ಕಬ್ಬನ್ ಪಾರ್ಕ್‍ನಲ್ಲಿ ರಜೆಯ ಮೋಜು
ಅಲ್ಲಿ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪ್ರತಿದಿನದ ಒತ್ತಡದ ಬದುಕಿನಿಂದ ತುಸು ನಿರಾಳತೆ ಅಲ್ಲಿತ್ತು. ಮಕ್ಕಳೊಂದಿಗೆ ಪೋಷಕರು ಕ್ರಿಕೆಟ್, ಬ್ಯಾಡ್ಮಿಂಟನ್, ಕಣ್ಣೆ ಮುಚ್ಚೆ ಕಾಡೇಗೂಡೆ ಆಟವಾಡಿದರು. ಹೂವಿನ ತೋಟದಲ್ಲಿ ಹಕ್ಕಿಯಂತೆ ಹಾರಾಡಿದ ಪುಟಾಣಿಗಳು, ಗಿಡದಿಂದ ಗಿಡಕ್ಕೆ ಹಾರುವ...

ಬೆಂಗಳೂರು: ಅಲ್ಲಿ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪ್ರತಿದಿನದ ಒತ್ತಡದ ಬದುಕಿನಿಂದ ತುಸು ನಿರಾಳತೆ ಅಲ್ಲಿತ್ತು. ಮಕ್ಕಳೊಂದಿಗೆ ಪೋಷಕರು ಕ್ರಿಕೆಟ್, ಬ್ಯಾಡ್ಮಿಂಟನ್, ಕಣ್ಣೆ ಮುಚ್ಚೆ ಕಾಡೇಗೂಡೆ ಆಟವಾಡಿದರು. ಹೂವಿನ ತೋಟದಲ್ಲಿ ಹಕ್ಕಿಯಂತೆ ಹಾರಾಡಿದ ಪುಟಾಣಿಗಳು, ಗಿಡದಿಂದ ಗಿಡಕ್ಕೆ ಹಾರುವ ದುಂಬಿಯಂತೆ ಜಿಗಿಯುತ್ತ, ಕುಣಿಯುತ್ತ ಚಿಟ್ಟೆಯಂಥಾಗಿದ್ದರು.
ಹೌದು, ಇದು ಶುಕ್ರವಾರ ನಗರದ ಕಬ್ಬನ್ ಪಾರ್ಕ್‍ನಲ್ಲಿ ಕಂಡ ದೃಶ್ಯಗಳು. ನವರಾತ್ರಿ, ಮೋರಂ ಮತ್ತು ವೀಕ್ ಎಂಡ್ ಹೀಗೆ ಸರಣಿ ಸಾಲು ರಜೆಗಳ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಜನರು ಕೆಲಸದ ಒತ್ತಡದಿಂದ ಹೊರಬಂದು, ಬಿಡುವಿನ ವೇಳೆ ಕಳೆಯಲು ಸಸ್ಯಕಾಶಿಗೆ ಕುಟುಂಬ ಸಮೇತ ಆಗಮಿಸಿದರು. ನವರಾತ್ರಿ ಹಬ್ಬದ ಸಂಭ್ರಮದ ಜತೆಯಲ್ಲೇ ರಜೆಯ ಮಜ ಕಳೆದರು. ಜನರು ಕುಣಿದು ಕುಪ್ಪಳಿಸಿ ಮಕ್ಕಳೊಂದಿಗೆ ಆಟವಾಡುತ್ತ ದೊಡ್ಡವರು ಮಕ್ಕಳಂತಾದರೂ.
ಪ್ರಕೃತಿ ಮಡಿಲಲ್ಲಿ ಭೋಜನ: ಇತ್ತೀಚಿಗೆ ಕೆಲಸದ ಒತ್ತಡದಲ್ಲಿ ಮನೆಮಂದಿ ಜೊತೆ ಸೇರಿ ಊಟ ಮಾಡಲಿಕ್ಕೆ ಕೂಡ ಸಮಯ ಸಿಗದಂತಾಗಿದೆ. ಐಟಿ-ಬಿಟಿ ಜನರ ವೃತ್ತಿ ಜೀವನವೇ ಒತ್ತಡದ್ದು. ಆದರೆ, ಇದಕ್ಕೆಲ್ಲ ರಜೆಯ ಸರಣಿ ಬ್ರೇಕ್ ಕೊಟ್ಟಿದೆ. ಮಕ್ಕಳು, ತಂದೆ-ತಾಯಿ ಮತ್ತು ಮಡದಿ ಜೊತೆ ಒಟ್ಟಾಗಿ ಕುಳಿತು ಊಟಮಾಡುವ ಅವಕಾಶ ಕೊಟ್ಟಿತ್ತು.
ಪ್ರೇಮಿಗಳ ಕಲರವ: ಐಟಿ-ಬಿಟಿ, ಕಾರ್ಪೊರೇಟ್ ಕಂಪನಿ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆಯಿದ್ದ ಕಾರಣ ಕಬ್ಬನ್ ಉದ್ಯಾನದಲ್ಲಿ ಪ್ರೇಮಿಗಳ ಕಲರವ ಜೋರಾಗಿತ್ತು. ಜೋಡಿಹಕ್ಕಿಗಳು ಆಗಮನ ಎಂದಿಗಿಂತ ಈ ರಜೆ ದಿನಗಳಲ್ಲಿ ತುಸು ಜಾಸ್ತಿಯೇ ಇತ್ತು. ಮಕ್ಕಳು, ಮಹಿಳೆಯರು ವೃದೆಟಛಿಯರು ದಿನನಿತ್ಯದ ಜಂಟಾಟ ತೊರೆದು ಮುಂಜಾನೆಯಿಂದ ಸಂಜೆವರೆಗೆ ವಿರಮಿಸಿ ರಜೆಯ ಮಜೆ ಸವಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


