ಜಿಲ್ಲಾ ಸುದ್ದಿ

ನಾಯಕರ ವಿಳಂಬ ಆಗಮನ ಸೃಷ್ಟಿಸಿತ್ತು ಕಾಂಗ್ರೆಸ್ ನಲ್ಲಿ ಆತಂಕ

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸುತ್ತಲೂ ನಿಷೇಧಾಜ್ಞೆ ಜಾರಿಯಾಗಿತ್ತು. ಸುಮಾರು 750ಕ್ಕೂ ಹೆಚ್ಚಿನ ಸಿಬ್ಬಂದಿ ಬಿಬಿಎಂಪಿ ಸುತ್ತಮುತ್ತ ಯಾವುದೇ ಗಲಾಟೆ ಮತ್ತು ಅಶಾಂತಿ ವಾತಾವರಣ ನಿರ್ಮಾಣವಾಗದಂತೆ ಮಾಡಿದ್ದರು...

ನಾಯಕರ ವಿಳಂಬ ಆಗಮನ ಸೃಷ್ಟಿಸಿತ್ತು ಕಾಂಗ್ರೆಸ್ ನಲ್ಲಿ ಆತಂಕ
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸುತ್ತಲೂ ನಿಷೇಧಾಜ್ಞೆ ಜಾರಿಯಾಗಿತ್ತು. ಸುಮಾರು 750ಕ್ಕೂ ಹೆಚ್ಚಿನ ಸಿಬ್ಬಂದಿ ಬಿಬಿಎಂಪಿ ಸುತ್ತಮುತ್ತ ಯಾವುದೇ ಗಲಾಟೆ ಮತ್ತು ಅಶಾಂತಿ ವಾತಾವರಣ ನಿರ್ಮಾಣವಾಗದಂತೆ ಮಾಡಿದ್ದರು.

ಅಷ್ಟೇ ಏಕೆ, ಮೇಯರ್, ಉಪ ಮೇಯರ್ ಬೆಂಬಲಿಗರು ಬಿಬಿಎಂಪಿ ಸುತ್ತಮುತ್ತ ಪಟಾಕಿ ಕೂಡ ಸಿಡಿಸಿ ಸಂಭ್ರಮಿಸುವುದಕ್ಕೆ ಅವಕಾಶ ಇರಲಿಲ್ಲ. ಅಷ್ಟರ ಮಟ್ಟಿಗೆ ಚುನಾವಣೆ
ಬಿಗಿಭದ್ರತೆಯೊಂದಿಗೆ ಜರುಗಿತು. ನಿಗದಿಯಂತೆ ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಸಭೆ ಆರಂಭವಾಯಿತು. ಈ ಚುನಾವಣೆಯಲ್ಲಿ ಒಂದೊಂದು ಮತಗಳೂ ಮಹತ್ವದ್ದಾಗಿದ್ದರಿಂದ ಪ್ರತಿಯೊಬ್ಬ ಸದಸ್ಯ ಹಾಜರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಳ್ಳಲಾಗಿತ್ತು. ಎಲ್ಲಾ ಪಕ್ಷಗಳ ಸದಸ್ಯರು ರೆಸಾರ್ಟ್‍ಗಳಿಂದ ನೇರವಾಗಿ ಬಿಬಿಎಂಪಿಗೆ ಬಂದಿಳಿದರು.

ಕೌನ್ಸಿಲ್ ಕಚೇರಿ ಬರುತ್ತಿದ್ದಂತೆ ಅವರು ಎಲ್ಲೂ ಹೋಗದೆ ನೇರ ಸಭಾಂಗಣಕ್ಕೆ ಹೋಗಿ ತಮಗೆ ನಿಗದಿಯಾಗಿದ್ದ ಆಸನಗಳಲ್ಲಿ ಕುಳಿತರು. ಬೆಳಗ್ಗೆ 11.45ಗಂಟೆಗೆ ಸದಸ್ಯರ ರಾಜರಾತಿ ಮತ್ತು ಪ್ರಮಾಣ ವಚನ ಬೋಧನೆ ಆರಂಭವಾಗಬೇಕಿತ್ತು. ಆದರೆ, ಡಿ.ಕೆ. ಸುರೇಶ್, ಸಚಿವ ಕೃಷ್ಣ ಬೈರೇಗೌಡ ಮತ್ತು ರಾಜ್ಯಸಭಾ ಸದಸ್ಯರಾಜುಗೌಡ ಅವರು ಸಕಾಲಕ್ಕೆ ಬಾರದೆ ಕಾಂಗ್ರೆಸ್
ನಾಯಕರು ಆತಂಕಕ್ಕೆ ಸಿಲುಕಿದ್ದರು. ಅದೇ ರೀತಿ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್ ಮತ್ತು ವೆಂಕಯ್ಯನಾಯ್ಡು ಅವರ ಆಗಮನ ಕೂಡ ನಿಧಾನವಾಗಿ ಆತಂಕವಾಗಿತ್ತು. ಆದರೆ, ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ಜಯಶ್ರೀ ಹಾಗೂ ಲೋಕಸಭಾ ಸದಸ್ಯ ವೀರಪ್ಪ ಮೊಯ್ಲಿ ಸಕಾಲಕ್ಕೆ ಹಾಜರಾಗಿ ಗಮನ ಸೆಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.