ಜಿಲ್ಲಾ ಸುದ್ದಿ

ಆಟೋ ಕಳ್ಳರ ಸೆರೆ

ಕದ್ದ ಆಟೋಗಳ ಎಂಜಿನ್ ಹಾಗೂ ಚಾಸಿ ನಂಬರ್ ಬದಲಿಸಿ ತಮಿಳುನಾಡಿ ನಲ್ಲಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ...

ಆಟೋ ಕಳ್ಳರ ಸೆರೆ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಕದ್ದ ಆಟೋಗಳ ಎಂಜಿನ್ ಹಾಗೂ ಚಾಸಿ ನಂಬರ್ ಬದಲಿಸಿ ತಮಿಳುನಾಡಿ ನಲ್ಲಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಗಿರಿಯ ಹರೀಶ್ (35), ವಿ. ಮುರುಗೇಶ್ (30) ಬೊಮ್ಮನಹಳ್ಳಿಯ ಪೈರೋಜ್ (45), ಚಂದಾಪುರದ ಮೆಹಬೂಬ್ ಬಾಬು (40) ಹಾಗೂ ಚಾಮರಾಜಪೇಟೆಯ ಹೇಮಚಂದ್ರ (50) ಬಂಧಿತರು. ಆರೋಪಿಗಳು ಕಲಾಸಿಪಾಳ್ಯ ಕೃಂಬಿಗಲ್ ರಸ್ತೆಯಲ್ಲಿ ಆಟೋದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ತಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆಟೋ ಕಳ್ಳರು ಎಂದು ಗೊತ್ತಾಗಿದೆ.

ಮನೆ ಮುಂದೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ಆಟೋಗಳನ್ನು ಮೆಹಬೂ ಬ್, ಹೇಮಚಂದ್ರ ಮತ್ತು ಪೈರೋಜ್ ಕಳವು ಮಾಡಿ ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಹರೀಶ್ ಮತ್ತು ಮುರುಗೇಶ್ ಮೂಲಕ ಗುಜರಿ ಆಟೋಗಳ ನೋಂದಣಿ ಪುಸ್ತಕಗಳನ್ನು ಗುಜರಿ ಅಂಗಡಿ ಮತ್ತು ಆರ್‍ಟಿಓ ಕಚೇರಿಯಲ್ಲಿ ತೆಗೆದುಕೊಳ್ಳುತ್ತಿದ್ದರು. ಕದ್ದ ಆಟೋಗಳ ಎಂಜಿನ್ ಮತ್ತು ಚಾಸಿ ನಂಬರ್ ಅಳವಡಿಸಿ ತಮಿಳುನಾಡಿನಲ್ಲಿ ಮಾರುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.