ಕಾರು ಡಿಕ್ಕಿ: ಕಾರ್ಮಿಕರಿಬ್ಬರು ಸಾವು
ಮದ್ಯಪಾನ ಮಾಡಿ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಕಾರನ್ನು ಅತಿ ವೇಗವಾಗಿ ಚಲಾಯಿಸಿದ ಪರಿಣಾಮ ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ...

ಬೆಂಗಳೂರು: ಮದ್ಯಪಾನ ಮಾಡಿ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಕಾರನ್ನು ಅತಿ ವೇಗವಾಗಿ ಚಲಾಯಿಸಿದ ಪರಿಣಾಮ ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ.
ಇವರ ಸಾವಿಗೆ ಕಾರಣರಾದ ವಿಪ್ರೊ ಕಂಪನಿ ಮಾನವ ಸಂಪನ್ಮೂಲ ವಿಭಾಗ ವ್ಯವಸ್ಥಾಪಕನನ್ನು ಮಡಿವಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಕೈಗೊಂಡನಹಳ್ಳಿಯ ನಿವಾಸಿಗಳಾದ ವಿ.ಮಾಲಾ (45), ಚಿನ್ನಪ್ಪಯ್ಯ(48) ಮೃತ ಕಾರ್ಮಿಕರು. ಇವರ ಸಾವಿಗೆ ಕಾರಣನಾದ ಮಡಿವಾಳ ನಿವಾಸಿ ಪಂಜಾಬ್ ಮೂಲದ ಬಲ್ಜಿತ್ ಸಿಂಗ್ (36)ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕ ಪಕ್ಕದದ ಮನೆಯವರಾದ ಮಾಲಾ ಮತ್ತು ಚಿನ್ನಪ್ಪಯ್ಯ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಶುಕ್ರವಾರ ರಾತ್ರಿ ಸಮೀಪದ ಚಚ್ರ್ ನಲ್ಲಿ ತಡರಾತ್ರಿವರೆಗೂ ಪ್ರಾರ್ಥನಾ ಕಾರ್ಯಕ್ರಮ ಇತ್ತು. ಹೀಗಾಗಿ, ಪ್ರಾರ್ಥನೆ ಮುಗಿಸಿಕೊಂಡು ತಡ ರಾತ್ರಿ 12.45ರಲ್ಲಿ ಮನೆಗೆ ರಸ್ತೆ ಬದಿ ನಡೆದು ಹೋಗುತ್ತಿದ್ದರು. ಕಸವನಹಳ್ಳಿ ಸಮೀಪ ಹೋಗುವಾಗ ಅತಿವೇಗವಾಗಿ ಬಂದ ಇಂಡಿಗೋ ಮಾಂಜಾ ಕಾರ್ ಇವರಿಬ್ಬರಿಗೂ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಾಲಾ ಸ್ಥಳದಲ್ಲೇ
ಮೃತಪಟ್ಟರೆ ಚಿನ್ನಪ್ಪಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತ ಎಸಗಿ ಪರಾರಿಯಾಗಿದ್ದ ಚಾಲಕ ಬಲ್ಜಿತ್‍ನನ್ನು ಬಂಧಿಸಿದ್ದಾರೆ. ತಪಾಸಣೆಯಲ್ಲಿ ಆರೋಪಿ ಮಿತಿ ಮೀರಿ ಮದ್ಯಪಾನ ಮಾಡಿರುವುದು ಕಂಡುಬಂದಿದೆ ಎಂದು ಮಡಿವಾಳ ಸಂಚಾರ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


