ಚಳವಳಿ ತೀವ್ರಕ್ಕೆ ಬಿಜೆಪಿ ನಿರ್ಧಾರ
ಮೇಯರ್ ಹುದ್ದೆಗೆ ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯೋನ್ಮುಖವಾಗಿದೆ...

ಬೆಂಗಳೂರು: ಮೇಯರ್ ಹುದ್ದೆಗೆ ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯೋನ್ಮುಖವಾಗಿದೆ.
ಶುಕ್ರವಾರವಷ್ಟೇ ಪುರಭವನದ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ನೂತನ ಪಾಲಿಕೆ ಸದಸ್ಯರು ಶನಿವಾರ ರಾಜಭವನಕ್ಕೆ ಪರೇಡ್ ನಡೆಸಿದರು. ಇದರ ಮುಂದುವರಿದ ಭಾಗವಾಗಿ ಭಾನುವಾರ ಮಲ್ಲೇಶ್ವರದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಅಭಿಯಾನ ಹಮ್ಮಿಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ, 198ಕ್ಷೇತ್ರಗಳಲ್ಲಿ 100 ಸ್ಥಾನ ಬಿಜೆಪಿಗೆ ಒಲಿದಿದ್ದರೂ ಅಧಿಕಾರವನ್ನು ಕಸಿಯಲು ಕಾಂಗ್ರೆಸ್ ಹವಣಿಸಿ ಬೇರೆ ಬೇರೆ ತಂತ್ರ ರೂಪಿಸುತ್ತಿದೆ. ಅಧಿಕಾರ ಹಿಡಿಯಲೇಬೇಕೆಂದು ಮೂವರು ವಿಧಾನಪರಿಶತ್ ಸದಸ್ಯರ ಹೆಸರನ್ನು ಮೇಯರ್ ಆಯ್ಕೆಗಾಗಿನ ಮತದಾರರ ಪಟ್ಟಿಯಲ್ಲಿ ಸೇರಿಸಿದೆ. ಇನ್ನಷ್ಟು ಹೆಸರು ಸೇರಿಸುವುದಿಲ್ಲ ಎಂಬ ನಂಬಿಕೆಯೂ ನಮಗೆ ಉಳಿದಿಲ್ಲ .ಈ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸುತ್ತೇವೆಂದರು.
ನೋಟಿಸ್ ನೀಡಿದ ಆರ್.ಅಶೋಕ್
ಕಾಂಗ್ರೆಸ್ ನ ಪಾಲಿಕೆ ಸದಸ್ಯೆ ಪದ್ಮಾವಯವರು ತಮ್ಮ ವಿರುದ್ಧ ಮಾಧ್ಯಮದಲ್ಲಿ ಮಾನಹಾನಿಕರ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿರುವುದಾಗಿ ಆರ್.ಅಶೋಕ್ ತಿಳಿಸಿದ್ದಾರೆ.
ತಾವು ರಾಜೀನಾಮೆ ನೀಡಬೇಕೆಂದು ಆರ್. ಅಶೋಕ್ ಒತ್ತಡ ತಂದಿದ್ದರು ಎಂದು ಪದ್ಮಾವತಿಯವರು ಸುದ್ದಿವಾಹಿನಿಯಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಆಧಾರವಾಗಿಟ್ಟುಕೊಂಡ ಆರ್.ಅಶೋಕ್, ತಾವು ಈ ರೀತಿಯ ಕರೆಯನ್ನೇ ಮಾಡಿಲ್ಲ. ಆದರೂ ವಿನಾಕಾರಣ ತೇಜೋವಧೆ ಮಾಡುವ ಉದ್ದೇಶದಿಂದ ಸಾರ್ವಜನಿಕವಾಗಿ ಮಾನಹಾನಿಕರ ಹೇಳಿಕೆ ನೀಡಿದ್ದಾರೆ. ಅವರು ತಕ್ಷಣವೇ ಸಾರ್ವಜನಿಕವಾಗಿ ತಮ್ಮ ಮಾತನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವಾದರೆ ದಾವೆ ಹೂಡಲಾಗುವುದೆಂದು ತಿಳಿಸಿದ್ದಾರೆ.
ಜನಾದೇಶ ಸಿಕ್ಕಿದ್ದು ಬಿಜೆಪಿಗೆ: ಜನತೆ ಬಿಜೆಪಿ ಅವಕಾಶ ನೀಡಿದ್ದಾರೆ. ಆದರೆ, ಕಾಂಗ್ರೆಸ್ ನವರು ಅದನ್ನು ತಪ್ಪಿಸಲು ಹೊರಟಿದ್ದಾರೆ. ಈ ಸಂಗತಿಯನ್ನು ಜನರಿಗೆ ತಿಳಿಸುವ ಪ್ರಯತ್ನ ನಮ್ಮದು. ನಿಮಗೆ ಅಧಿಕಾರ ಕೊಟ್ಟಮೇಲೆ, ನೀವೇಕೆ ಅದನ್ನು ಬಳಸುತ್ತಿಲ್ಲ ಎಂದು ಜನ ಪ್ರಶ್ನಿಸುತ್ತಾರೆ. ಹೀಗಾಗಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಜನರಿಗೆ ವಿಷಯ ಮುಟ್ಟಿ-ಸುತ್ತೇವೆ ಎಂದು ಅವರು ವಿವರಿಸಿದರು.
ಸಾಮಾಜಿಕ ತಾಣಗಳಲ್ಲೂ ಜಾಗೃತಿ:
ಸೋಮವಾರ ಮತ್ತು ಮಂಗಳವಾರ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವುದು, ಕಾಂಗ್ರೆಸ್ ಪ್ರಯತ್ನದ ಬಗ್ಗೆ ಸಾರ್ವಜನಿಕರಲ್ಲಿರುವ ಅಭಿಪ್ರಾಯವನ್ನು ತೋರ್ಪಡಿಸುತ್ತೇವೆ. ಜೊತೆಗೆ ಡಿಜಿಟಲ್ ಸಹಿ ಸಂಗ್ರಹ (ಆನ್‍ಲೈನ್) ಅಭಿಯಾನವನ್ನೂ ಕೈಗೆತ್ತಿಕೊಳ್ಳುತ್ತಿದ್ದೇವೆ. ಇದರಿಂದ ಸಾಮಾಜಿಕ ತಾಣಗಳಲ್ಲೂ ಸಹ ಕಾಂಗ್ರೆಸ್ ಪ್ರಯತ್ನದ ಬಗ್ಗೆ ಅರಿವು ಮೂಡಿಸುತ್ತೇವೆ. ಮುಂದೆ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಹೋರಾಟ ನಡೆಸಲು ಉದ್ದೇಶಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದವರು ಪಕ್ಷೇತರ ಸದಸ್ಯರನ್ನು ಬಂಧಿಸಿಟ್ಟಿರುವುದು, ರೆಸಾರ್ಟ್ ರಾಜಕಾರಣ, ಜನಾದೇಶಕ್ಕೆ ವಿರುದಟಛಿವಾಗಿ ನಡೆದುಕೊಳ್ಳುತ್ತಿರುವುದರ ಬಗ್ಗೆ ಪ್ರತಿ ಮತದಾರರಿಗೂ ತಿಳಿಸಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


