ದಸರಾ ಜಂಬೂಸವಾರಿ ತಡವಾಗಿ ಆರಂಭಗೊಳ್ಳಲು ಏನು ಕಾರಣ?
ಈ ಬಾರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಿಗದಿತ ಮೂಹೂರ್ತದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ನಡೆಯಬೇಕಿತ್ತು. ಆದರೆ ಅದು ಆಗಲಿಲ್ಲ. ತಡವಾಗಿ ನಡೆಯಿತು...

ಮೈಸೂರು: ನಾಡಹಬ್ಬ ಜಗತ್ ಪ್ರಸಿದ್ದ ಮೈಸೂರು ದಸರಾ ಮುಗಿದಿದೆ. ದಸರಾ ಜಂಬೂಸವಾರಿ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಆನೆಗಳು ವಾಪಸ್ ಅವುಗಳ ಶಿಬಿರ ತಲುಪಿವೆ.
ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬಂತೆ ಈ ಬಾರಿ ದಸರಾ ಅನೇಕ ಪ್ರಶ್ನೆಗಳನ್ನು ಉಳಿಸಿಹೋಗಿದೆ. ಸಾಗರೋಪಾದಿಯಲ್ಲಿ ಬಂದ ಪ್ರವಾಸಿಗರು ಜಂಬೂಸವಾರಿ ವೀಕ್ಷಿಸಿ ಸುತ್ತಮುತ್ತಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಖುಷಿ ಪಡುತ್ತಾ ತಮ್ಮ ಊರಿನ ಹಾದಿ ಹಿಡಿದಿದ್ದಾರೆ. ಆದರೆ ಜಂಬೂಸವಾರಿಯ ಸಂದರ್ಭ ನಡೆದ ಕೆಲವೊಂದು ಪ್ರಮಾದಗಳು ಇದೀಗ ನಿಧಾನವಾಗಿ ಹೊರಬರುತ್ತಿವೆ.
ಈ ಬಾರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಿಗದಿತ ಮೂಹೂರ್ತದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ನಡೆಯಬೇಕಿತ್ತು. ಆದರೆ ಅದು ಆಗಲಿಲ್ಲ. ತಡವಾಗಿ ನಡೆಯಿತು. ಅಂಬಾರಿಗೆ ವಿಮೆ ಮಾಡಿಸುವಲ್ಲಿನ ಗೊಂದಲವೇ ಮುಖ್ಯ ಕಾರಣ. ಪ್ರತಿ ದಸರಾ ಜಂಬೂಸವಾರಿಯಂದು ಅಂಬಾರಿಗೆ ಸುರಕ್ಷತೆಯ ದೃಷ್ಟಿಯಿಂದ ವಿಮೆ ಮಾಡಿಸಲಾಗುತ್ತದೆ. ಈ ಬಾರಿಯೂ ಸುಮಾರು 15ಕೋಟಿ ವಿಮೆ ಮಾಡಿಸಲಾಗಿತ್ತು.
ಪ್ರತಿ ವರ್ಷ ವಿಮೆಯನ್ನು ರಾಜಮನೆತನದ ಹೆಸರಿನಲ್ಲಿ ಮಾಡಲಾಗುತ್ತದೆ. ಆದರೆ ಈ ಬಾರಿ ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ವಿಮೆ ಮಾಡಿಸಲಾಗಿತ್ತು. ಹಿಂದಿನ ಸಂಪ್ರದಾಯವನ್ನು ಮುರಿದಿದ್ದು, ರಾಣಿ ಪ್ರಮೋದಾದೇವಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಬೇಸರಗೊಂಡ ಅವರು ರಾಜಮಹಲ್ ಸೇರಿದ್ದರು. ಆದರೆ ಜಿಲ್ಲಾಧಿಕಾರಿ ಶಿಖಾ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಗಣ್ಯರೊಂದಿಗೆ ಆಸೀನರಾಗಿದ್ದರು.
ರಾಣಿ ಪ್ರಮೋದಾದೇವಿ ಅವರು ಅಸಮಾಧಾನಗೊಂಡಿದ್ದನ್ನು ತಿಳಿದ ಕೆಲವರು ಅವರನ್ನು ಸಮಾಧಾನಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅರ್ಜುನನಿಗೆ ಅಂಬಾರಿ ಕಟ್ಟುವುದು ತಡವಾಯಿತು. ಈ ನಡುವೆ ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ತೆರಳಿ ಪ್ರಮೋದಾ ದೇವಿಯವರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಸಮ್ಮತಿಸಿದರು ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


