ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ತಾಯಿ, ಮಕ್ಕಳಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಾದರಾಯನಪುರ ಸಮೀಪದ ಅರಾಫತ್‍ನಗರದಲ್ಲಿ ನಡೆದಿದೆ...

ಬೆಂಗಳೂರು: ತಾಯಿ, ಮಕ್ಕಳಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಾದರಾಯನಪುರ ಸಮೀಪದ ಅರಾಫತ್‍ನಗರದಲ್ಲಿ ನಡೆದಿದೆ.
ರಿಜ್ವಾನಾ (40), ತನ್ನ ಮಕ್ಕಳಾದ ರಿಯಾಜ್(5) ಹಾಗೂ ಹಾಜಿರಾಗೆ (3) ವಿಷ ಕುಡಿಸಿ ಕೊಲೆ ಮಾಡಿ, ನಂತರ ತಾವೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು
ಪೆÇಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ವೆಲ್ಲೂರು ಮೂಲದ ರಿಜ್ವಾನಾ, ಆರು ವರ್ಷಗಳ ಹಿಂದೆ ಜಹೀರ್ ಅಹಮದ್ ಎಂಬುವರನ್ನು ಮದುವೆಯಾಗಿದ್ದರು.
ಹಣ ಸಾಕಾಗುತ್ತಿಲ್ಲ ಎಂದು ಕೆಲಸ ಅರಸಿ ಹತ್ತು ತಿಂಗಳ ಹಿಂದೆ ಸೌದಿ ಅರೆಬಿಯಾಕ್ಕೆ ತೆರಳಿದ ಜಹೀರ್, ಅಲ್ಲಿ ಟೈಲರ್ ಕೆಲಸಕ್ಕೆ ಸೇರಿದ್ದರು. ಪತ್ನಿ ಮಕ್ಕಳ ಜೀವನ ನಿರ್ವಹಣೆಗಾಗಿ ಹಣ ಕಳುಹಿಸುತ್ತಿದ್ದರು. ಜಹೀರ್ ಸಹೋದರ ಅನ್ವರ್, ಮನೆಯಲ್ಲಿ ಮಾಡಿದ್ದ ಸಿಹಿ ತಿಂಡಿಯನ್ನು ನೀಡಲು ಬೆಳಿಗ್ಗೆ 11 ಗಂಟೆಗೆ ಅವರು ರಿಜ್ವಾನಾ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಹಾದಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ, ನಂತರ ತಾವೂ ಸೇವಿಸಿ ಮೃತಪಟ್ಟಿರುವುದು ಸಾಧ್ಯತೆಗಳಿವೆ ಎಂದಿದ್ದಾರೆ ಪೊಲೀಸರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


