ಬೆಂಗಳೂರಿನ ಹಲವು ಮನೆಗಳಿಗೆ ಶೀಘ್ರದಲ್ಲೇ ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆ
ಮುಂದಿನ ತಿಂಗಳಿನಿಂದ ಬೆಂಗಳೂರಿನ ಹಲವು ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ(ಪಿಎನ್ ಜಿ) ಪೂರೈಕೆಯಾಗಲಿದ್ದು ಸಿಲೆಂಡರ್ ಬಳಕೆ ಅಗತ್ಯ ಇರುವುದಿಲ್ಲ.

ಬೆಂಗಳೂರು: ಮುಂದಿನ ತಿಂಗಳಿನಿಂದ ಬೆಂಗಳೂರಿನ ಹಲವು ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ(ಪಿಎನ್ ಜಿ) ಪೂರೈಕೆಯಾಗಲಿದ್ದು ಸಿಲೆಂಡರ್ ಬಳಕೆ ಅಗತ್ಯ ಇರುವುದಿಲ್ಲ. ಭಾರತೀಯ ಅನಿಲ ಪ್ರಾಧಿಕಾರ (ಜಿಐಎಎಲ್) ದ ಪಿಎನ್ ಜಿ ಯೋಜನೆಯ ಮೊದಲ ಹಂತದಲ್ಲಿ ಬಿಇಎಲ್ ಟೌನ್ ಶಿಪ್ ಹಾಗೂ ಹೆಚ್ ಎಸ್ ಆರ್ ಲೇ ಔಟ್ ನ ಮನೆಗಳಿಗೆ ಅಡುಗೆ ಅನಿಲ ಪೈಪ್ ಮೂಲಕ ಪೂರೈಕೆಯಾಗಲಿದೆ.
2020 ವೇಳೆಗೆ ನಗರದ 1.35 ಲಕ್ಷ ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲ ಪೂರೈಕೆಯಾಗಲಿದೆ ಎಂದು ಭಾರತೀಯ ಅನಿಲ ಪ್ರಾಧಿಕಾರ (ಜಿಐಎಎಲ್)ದ ಸಿಇಒ ಪಂಕಜ್ ಕುಮಾರ್ ಪಾಲ್ ಸಂದರ್ಶನವೊಂಡರಲ್ಲಿ ಹೇಳಿದ್ದಾರೆ.
ಈ ಯೋಜನೆ ನಗರದಾದ್ಯಂತ ಸಂಪೂರ್ಣ ಜಾರಿಗೊಳ್ಳುವುದಕ್ಕೆ 25 ವರ್ಷ ತೆಗೆದುಕೊಳ್ಳುತ್ತದೆ. ದಾಭೋಲ್ ನಿಂದ ಬೆಂಗಳೂರಿನ ವರೆಗೆ ಕೊಳವೆ ಅನಿಲ ಮಾರ್ಗ ಸಂಪೂರ್ಣವಾಗಿದೆ. ಹೆಚ್ ಎಸ್ ಆರ್ ಲೇಔಟ್, ಬೆಳ್ಳಂದೂರು, ಕಾಡಬಿಸನಹಳ್ಳಿ ಹಾಗೂ ಬಿಇಎಲ್ ಕಾಲೋನಿಯಲ್ಲಿ ಸುಮಾರು 100 ಕಿ.ಮಿ ನಷ್ಟು ಕೊಳವೆ ಅಳವಡಿಕೆ ಕಾರ್ಯ ಮುಕ್ತಾಯವಾಗಿದ್ದು ಮಾರ್ಚ್ 31 ರ ಒಳಗೆ 1,250 ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ( ಪಿಎನ್ ಜಿ) ಪೂರೈಕೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


