ಜಿಲ್ಲಾ ಸುದ್ದಿ

ರು.84 ಕೋಟಿ ಮೌಲ್ಯದ ಭೂಮಿ ವಶ

ನಗರ ಜಿಲ್ಲೆಯಲ್ಲಿ ಭೂ ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ರು.69 ಕೋಟಿ ಮೌಲ್ಯದ 33.25 ಎಕರೆ...

ರು.84 ಕೋಟಿ ಮೌಲ್ಯದ ಭೂಮಿ ವಶ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ನಗರ ಜಿಲ್ಲೆಯಲ್ಲಿ ಭೂ ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ರು.69 ಕೋಟಿ ಮೌಲ್ಯದ 33.25 ಎಕರೆ ಭೂಮಿ ವಶಪಡಿಸಿಕೊಂಡಿದೆ.
ಉತ್ತರ ತಾಲೂಕು, ದಾಸನಪುರ ಹೋಬಳಿ, ಪಿಳ್ಳಹಳ್ಳಿಯಲ್ಲಿ 4.20 ಎಕರೆ, ಕಾಚೋಹಳ್ಳಿಯಲ್ಲಿ 3.16 ಎಕರೆ-ಯಲ್ಲಿ ಆಶ್ರಯ ಯೋಜನೆಯಡಿ ಮಂಜೂರಾಗಿದ್ದ ಜಾಗದಲ್ಲಿ ಒತ್ತುವರಿಯಾಗಿತ್ತು. ತಹಸೀಲ್ದಾರ್ ಶಿವಪ್ಪ ಲಮಾಣಿ ನೇತೃತ್ವದ ತಂಡ ಒತ್ತುವರಿ ಮಾಡಿತ್ತು. ಉತ್ತರ (ಅಪರ) ತಾಲೂಕು, ಹೆಸರಘಟ್ಟ ಹೋಬಳಿ, ಸಾದೇನಹಳ್ಳಿಯಲ್ಲಿ 8.10 ಎಕರೆ, ಮೈಲಪ್ಪನಹಳ್ಳಿಯಲ್ಲಿ 2.15 ಎಕರೆ, ಜಾಲ ಹೋಬಳಿ ಸುಗಟ್ಟ ಗ್ರಾಮದಲ್ಲಿ 7.13 ಎಕರೆಯಲ್ಲಾಗಿದ್ದ ಒತ್ತುವರಿಯನ್ನು ತಹಸೀಲ್ದಾರ್ ಬಾಳಪ್ಪ ಹಂದಿಗುಂದ ತಂಡ ತೆರವುಗೊಳಿಸಿತು. ಈ ಜಾಗ ರು.35 ಕೋಟಿ ಮೌಲ್ಯ ಹೊಂದಿದೆ. 
ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಗೋಣಿಪುರದಲ್ಲಿ 1.11 ಎಕರೆ, ಗೋಣಿಪುರ ಗ್ರಾಮದಲ್ಲಿ 1.8 ಎಕರೆಯಲ್ಲಿನ ಒತ್ತುವರಿಯನ್ನು ತಹಸೀಲ್ದಾರ್ ಡಾ.ಬಿ.ಆರ್.ದಯಾನಂದ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಜಾಗ ರು.2 ಕೋಟಿ ಮೌಲ್ಯ ಹೊಂದಿದೆ. 
ಪೂರ್ವ ತಾಲೂಕು, ವರ್ತೂರು ಹೋಬಳಿ, ಅಮಾನಿ ಬೆಳ್ಳಂದೂರು ಖಾನೆ ಗ್ರಾಮದಲ್ಲಿ 1.4 ಎಕರೆ, ವರ್ತೂರು ಗ್ರಾಮದಲ್ಲಿ 24 ಗುಂಟೆ, ಕಾಚಮಾರನಹಳ್ಳಿಯಲ್ಲಿ 25 ಗುಂಟೆ, ಸೂಲಿಕುಂಟೆಯಲ್ಲಿ 30 ಗುಂಟೆ, ಚಿಕ್ಕನಾಯಕನಹಳ್ಳಿಯಲ್ಲಿ 1.29 ಎಕರೆ, ಜಾಗವನ್ನು ತಹಸೀಲ್ದಾರ್ ಡಾ.ಹರೀಶ್ ನಾಯ್ಕ್ ತಂಡ ತೆರವು ಮಾಡಿತು. ಈ ಭೂಮಿ ರು.12 ಕೋಟಿ ಮೌಲ್ಯ ಹೊಂದಿದೆ. ಬಸವನಗುಡಿಯಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಕಾರಂಜಿ ಆಂಜನೇಯ ದೇವಾಲಯಕ್ಕೆ ಸೇರಿದ 15 ಕೋಟಿ ಮೌಲ್ಯದ 20 ಗುಂಟೆ ಭೂಮಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.