ಜಿಲ್ಲಾ ಸುದ್ದಿ

ಬೈಸಿಕೊಳ್ಳುವ ಭಯದಲ್ಲಿ ಕಿಡ್ನ್ಯಾಪ್ ನಾಟಕ ಹೆಣೆದ

ಪರೀಕ್ಷೆಯಲ್ಲಿ ಕಡಿಮೆ ಅಂಕ ಹಾಗೂ ಸೈಕಲ್ ಕಳೆದುಕೊಂಡಿದ್ದಕ್ಕೆ ಪಾಲಕರು ಬಯ್ಯುತ್ತಾರೆ ಎನ್ನುವ ಭೀತಿಯಿಂದ ಬಾಲಕನೊಬ್ಬ ಗಮನ ಬೇರೆಡೆ ಸೆಳೆಯಲು ಅಪಹರಣ ನಾಟಕವಾಡಿದ ಘಟನೆ ಬುಧವಾರ ನಡೆದಿದೆ...

ಬೈಸಿಕೊಳ್ಳುವ ಭಯದಲ್ಲಿ ಕಿಡ್ನ್ಯಾಪ್ ನಾಟಕ ಹೆಣೆದ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ಹಾಗೂ ಸೈಕಲ್ ಕಳೆದುಕೊಂಡಿದ್ದಕ್ಕೆ ಪಾಲಕರು ಬಯ್ಯುತ್ತಾರೆ ಎನ್ನುವ ಭೀತಿಯಿಂದ ಬಾಲಕನೊಬ್ಬ ಗಮನ ಬೇರೆಡೆ ಸೆಳೆಯಲು ಅಪಹರಣ ನಾಟಕವಾಡಿದ ಘಟನೆ ಬುಧವಾರ ನಡೆದಿದೆ.

ಪಾಪರೆಡ್ಡಿ ಪಾಳ್ಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 13 ವರ್ಷದ ಬಾಲಕನ ತಂದೆ ಕೆಲ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪಾಲಕರು ಕೊಡಿಸಿದ ಸೈಕಲ್ ಕಳೆದುಕೊಂಡಿದ್ದ ಬಾಲಕ ಶಾಲೆಯಲ್ಲಿ ನಡೆದ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದ. ಈ ವಿಷಯ ಮನೆಯಲ್ಲಿ ಗೊತ್ತಾದರೆ ಬಯ್ಯುತ್ತಾರೆ ಎಂದು ಅಪಹರಣದ ಕಥೆ ಕಟ್ಟಿದ್ದ.

ಬುಧವಾರ ಮಧ್ಯಾಹ್ನ ತಾನಾಗಿಯೇ ಯಲಹಂಕಕ್ಕೆ ತೆರಳಿ ಅಲ್ಲಿಂದ ಬೇರೆಯವರ ಮೊಬೈಲ್ ಪಡೆದು ಕರೆ ಮಾಡಿ, ನನ್ನನ್ನು ಕೆಲವರು ಅಪಹರಿಸಿಕೊಂಡು ಕಾರಿನಲ್ಲಿ ಹೋಗಿದ್ದರು. ರಸ್ತೆ ಹಂಪ್ಸ್ ಬಳಿ ವಾಹನ ನಿಧಾನಗೊಂಡಾಗ ವಾಹನದಿಂದ ಜಿಗಿದು ಪಾರಾಗಿದ್ದೇನೆ. ಬೇರೆ ವಿದ್ಯಾರ್ಥಿಗಳು ವಾಹನದಲ್ಲಿದ್ದು ಅಪಹರಣಕಾರರು ಪ್ರಜ್ಞೆ ತಪ್ಪಿಸಿ ಕರೆದೊಯ್ದಿದ್ದಾರೆ ಎಂದು ಪಾಲಕರಿಗೆ ತಿಳಿಸಿದ್ದ.

ಈ ಹಿನ್ನೆಲೆಯಲ್ಲಿ ಬಾಲಕ ಹಾಗೂ ಪಾಲಕರೊಂದಿಗೆ ಕುಳಿತು ಪೊಲೀಸರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಮುಂದಾದಾಗ ಸತ್ಯ ಹೇಳಿದ್ದಾನೆ. ಪಾಲಕರು ಬಯ್ಯುತ್ತಾರೆ ಎನ್ನುವ ಕಾರಣಕ್ಕೆ ಕಿಡ್ನ್ಯಾಪ್ ಕಥೆ ಕಟ್ಟಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.