ನಕಲಿ ಪ್ರಶ್ನೆಪತ್ರಿಕೆಗೆ ರು. 2 ಲಕ್ಷ!
ದ್ವಿತಿಯ ದರ್ಜೆ ಸಹಾಯಕ (ಎಸ್‍ಡಿಎ) ಹುದ್ದೆ ನಕಲಿ ಪ್ರಶ್ನೆ ಪತ್ರಿಕೆ ಮಾರಾಟ ಪ್ರಕ ರಣ ಸಂಬಂಧ ಬಂಧಿತ ಆರೋಪಿಗಳು ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ...

Published On :
ಬೆಂಗಳೂರು : ದ್ವಿತಿಯ ದರ್ಜೆ ಸಹಾಯಕ (ಎಸ್‍ಡಿಎ) ಹುದ್ದೆ ನಕಲಿ ಪ್ರಶ್ನೆ ಪತ್ರಿಕೆ ಮಾರಾಟ ಪ್ರಕ ರಣ ಸಂಬಂಧ ಬಂಧಿತ ಆರೋಪಿಗಳು ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ ಅಸಲಿ ಪ್ರಶ್ನೆ ಪತ್ರಿಕೆಗಳು ಎಂದು ನಂಬಿಸಿ ಅವರಿಂದ ತಲಾ ರು.2 ಲಕ್ಷ ವಸೂಲಿ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ. 8 ಆರೋಪಿಗಳ ಪೈಕಿ ಕೆಲವರು ಈ ಹಿಂದೆ ಹಲವು ಬಾರಿ ಇದೇ ರೀತಿ ಅಭ್ಯರ್ಥಿ ಗಳಿಗೆ ನಕಲಿ ಪತ್ರಿಕೆಗಳು ಹಾಗೂ ಅಸಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆಗೆ ಮುಂಚೆ ಸೋರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಇವರು ನೀಡುವ ಪತ್ರಿಕೆ ಗಳು ಅಸಲಿ ಎಂದು ನಂಬಿದ್ದರು ಎಂದು
ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲ ಯದ ಮುಂದೆ ಹಾಜರುಪಡಿಸಲಾ ಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ, ಹೆಚ್ಚಿನ ತನಿಖೆ ಅಗತ್ಯವಿರುವ ಕಾರಣ ಎಲ್ಲರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸುವುದಾಗಿ ಸಿಸಿಬಿ ಡಿಸಿಪಿ ರಮೇಶ್ ತಿಳಿಸಿದರು.
ಕೆಪಿಎಸ್‍ಸಿ ನಡೆಸುವ ಪರೀಕ್ಷೆಗಳ ವೇಳೆ ಆರೋಪಿಗಳು ರಾಜ್ಯದ ವಿವಿಧೆಡೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡುವುದಾಗಿ ಹೇಳಿ ಅಭ್ಯರ್ಥಿಗಳಿಗೆ ವಂಚಿಸಿದ್ದಾರೆ ಎನ್ನುವ ಮಾಹಿತಿ ಇದೆ. ಇವರ ತಂಡದ ಪ್ರಮುಖ ಸದಸ್ಯ ನಂದಿನಿ ಲೇಔಟ್‍ನ ಶಿವಕುಮಾರ್ ಕಳೆದ ವರ್ಷ ನಡೆದ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅರ್ಹತೆಗಾಗಿ ನಡೆಸುವ ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಹೀಗಿರು ವಾಗ ಜಾಮೀನಿನ ಮೇಲೆ ಹೊರ ಬಂದಿರುವ ಆರೋಪಿ ನಕಲಿ ಪ್ರಶ್ನೆ ಪತ್ರಿಕೆಗಳ ಮಾರಾಟ ದಂಧೆ ಆರಂಭಿಸಿದ್ದ ಎನ್ನಲಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ದಿನೇಶ್ ಹಾಗೂ ತಂಡದ ಸದಸ್ಯರು 20 ವಿದ್ಯಾರ್ಥಿಗಳನ್ನು ಮನೆಯಲ್ಲಿ ಇರಿಸಿಕೊಂಡು ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹುಡುಕಿಸುತ್ತಿದ್ದರು. ಮತ್ತೊಂದು ತಂಡ ದಲ್ಲಿದ್ದ ಈರಮಲ್ಲಪ್ಪ ಹಾಗೂ ಇತರರು ಮೂರ್ನಾಲ್ಕು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಉತ್ತರ ಹುಡುಕಿಕೊಳ್ಳುವಂತೆ ಸಿದ್ದತೆ ಮಾಡಿಕೊಳ್ಳಲು ಹೇಳುತ್ತಿದ್ದರು. ಎರಡು ತಂಡಗಳನ್ನು ನಿರ್ವಹಿಸುತ್ತಿದ್ದ ಪ್ರಮುಖ ಆರೋಪಿ ಶಿವಕುಮಾರ್‍ನನ್ನು
ಬಂಧಿಸಿದರೆ ಈ ರೀತಿಯ ಎಷ್ಟು ಜಾಲಗಳನ್ನು ನಿರ್ವಹಿಸುತ್ತಿದ್ದ ಎನ್ನುವುದು ಬಯಲಿಗೆ ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಿಸ್ತುಕ್ರಮಕ್ಕೆ ಶಿಫಾರಸು
ಬಸವೇಶ್ವರ ನಗರ ಪೊಲೀಸ್ ಕಾನ್ಸ್ ಟೇಬಲ್ ದಿನೇಶ್ ಹಾಗೂ ಡಿಪಿಎಆರ್ ಬೆರಳಚ್ಚುಗಾರ ರವಿ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ
ಸಂಬಂಧಿಸಿದವರಿಗೆ ಪತ್ರ ಬರೆಯಲಾಗಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


