಮಾಡಿದ್ದಾರೆ. ನಂತರ ಮಕ್ಕಳು ಮೆಜೆಸ್ಟಿಕ್ ನಲ್ಲಿ ನಿಂತಿರುವುದನ್ನು ಕಂಡ ಬಸ್ ಕಾರ್ಯನಿರ್ವಾಹಕನೊಬ್ಬ ಮಕ್ಕಳನ್ನು ವಿಚಾರಿಸಿದ್ದಾನೆ. ಈ ವೇಳೆ ಮಕ್ಕಳ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮನೆಯಿಂದ ಹೊರಟುಹೋಗಿದ್ದ ಮಕ್ಕಳಲ್ಲಿ ಸೂರ್ಯ ಎಂಬ ಬಾಲಕ ಮಾತ್ರ ಮನೆಯಿಂದ ಹಣವನ್ನು ತಂದಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.