ರು.21.5 ಲಕ್ಷ ದರೋಡೆ
ನಗರದ ವಿವಿಧೆಡೆ ಬುಧವಾರ ಸರಣಿ ಸರಗಳ್ಳತನ ನಡೆದ ಪ್ರಕರಣದ ಮಧ್ಯೆಯೇ ಚಿನ್ನ ವ್ಯಾಪಾರಿಯನ್ನು ಅಡ್ಡಗಟ್ಟಿ ರು.21.5 ಲಕ್ಷ ನಗದನ್ನು ಜನನಿಬಿಡ ಮೈಸೂರು ಬ್ಯಾಂಕ್ ವೃತ್ತದಲ್ಲಿ ದೋಚಿದ ಪ್ರಕರಣ ನಡೆದಿದೆ...

ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಸರಣಿ ಸರಗಳ್ಳತನ ನಡೆದ ಪ್ರಕರಣದ ಮಧ್ಯೆಯೇ ಚಿನ್ನ ವ್ಯಾಪಾರಿಯನ್ನು ಅಡ್ಡಗಟ್ಟಿ ರು.21.5 ಲಕ್ಷ ನಗದನ್ನು ಜನನಿಬಿಡ ಮೈಸೂರು
ಬ್ಯಾಂಕ್ ವೃತ್ತದಲ್ಲಿ ದೋಚಿದ ಪ್ರಕರಣ ನಡೆದಿದೆ.
ಆಂಧ್ರಪ್ರದೇಶದ ಆದೋನಿಯ ಚಿನ್ನದಂಗಡಿಯ ಕೆಲಸಗಾರ ಮಲ್ಲಿಕಾರ್ಜುನ ಎಂಬುವವರು ಸಂಜೆ 7.30ರ ಸುಮಾರು ಹಣವಿದ್ದು ಬ್ಯಾಗ್‍ನೊಂದಿಗೆ ನಡೆದು ಕೊಂಡು ಹೋಗುತ್ತಿದ್ದಾಗ, ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬ್ಯಾಗ್ ಕಸಿದು ಕೊಂಡು ಪರಾರಿಯಾಗಿದ್ದಾರೆ.
ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆಂಧ್ರ ಮೂಲದ ಚಿನ್ನಾಭ ರಣ ವ್ಯಾಪಾರಿಗಳು ನಿಯಮಿತವಾಗಿ ನಗರಕ್ಕೆ ವ್ಯಾಪಾರದ ಉದ್ದೇಶದಿಂದ ನಗದು ತೆಗೆದುಕೊಂಡು ಬರುವುದು ಮಾಮೂಲು. ಈ ವಿಷಯ ಸ್ಪಷ್ಟವಾಗಿ ಗೊತ್ತಿರುವವರೇ ಕೃತ್ಯ ಎಸಗಿರುವ ಶಂಕೆ ಪೊಲೀಸರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


