ನಿವೇಶನ ಹಂಚಿಕೆ ಅವ್ಯವಹಾರ ನಡೆದಿಲ್ಲ: ಸಿ.ಎಂ. ವೆಂಕಟೇಶ್ ಸ್ಪಷ್ಟನೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಬಿಡಿಎ 3 ಎಕರೆ ಜಮೀನು ನೀಡಿದ್ದರೂ ನಿವೇಶನ ನೀಡಿಲ್ಲ ಎಂದು ಸಂಘದ ಕಾರ್ಯದರ್ಶಿಯಾಗಿದ್ದ...

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಬಿಡಿಎ 3 ಎಕರೆ ಜಮೀನು ನೀಡಿದ್ದರೂ ನಿವೇಶನ ನೀಡಿಲ್ಲ ಎಂದು ಸಂಘದ ಕಾರ್ಯದರ್ಶಿಯಾಗಿದ್ದ ಬಿ.ಎಂ.ಚಿಕ್ಕಯ್ಯ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಸಂಘದ ಅಧ್ಯಕ್ಷ ಸಿ.ಎಂ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಬಿಡಿಎ ನೌಕರರ ಕಲ್ಯಾಣ ಸಂಘ 42 ಎಕರೆ ಜಮೀನಿನಲ್ಲಿ 2008ರಿಂದ 2010ರವರೆಗೆ ಬಡಾವಣೆಗಳನ್ನು ನಿರ್ಮಿಸಿ ಪ್ರಾಧಿಕಾರದ ಎಲ್ಲ ಹಾಲಿ ನೌಕರರಿಗೆ ನಿವೇಶನ ಹಂಚಿಕೆ ಮಾಡಿದೆ. ಉಳಿದ 3 ಎಕರೆ ಜಮೀನಿನಲ್ಲಿ ನಿವೃತ್ತ ನೌಕರರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಆದರೆ ಬಿ.ಎಂ.ಚಿಕ್ಕಯ್ಯ ಅವರು ಸುಮಾರು 61 ಮಂದಿ ನಿವೃತ್ತ ನೌಕರರಿಂದ ರು.3ರಿಂದ 4 ಲಕ್ಷ ವಸೂಲು ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಮಧ್ಯ ನ್ಯಾಯಾಲಯದಲ್ಲಿ ಸಂಘದ ವಿರುದಟಛಿ ದಾವೆ ಹೂಡಿದ್ದು, ಮಾತುಕತೆ ಬಳಿಕ ದಾವೆ ವಾಪಸ್ ಪಡೆದಿದ್ದರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಹಣ ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಗಿದೆ. ನಿವೃತ್ತ ನೌಕರರಿಗೆ 3 ರಿಂದ 4 ಎಕರೆ ಜಮೀನು ಬಿಡುಗಡೆ ಮಾಡಿ ಎಲ್ಲರಿಗೂ ಹಂಚಿಕೆ ಮಾಡುವುದಾಗಿ ಬಿಡಿಎ ಆಯಕ್ತರೇ ಭರವಸೆ ನೀಡಿದ್ದಾರೆ. ಈ ಮಧ್ಯೆ ಚಿಕ್ಕಯ್ಯನವರು ಸುಳ್ಳು ಆರೋಪ ಮಾಡಿ ಸಂಘದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


