ಬಗ್ಗಿ ನೋಡಿ ಬಡಿಸಿಕೊಂಡ
ಗುಡಿಸಲಿನಲ್ಲಿ ಮಲಗಿದ್ದ ಮಹಿಳೆಯನ್ನು ಇಣುಕಿ ನೋಡಲು ಹೋದ ಕ್ಯಾಬ್ ಚಾಲಕನೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಸಂಜಯ್ ನಗರದ ಅಶ್ವತ್ಥ ನಗರದಲ್ಲಿ ಮಂಗಳವಾರ ನಡೆದಿದೆ...

ಬೆಂಗಳೂರು: ಗುಡಿಸಲಿನಲ್ಲಿ ಮಲಗಿದ್ದ ಮಹಿಳೆಯನ್ನು ಇಣುಕಿ ನೋಡಲು ಹೋದ ಕ್ಯಾಬ್ ಚಾಲಕನೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಸಂಜಯ್ ನಗರದ ಅಶ್ವತ್ಥ ನಗರದಲ್ಲಿ ಮಂಗಳವಾರ ನಡೆದಿದೆ.
ಗೋವಿಂದಪುರ ನಿವಾಸಿ ಚಾಲಕ ಸಾದಿಕ್ ಪಾಷಾ ಬಂಧಿತ ಆರೋಪಿ. ಮಂಗಳವಾರ ನಸುಕಿನ 3.30ರ ಸುಮಾರಿಗೆ ಅಶ್ವತ್ಥ ನಗರದಲ್ಲಿ ಕ್ಯಾಬ್ ನಿಲ್ಲಿಸಿದ ಆರೋಪಿ, ಅಲ್ಲೇ ಸಮೀಪದ ಗುಡಿಸಲು ಗಮನಿಸಿ ಅಲ್ಲಿಗೆ ತೆರಳಿ, ಮಲಗಿದ್ದ ಮಹಿಳೆಯನ್ನು ಇಣುಕಿ ನೋಡಿದ್ದಾನೆ. ಅಲ್ಲದೇ ಮನೆಯೊಳಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಆತ, ಒಳ ಬರುತ್ತಿರುವುದನ್ನು ಗಮನಿಸಿದ ಮಹಿಳೆ ಜೋರಾಗಿ ಕಿರುಚಿದ್ದಾಳೆ.
ರಸ್ತೆಯಲ್ಲಿ ಓಡಾಡುತ್ತಿದ್ದ ಕೆಲವರು ಮಹಿಳೆ ಕಿರುಚಾಟ ಕೇಳಿ ಗುಡಿಸಲಿನ ಬಳಿ ಬಂದಿದ್ದಾರೆ. ನಡೆದ ಪ್ರಸಂಗವನ್ನು ಮಹಿಳೆ ಹೇಳಿಕೊಂಡಿದ್ದಾಳೆ. ಕೂಡಲೇ ಸಾರ್ವಜನಿಕರು ಕ್ಯಾಬ್ ಚಾಲಕನ್ನು ಹಿಗ್ಗಾ ಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಸಿದ್ದಾರೆ. ಸ್ಥಳೀಯರ ಪ್ರಕಾರ, ಆರೋಪಿ ಮದ್ಯ ಅಥವಾ ಗಾಂಜಾ ನಶೆಯಲ್ಲಿದ್ದ ಎನ್ನಲಾಗಿದೆ. ಆರೋಪಿ ಮದ್ಯದ ನಶೆಯಲ್ಲಿದ್ದದ್ದು ಕಂಡು ಬಂದಿಲ್ಲ. ಆದರೂ, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಜಯ್ ನಗರ ಪೊಲೀಸರು ಹೇಳಿದ್ದಾರೆ.
ನಾನೇನೂ ಮಾಡಿಲ್ಲ: ಆರೋಪಿ ಚಾಲಕ ಮಹಿಳೆಯ ಆರೋಪವನ್ನು ಅಲ್ಲಗಳೆದಿದ್ದಾನೆ. ತಾನು ರಾತ್ರಿ ಪಾಳಿಯಲ್ಲಿದ್ದು ನಿದ್ದೆ ಬಂದ ಕಾರಣ ಕಾರು ನಿಲ್ಲಿಸಿ, ಮೂತ್ರ ವಿಸರ್ಜನೆಗೆ ತೆರಳಿದ್ದೆ. ಆದರೆ, ಮಹಿಳೆ ತನ್ನನ್ನು ನೋಡಿ ಕಿರುಚಿದಳು. ನಾನು ಆಕೆಯನ್ನು ಮುಟ್ಟಿಲ್ಲ. ಆದರೆ, ಏಕೆ ಕಿರುಚಾಡುತ್ತಿದ್ದಿಯಾ ಎಂದು ಕೇಳಲು ಆಕೆಯ ಬಳಿ ಹೋಗಿದ್ದೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


