ಅ.3, 4ರಂದು ಬೆಂಗಳೂರಿನಲ್ಲಿ ಹಳ್ಳಿಹಬ್ಬ: ಉದ್ದನೆ ಮೀಸೆ, ಜಡೆಯೊಂದಿಗೆ ಬನ್ನಿ ಬಹುಮಾನ ಗೆಲ್ಲಿ!
ಹೌದು, ನಿಮಗೆ ಉದ್ದ ಮೀಸೆ ಅಥವಾ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಉದ್ದನೆಯ ಜಡೆಯಿದ್ದರೇ ಇದೋ ಇಲ್ಲಿದೇ ನಿಮಗೆ 15 ಸಾವಿರ ರೂಪಾಯಿ ಬಹುಮಾನ...

ಬೆಂಗಳೂರು: ಹೌದು, ನಿಮಗೆ ಉದ್ದ ಮೀಸೆ ಅಥವಾ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಉದ್ದನೆಯ ಜಡೆಯಿದ್ದರೇ ಇದೋ ಇಲ್ಲಿದೇ ನಿಮಗೆ 15 ಸಾವಿರ ರೂಪಾಯಿ ಬಹುಮಾನ ಗೆಲ್ಲುವ ಸುವರ್ಣಾವಕಾಶ. ಕಳೆದ ಮೂರು ದಶಕಗಳಿಂದ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಎನ್.ಜಿ.ಓ ವಿದ್ಯಾರಣ್ಯ ಸಂಸ್ಥೆ ಬರುವ ಶನಿವಾರ ಮತ್ತು ಭಾನುವಾರ ಉದ್ಯಾನನಗರಿಯ ಜನರಿಗೆ ಗ್ರಾಮೀಣ ಸೊಗಡನ್ನು ಪರಿಚಯಿಸುವ ಹಳ್ಳಿಹಬ್ಬ-2015ನ್ನು ಆಯೋಜಿಸಿದೆ.
ಈ ಹಳ್ಳಿಹಬ್ಬದಲ್ಲಿ ಇಂತಹ ವಿಶಿಷ್ಟ ಮತ್ತು ವಿಭಿನ್ನ ಸ್ಪರ್ಧೆಯೊಂದನ್ನು ಏರ್ಪಡಿಸುವ ಮೂಲಕ ರಾಜಧಾನಿಯ ಮಂದಿಗೆ ಮೀಸೆ ಮತ್ತು ಜಡೆಯ ಮಹತ್ವವನ್ನು ತಿಳಿಸಹೊರಟಿದೆ.
ಅಕ್ಟೋಬರ್ 3 ಮತ್ತು 4ರಂದು ಫ್ರೀಡಂಪಾರ್ಕ್ ನಲ್ಲಿ ನಡೆಯಲಿರುವ 'ಹಳ್ಳಿಹಬ್ಬ-2015' ನ್ನು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ಮೇಯರ್ ಶ್ರೀ ಮಂಜುನಾಥ್ ರೆಡ್ಡಿ, ಚಲನಚಿತ್ರ ತಾರೆಯರಾದ ಪ್ರೇಮ್, ವಿಜಯ್ ರಾಘವೇಂದ್ರ, ಮುರಳಿ ಮತ್ತು ತಾರಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅತಿ ಉದ್ದನೆಯ ಜಡೆ ಹೊಂದಿದ ಮೊದಲ ಮೂರು ಮಹಿಳೆಯರಿಗೆ ಕ್ರಮವಾಗಿ 15ಸಾವಿರ, 10ಸಾವಿರ ಮತ್ತು 5ಸಾವಿರ ರುಪಾಯಿಗಳ ಆಕರ್ಷಕ ಬಹುಮಾನವನ್ನು ನೀಡಿದರೆ, ಪುರುಷರ ವಿಭಾಗದಲ್ಲಿ ಅತಿ ಉದ್ದನೆಯ ಮೀಸೆ ಹೊಂದಿದ ಮೊದಲ ಮೂರು ಪುರುಷರಿಗೆ ಕ್ರಮವಾಗಿ 15ಸಾವಿರ, 10ಸಾವಿರ ಮತ್ತು 5ಸಾವಿರ ರುಪಾಯಿಗಳ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ರಮೇಶ್ ತಿಳಿಸಿದ್ದಾರೆ.
ಸೈಕಲ್ ಟಯರ್ ಓಡಿಸುವುದು, ಕೈ ಕುಸ್ತಿ ಆಡುವುದು, ಬುಗುರಿ, ಲಗೋರಿ, ಗೋಲಿ ಆಟಗಳಿಗೂ ಆಕರ್ಷಕ ಬಹುಮಾನವಿದೆ. ಸದಾ ನಾನಾ ಜಂಜಡಗಳಲ್ಲಿ ಬದುಕುತ್ತಿರುವ ಉದ್ಯಾನನಗರಿಯ ಜನರು ಎರಡು ದಿನಗಳ ಈ ದೇಶಿಮಯ ಸಂಸ್ಕøತಿಯಲ್ಲಿ ಮಿಂದು, ಗ್ರಾಮೀಣ ಭಾಗದ ಆಟ-ಊಟ-ನೋಟದಲ್ಲಿ ಪಾಲ್ಗೊಳ್ಳಲಿ ಎನ್ನುವ ಸದುದ್ದೇಶ ನಮ್ಮದು ಎನ್ನುತ್ತಾರೆ ರಮೇಶ್. ನೀವೂ ಬನ್ನಿ, ನಿಮ್ಮ ಮಕ್ಕಳನ್ನು ಮತ್ತು ಅಕ್ಕ-ಪಕ್ಕದವರನ್ನು ಕರೆತನ್ನಿ.
ಹೆಚ್ಚಿನಮಾಹಿತಿಗಾಗಿ:9035014040/9343207349
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


