‘ಚಿತ್ರಮಂದಿರದಲ್ಲಿ’ ಸಿನೆಮಾ ಪ್ರದರ್ಶನ
ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಸಿನೆಮಾ-ಬೆಳ್ಳಿ ಮಾತು ಶೀರ್ಷಿಕೆಯ ಸಿನೆಮಾ ಪ್ರದರ್ಶನದಲ್ಲಿ ವಿ.ಚಲ ನಿರ್ದೇಶನದ ‘ಚಿತ್ರಮಂದಿರದಲ್ಲಿ’ ಪ್ರಯೋಗಾತ್ಮಕ ಸಿನೆಮಾ ಪ್ರದರ್ಶನಗೊಂಡಿತು...

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಸಿನೆಮಾ-ಬೆಳ್ಳಿ ಮಾತು ಶೀರ್ಷಿಕೆಯ ಸಿನೆಮಾ ಪ್ರದರ್ಶನದಲ್ಲಿ ವಿ.ಚಲ ನಿರ್ದೇಶನದ ‘ಚಿತ್ರಮಂದಿರದಲ್ಲಿ’ ಪ್ರಯೋಗಾತ್ಮಕ ಸಿನೆಮಾ ಪ್ರದರ್ಶನಗೊಂಡಿತು.
ಇದಕ್ಕೂ ಮುನ್ನ ಸಿನೆಮಾದ ನಿರ್ದೇಶಕ ವಿ.ಚಲ ಮಾತನಾಡಿ, ರಂಗಭೂಮಿ ಹಿನ್ನೆಲೆಯಿರುವ ನಾನು ಪ್ರಯೋಗಾತ್ಮಕ ಸಿನೆಮಾವೊಂದನ್ನು ನಿರ್ದೇಶನ ಮಾಡಿದ್ದೇನೆ. ಈ ಸಿನೆಮಾದ
ಮೂಲಕ ಹೊಸತನಕ್ಕೆ ಆದ್ಯತೆ ನೀಡಿದ್ದು, ಕ್ರಿಯಾಶೀಲತೆಯಿಂದ ಕಟ್ಟಿಕೊಟ್ಟಿದ್ದೇನೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಬಿ.ಗಣಪತಿ ಮಾತನಾಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಾಂಸ್ಥಿಕವಾದ ಕ್ರಿಯಾಶೀಲತೆ ಚಲನಶೀಲತೆ ಮೈಗೂಡಿಸಿ ಕೊಳ್ಳುವುದಿಲ್ಲ ಎಂಬ ಮಾತಿದೆ. ಆದರೆ,
ಕರ್ನಾಟಕ ಚಲನಚಿತ್ರ ಅಕಾಡೆಮಿ ಬಹಳ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅಕಾಡೆಮಿಯನ್ನು ಚಲನಶೀಲವಾಗಿಡುವ ಮೂಲಸ ವಿಶ್ವಾಸ ಮೂಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಹೆಚ್ಚು ಪ್ರದರ್ಶನ ಕಾಣದಿರುವುದು ದುರಂತವೇ ಸರಿ. ಇಂತಹ ಸಿನಿಮಾಗಳು ಸದಾ ಸಮಾಜದಲ್ಲಿ ಹರಿಯಬೇಕು ಮತ್ತು ಸಾರ್ವತ್ರಿಕವಾಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು ಶೀರ್ಷಿಕೆಯಡಿ ಚಿತ್ರಮಂದಿರದಲ್ಲಿ ಎನ್ನುವ ಪ್ರಯೋಗಾತ್ಮಕ ಸಿನೆಮಾ ಪ್ರದರ್ಶಿಸುತ್ತಿರುವುದು ಶ್ಲಾಘನಾರ್ಹ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ನಾಯಕ ಶಂಕರ್ ಆರ್ಯನ್, ನಾಯಕಿ ನಮಿತಾ ರಾವ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


