ಏಳು ಕಡೆ ಸರ ಅಪಹರಣ
ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ಬುಧವಾರ ನಗರದ ಮಹದೇವಪುರ, ಕೆ.ಆರ್. ಪುರ, ಬಾಣಸವಾಡಿ, ಜೆ.ಪಿ. ನಗರ ಮತ್ತು ಸುಬ್ರಹ್ಮಣ್ಯಪುರ, ಯಲಹಂಕ ಉಪನಗರ ಹಾಗೂ ಮಾದನಾಯಕನಹಳ್ಳಿಯಲ್ಲಿ 7 ಕಡೆ ದುಷ್ಕರ್ಮಿಗಳು ಮಹಿಳೆಯರ...

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ಬುಧವಾರ ನಗರದ ಮಹದೇವಪುರ, ಕೆ.ಆರ್. ಪುರ, ಬಾಣಸವಾಡಿ, ಜೆ.ಪಿ. ನಗರ ಮತ್ತು ಸುಬ್ರಹ್ಮಣ್ಯಪುರ, ಯಲಹಂಕ ಉಪನಗರ ಹಾಗೂ ಮಾದನಾಯಕನಹಳ್ಳಿಯಲ್ಲಿ 7 ಕಡೆ ದುಷ್ಕರ್ಮಿಗಳು ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಮಹದೇವಪುರ ಮಧ್ಯಾಹ್ನ 2.30 ಸಮೀಪದ ಎಇಸಿಎಸ್ ಲೇಔಟ್ ನಿವಾಸಿ ಮೆರಿ ಸ್ಟೆಲ್ಲಾ(57) ಎಂಬುವರು ತಮ್ಮ ಮನೆಯ ಬಳಿ ನಿಂತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು 70 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕೆ.ಆರ್. ಪುರ ಸಂಜೆ 5
ನಾಗರತ್ನಾ (50) ಎಂಬುವರು ಸಂಜೆ 5 ಗಂಟೆಗೆ ಗಾಯತ್ರಿ ಲೇಔಟ್‍ಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 50 ಗ್ರಾಂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ.
ಸುಬ್ರಮಣ್ಯಪುರ ಸಂಜೆ 6.15
ವಾಯುವಿಹಾರ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಜಯಶ್ರೀ ಎಂಬುವರ 15 ಗ್ರಾಂ ಸರವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಜೆ.ಪಿ.ನಗರ ರಾತ್ರಿ 7.15
ಜೆ.ಪಿ. ನಗರ 5ನೇ ಹಂತದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಮಂಜುಳಾ (48) ಎಂಬುವರಿಂದ 45 ಗ್ರಾಂ ಚಿನ್ನದ ಸರ ಕಸಿದಿದ್ದಾರೆ.
ಬಾಣಸವಾಡಿ ರಾತ್ರಿ 7.30
ಕಲ್ಯಾಣನಗರ 1ನೇ ಬ್ಲಾಕ್‍ನಲ್ಲಿ ಮುನಿವೆಂಕಟಮ್ಮ (68) ಮನೆ ಮುಂದೆ ನಿಂತಿದ್ದಾಗ ಬಳಿ ಬಂದ ಅಪರಿಚಿತ ವ್ಯಕ್ತಿ 20 ಗ್ರಾಂ ಚಿನ್ನದ ಸರ ಕಸಿದು ಮತ್ತೊಬ್ಬನ ಜತೆ ಪರಾರಿಯಾಗಿದ್ದಾನೆ.
ಮಾದನಾಯಕನಹಳ್ಳಿ ರಾತ್ರಿ 8
ಹೊರವಲಯದ ಮಾದನಾಯಕನಹಳ್ಳಿಯಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದೇವಣ್ಣನಪಾಳ್ಯ ನಿವಾಸಿ ಸೌಭಾಗ್ಯ ಲಕ್ಷ್ಮೀ (50) ಮೇಲೆ ಹಲ್ಲೆ ನಡೆಸಿ ಸರ ಕಿತ್ತುಕೊಂಡಿದ್ದಾರೆ.
ಯಲಹಂಕ ಉಪನಗರ ರಾತ್ರಿ 8.25
ಯಲಹಂಕ ಉಪನಗರದಲ್ಲಿ ರಾತ್ರಿ ಮನೆ ಬಳಿ ನಡೆದು ಕೊಂಡು ಹೋಗುತ್ತಿದ್ದ ಮಣಿ (37) ಎಂಬುವರ ಬಳಿ ಬಂದ ಇಬ್ಬರು 23 ಗ್ರಾಂ ಸರ ಅಪಹರಿಸಿಕೊಂಡು ಹೋಗಿದ್ದಾರೆ.
ಬೆಮೆಲ್ ಕೃಷ್ಣಪ್ಪ ಕೊಲೆ: ಜಾಮೀನು ನಕಾರ
ಬೆಮೆಲ್ ಕೃಷ್ಣಪ್ಪ ಅವರ ಕೊಲೆ ಪ್ರಕರಣದ ಎರಡನೇ ಆರೋಪಿ ಹಾಗೂ ಎನ್‍ಕೌಂಟರ್‍ನಲ್ಲಿ ಮೃತಪಟ್ಟ ಬೆತ್ತನಗೆರೆ ಸೀನನ ಬಲಗೈ ಬಂಟ ಎಚ್. ಎಸ್. ಮಂಜುನಾಥ ಅಲಿಯಾಸ್ ಬಂಡೆ ಮಂಜನಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಜಾಮೀನು ಕೋರಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿ ಯನ್ನು ನ್ಯಾ.ಎಲ್. ನಾರಾಯಣ ಸ್ವಾಮಿ ಅವರಿದ್ದ ಏಕ ಸದಸ್ಯ ಪೀಠ ಜಾಮೀನು ನಿರಾಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


