ಜಿಲ್ಲಾ ಸುದ್ದಿ

ತೆರೆದ ಕಿಟಕಿಯಿಂದ ಸರ ಅಪಹರಣ

ಸೆಕೆ ಎಂದು ರಾತ್ರಿ ಕೊಠಡಿಯ ಕಿಟಕಿ ತೆಗೆದು ಆ ಮಹಿಳೆ ಮಲಗಿದ್ದರು. ಇದನ್ನು ಗಮನಿಸಿದ ಕಳ್ಳರು ಕೈಚಳಕ ತೋರಿದ್ದಾರೆ. ಕಿಟಕಿಯಿಂದ ಕೈ ತೂರಿಸಿದ ದುಷ್ಕರ್ಮಿ 30 ಗ್ರಾಂ ಸರ ದೋಚಿರುವ ಘಟನೆ ಸುಬ್ರಹ್ಮಣ್ಯ ಪುರದಲ್ಲಿ ನಡೆದಿದೆ...

ತೆರೆದ ಕಿಟಕಿಯಿಂದ ಸರ ಅಪಹರಣ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಸೆಕೆ ಎಂದು ರಾತ್ರಿ ಕೊಠಡಿಯ ಕಿಟಕಿ ತೆಗೆದು ಆ ಮಹಿಳೆ ಮಲಗಿದ್ದರು. ಇದನ್ನು ಗಮನಿಸಿದ ಕಳ್ಳರು ಕೈಚಳಕ ತೋರಿದ್ದಾರೆ. ಕಿಟಕಿಯಿಂದ ಕೈ ತೂರಿಸಿದ ದುಷ್ಕರ್ಮಿ 30 ಗ್ರಾಂ ಸರ ದೋಚಿರುವ ಘಟನೆ ಸುಬ್ರಹ್ಮಣ್ಯ ಪುರದಲ್ಲಿ ನಡೆದಿದೆ.

ಕೋಣನಕುಂಟೆ ಬ್ಯಾಂಕ್ ಆಫ್ ಬರೋಡಾ ಕಾಲೊನಿ ನಿವಾಸಿ ರಂಜಿತಾ ಎಂಬುವರು, ಸೆಕೆ ಎಂದು ಕಿಟಕಿ ತೆರೆದುಕೊಂಡು ಅದರ ಪಕ್ಕದಲ್ಲೇ ಮಲಗಿದ್ದರು. ಈ ವೇಳೆ ದುಷ್ಕರ್ಮಿ ಕೈ ಹಾಕಿ ಸರ ಕಿತ್ತುಕೊಂಡಿದ್ದಾನೆ. ಎಚ್ಚರಗೊಂಡ ರಂಜಿತಾ ಸರ ಇಲ್ಲದಿರುವುದನ್ನು ನೋಡಿಕೊಂಡು ಕೂಗುವಷ್ಟರಲ್ಲಿ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದ. ಸುಬ್ರಹ್ಮಣ್ಯಪುರ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆ ಸರ ಅಪಹರಣ: ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆ ಮುಂದೆ ನಿಂತಿದ್ದ ಮಹಿಳೆ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹುಳಿಮಾವು ಅಕ್ಷಯ ನಗರದಲ್ಲಿ ನಡೆದಿದೆ.

ಅಕ್ಷಯ ನಗರ ನಿವಾಸಿ ಸುಜಿ ಅಲೆಕ್ಸ್ ಸರ ಕಳೆದುಕೊಂಡವರು. ಶುಕ್ರವಾರ ಬೆಳಗ್ಗೆ 9.30ರ ಸಮಯದಲ್ಲಿ ಸುಜಿ ಅಲೆಕ್ಸ್ ಮನೆ ಮುಂದೆ ನಿಂತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಕತ್ತಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಈ ವೇಳೆ ಆಕೆ ಕೂಗಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.