ಜಿಲ್ಲಾ ಸುದ್ದಿ

ವಜ್ರದ ಹರಳುಗಳನ್ನು ಕಳವು ಮಾಡಿದ್ದ ಆರೋಪಿ ಬಂಧನ

ಗಾಂಧಿನಗರದ ವಿಜಯ ಜೆಮ್ಸ್ ಅಂಡ್ ಜ್ಯೂವೆಲರ್ಸ್‍ನಲ್ಲಿ ವಜ್ರದ ಹರಳುಗಳನ್ನು ಖರೀದಿಸುವ ನೆಪದಲ್ಲಿ ವಜ್ರದ ಹರಳುಗಳನ್ನು...

ವಜ್ರದ ಹರಳುಗಳನ್ನು ಕಳವು ಮಾಡಿದ್ದ ಆರೋಪಿ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಗಾಂಧಿನಗರದ ವಿಜಯ ಜೆಮ್ಸ್ ಅಂಡ್ ಜ್ಯೂವೆಲರ್ಸ್‍ನಲ್ಲಿ ವಜ್ರದ ಹರಳುಗಳನ್ನು ಖರೀದಿಸುವ ನೆಪದಲ್ಲಿ ವಜ್ರದ ಹರಳುಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 5ಲಕ್ಷ ಮೌಲ್ಯದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಸರುಘಟ್ಟದ ಶ್ರೀಕಾಂತ್(32) ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಆ.12ರಂದು ವಿಜಯ ಜೆಮ್ಸ್ ಅಂಡ್ ಜ್ಯೂವೆಲರ್ಸ್‍ಗೆ ಬಂದ ಆರೋಪಿಯು ವಜ್ರಾಭರಣಗಳನ್ನು ಖರೀದಿಸುವ ನೆಪದಲ್ಲಿ ವಜ್ರದ ಹರಳುಗಳನ್ನು ನೋಡುತ್ತಾ ಅಂಗಡಿಯವರ ಕಣ್ತಪ್ಪಿಸಿ 4.70ಕ್ಯಾರೆಟ್ ವಜ್ರದ ಹರಳುಗಳನ್ನು ಕಳವುಮಾಡಿ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಪೊಲೀಸರು ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳವು ಕೃತ್ಯವನ್ನು ಅವಲೋಕಿಸಿ ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ವಜ್ರದ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.