ಜಿಲ್ಲಾ ಸುದ್ದಿ

ಸರ್ಕಾರಿ ಶಾಲೆ ಮಕ್ಕಳ ಗಣಿತ, ಇಂಗ್ಲಿಷ್ ಕಳಪೆ: ಸಿಎಂ ಸಿದ್ದರಾಮಯ್ಯ

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಹೆಚ್ಚಿನ ಮಕ್ಕಳು ಗಣಿತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರಾಗಿರುವುದಿಲ್ಲ. ಆದರೆ, ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳು ಈ ಸಮಸ್ಯೆ ಎದುರಿಸುವುದಿಲ್ಲ. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಸಾಕಷ್ಟು ಶಿಕ್ಷಕರು ಡಿ.ಇಡಿ ಹಾಗೂ...

ಸರ್ಕಾರಿ ಶಾಲೆ ಮಕ್ಕಳ ಗಣಿತ, ಇಂಗ್ಲಿಷ್ ಕಳಪೆ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಹೆಚ್ಚಿನ ಮಕ್ಕಳು ಗಣಿತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರಾಗಿರುವುದಿಲ್ಲ. ಆದರೆ, ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳು ಈ ಸಮಸ್ಯೆ ಎದುರಿಸುವುದಿಲ್ಲ.

ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಸಾಕಷ್ಟು ಶಿಕ್ಷಕರು ಡಿ.ಇಡಿ ಹಾಗೂ ಬಿ.ಇಡಿ. ಸಹ ಮಾಡಿರುವುದಿಲ್ಲ. ಹೀಗಿರುವಾಗ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಮಕ್ಕಳಿಗೆ ಹೇಗೆ ಪಾಠ ಮಾಡುತ್ತಾರೆ? ಇದಕ್ಕೆ ಕಾರಣವೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಶನಿವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ `ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿಮುಖ್ಯಮಂತ್ರಿಯ ವರಿಂದ ಈ ಪ್ರಶ್ನೆ ಮೂಡಿಬಂತು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಎಂದರೆ ಅವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಭಾವನೆ ಬಂದಿದೆ. ಜತೆಗೆ ಈ ಮಕ್ಕಳು ಗಣಿತದಲ್ಲೂ ಹಿಂದಿರುತ್ತಾರೆ. ಸರ್ಕಾರಿ ಶಾಲೆ ಮೇಲೆ ಇರುವ ಈ ಅಪನಂಬಿಕೆ ತೊಳೆದುಹಾಕಬೇಕು. ಮಕ್ಕಳಿಗೆ ಇಂಗ್ಲಿಷ್ ಹಾಗೂ ಗಣಿತ ಸೇರಿದಂತೆ ಉತ್ತಮ ವಿದ್ಯಾಭ್ಯಾಸ ನೀಡಿ, ಅವರನ್ನು ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಆಗ್ರಹಿಸಿದರು.

ಕಾಮಾಂಧ ಶಿಕ್ಷಕರು:

ಶಿಕ್ಷಕರೇ ಇಂದು ಕಾಮಾಂಧರಾಗುತ್ತಿದ್ದಾರೆ. ಇದು ಶಿಕ್ಷಣ ಕುಲಕ್ಕೆ ಅವಮಾನ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು. ಕೆಲ ಶಿಕ್ಷಕರ ಇಂತಹ ಕೃತ್ಯವನ್ನು ಸಮಾಜ ಖಂಡಿಸಬೇಕು. ಶಿಕ್ಷಕರು ಇಂಥ ನೀಚ ಕೃತ್ಯಕ್ಕೆ ಇಳಿಯಬಾರದು ಎಂದು ಅವರು ಕಿಡಿಕಾರಿದರು. 201516ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರು/ ಪ್ರಾಂಶುಪಾಲ/ ಉಪನ್ಯಾಸಕರು ಸೇರಿ 51 ಮಂದಿಯನ್ನು ಸನ್ಮಾನಿಸಲಾಯಿತು.

ಬೀಡಿ ಸೇದೋದು ಕಲಿತೆ
ಶಿಕ್ಷಕರ ನಡೆನುಡಿ ಚೆನ್ನಾಗಿರಲಿ. ಹಾಗಿದ್ದಲ್ಲಿ ಉತ್ತಮ ಪ್ರಜೆ ರೂಪಿಸಲು ಸಾಧ್ಯ. ಅವರ ನಡೆ ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಬಹಳ ಎಚ್ಚರದಿಂದಿರಬೇಕು. ಉದಾಹರಣೆಗೆ
ನಮ್ಮ ಶಾಲೆಯ ಶಿಕ್ಷಕರೊಬ್ಬರು ಸಿಗರೇಟ್ ತರಲು ನಮ್ಮನ್ನು ಕಳುಹಿಸುತ್ತಿದ್ದರು. ಅದನ್ನು ನೋಡಿ ಪ್ರೇರಿತರಾಗುತ್ತಿದ್ದ ನಾವು ಅವರು ಸೇದಿ ಎಸೆದ ಸಿಗರೇಟಿನ ತುಂಡನ್ನು
ಸೇದುತ್ತಿದ್ದೆವು. ನಂತರ ಮನೆ ಕೆಲಸದವರಿಂದ ಬೀಡಿ ಸೇದುವುದು ಕಲಿತೆವು ಎಂದು ನೆನಪಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.