ಜಿಲ್ಲಾ ಸುದ್ದಿ

ಇರುವ ನ್ಯೂನತೆ ತೋರುತ್ತಿದ್ದೇನೆ: ಭಗವಾನ್ ಸ್ಪಷ್ಟನೆ

ಹಿಂದೂ ಧರ್ಮದಲ್ಲಿ ಸಾಕಷ್ಟು ಕೊಳಕು ಭಾಗವಿದೆ ಅದನ್ನು ನಾನು ತೋರಿಸುತ್ತಿದ್ದೇನೆ,'' ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್...

ಇರುವ ನ್ಯೂನತೆ ತೋರುತ್ತಿದ್ದೇನೆ: ಭಗವಾನ್ ಸ್ಪಷ್ಟನೆ
ಪ್ರೊ.ಕೆ.ಎಸ್.ಭಗವಾನ್
Published On :

ಬೆಂಗಳೂರು: ``ಹಿಂದೂ ಧರ್ಮದಲ್ಲಿ ಸಾಕಷ್ಟು ಕೊಳಕು ಭಾಗವಿದೆ ಅದನ್ನು ನಾನು ತೋರಿಸುತ್ತಿದ್ದೇನೆ,'' ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಷನ್  ಸೆಂಟ್ರಲ್ ಕಾಲೇಜಿನಲ್ಲಿ  ಏರ್ಪಡಿಸಿದ್ದ ಭಗತ್ ಸಿಂಗ್ ಕನಸಿವ ಭಾರತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾಮಾಜಿಕ ಸ್ಥರದಲ್ಲಿ  ಸಮಾನತೆ ತಂದಿರುವ ಮತ ಇಸ್ಲಾಂ. ಆದರೆ ಹಿಂದೂ ಧರ್ಮದಲ್ಲಿ ಅದಿಲ್ಲ.
ಹಾಗಾಗಿ ಹಿಂದೂ ಧರ್ಮವನ್ನು ಪ್ರತಿಪಾದಿಸುವ ಪ್ರತಿಯೊಬ್ರು  ವಿವೇಕಾನಂದರನ್ನು  ರನ್ನು ಚೆನ್ನಾಗಿ ಓದಿಕೊಳ್ಳಲಿ,'' ಎಂದು ಸಲಹೆ ನೀಡಿದ್ದಾರೆ. ನಾನು ಯಾವ ವ್ಯವಸ್ಥೆಯಲ್ಲಿ ಇದ್ದೇನೋ ಅದರಲ್ಲಿನ ಕೊಳಕನ್ನು ತೋರಿಸುತ್ತಿದ್ದೇನೆ. ಅದು ಗೊತ್ತಿಲ್ಲದಿರುವವರು ಹೀಗೆ ಹೇಳುತ್ತಾರೆ,'' ಎಂದರು.

ಪೇಜಾವರರು ನನ್ನ ಪುಸ್ತಕ ಓದಿಕೊಳ್ಳಲಿ

ಭಗವಾನ್ ಒಬ್ಬ ಹೇಡಿ ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿ ಕ್ರಿಯಿಸಿದ ಭಗವಾನ್ ಪೇಜಾವರ ಶ್ರೀಗಳು ಈ ಹಿಂದೆಯೂ ನನಗೆ ಹೇಡಿ ಎಂದಿದ್ದರು. ಅವರ ಜೊತೆ ನಾನು ಚರ್ಚೆಗೆ ಬರುವುದಿಲ್ಲ. ಅವರು ಮೊದಲು ನನ್ನ ಪುಸ್ತಕವನ್ನು ಓದಿಕೊಳ್ಳಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.