ಜಿಲ್ಲಾ ಸುದ್ದಿ

ಕಾರಲ್ಲಿ ಬಂದ ದುಶ್ಯಾಸನ; ಮಹಿಳೆಯ ಸೀರೆ ಎಳೆಯಲು ಯತ್ನ..!

ಗುಡಿಸಲಿನಲ್ಲಿ ಮಹಿಳೆಯನ್ನು ಇಣುಕಿ ನೋಡಿ, ಯಾರು ಇಲ್ಲದನ್ನು ಗಮನಿಸಿ ಆಕೆಯ ಸೀರೆ ಎಳೆಯಲು ಪ್ರಯತ್ನಿಸಿದ ಒಲಾ ಕ್ಯಾಬ್ ಚಾಲಕನೊಬ್ಬನಿಗೆ ಧರ್ಮದೇಟು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

ಕಾರಲ್ಲಿ ಬಂದ ದುಶ್ಯಾಸನ; ಮಹಿಳೆಯ ಸೀರೆ ಎಳೆಯಲು ಯತ್ನ..!
ಮಹಿಳೆಯೊಂದಿಗೆ ಅಸಭ್ಯ ವರ್ತನೆ (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಗುಡಿಸಲಿನಲ್ಲಿ ಮಹಿಳೆಯನ್ನು ಇಣುಕಿ ನೋಡಿ, ಯಾರು ಇಲ್ಲದನ್ನು ಗಮನಿಸಿ ಆಕೆಯ ಸೀರೆ ಎಳೆಯಲು ಪ್ರಯತ್ನಿಸಿದ ಒಲಾ ಕ್ಯಾಬ್ ಚಾಲಕನೊಬ್ಬನಿಗೆ ಧರ್ಮದೇಟು ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸಂಜಯನಗರದಲ್ಲಿ ಈಘಟನೆ ನಡೆದಿದ್ದು, ಸಾಧಿಕ್‍ಪಾಷ(25 ವರ್ಷ) ಎಂಬಾತ ಮಂಗಳವಾರ ಮುಂಜಾನೆ ಮುಂಜಾನೆ 3.30 ರವೇಳೆ ಸಂಜಯನಗರದ ಅಶ್ವಥನಗರದಲ್ಲಿನ ರಸ್ತೆಯಲ್ಲಿ ಹೋಗುವಾಗ ಕ್ಯಾಬ್‍ನಿಲ್ಲಿಸಿ ಪಕ್ಕದ ಗುಡಿಸಲಿನಲ್ಲಿ ಮಲಗಿದ್ದ ಸುಮಾರು 30 ವರ್ಷದ ಮಹಿಳೆಯನ್ನು ಇಣಿಕಿನೋಡಿ ಸೀರೆ ಎಳೆಯಲು ಯತ್ನಿಸಿದ್ದಾನೆ. ಕೂಡಲೇ  ಎಚ್ಚರಗೊಂಡ ಮಹಿಳೆ ಕೂಗಿಕೊಂಡಿದ್ದು, ಅಲ್ಲಿಯೇ ಆಕೆಯ ಪತಿ ಹಾಗೂ ಸಂಬಂಧಿಕರು ಸಾದಿಕ್ ಪಾಷನನ್ನು ಹಿಡಿದು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಅಲ್ಲದೆ ಸಂಜಯನಗರ ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದಾರೆ. ಆರೋಪಿ ಸಾಧಿಕ್‍ಪಾಷನನ್ನು ಬಂಧಿಸಿರುವ ಸಂಜಯನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಾಧಿಕ್ ಪಾಷ ಗೋವಿಂದಪುರದ ನಿವಾಸಿಯಾಗಿದ್ದು, ಒಲಾ ಕ್ಯಾಬ್ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಗುಡಿಸಲಿನಲ್ಲಿದ್ದ ಮಹಿಳೆ ಮೂಲತಃ ಉತ್ತರಪ್ರದೇಶದವರಾಗಿದ್ದು, ಜೀವನಾಧಾರಕ್ಕಾಗಿ ತಮ್ಮ ಸಂಬಂಧಿಕರೊಂದಿಗೆ ಅಶ್ವಥನಗರದ ರಸ್ತೆ ಪಕ್ಕ ಗುಡಿಸಲು ಹಾಕಿಕೊಂಡು ಹೂ ಕುಂಡಗಳು ಹಾಗೂ ಹೂವಿನ ಗಿಡಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.