ಜಿಲ್ಲಾ ಸುದ್ದಿ

ಆಮಂತ್ರಣ: 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಪುಸ್ತಕ ಬಿಡುಗಡೆ

ಆನ್‌ಲೈನ್ ಮ್ಯಾಗಜಿನ್ 'ಅವಧಿ'ಯಲ್ಲಿ ಸಂಧ್ಯಾರಾಣಿ ಅವರು ಬರೆದ ಅಂಕಣದ ಆಯ್ದ ಬರಹಗಳ ಸಂಗ್ರಹ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಪುಸ್ತಕ ಭಾನುವಾರ...

ಆಮಂತ್ರಣ: 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಪುಸ್ತಕ ಬಿಡುಗಡೆ
ಯಾಕೆ ಕಾಡುತಿದೆ ಸುಮ್ಮನೆ ನನ್ನನು
Published On :
ಬೆಂಗಳೂರು: ಆನ್‌ಲೈನ್ ಮ್ಯಾಗಜಿನ್ ಅವಧಿಯಲ್ಲಿ ಸಂಧ್ಯಾರಾಣಿ ಅವರು ಬರೆದ ಅಂಕಣದ ಆಯ್ದ ಬರಹಗಳ ಸಂಗ್ರಹ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಪುಸ್ತಕ ಭಾನುವಾರ (18 ಅಕ್ಟೋಬರ್2015) ರಂದು ಲೋಕಾರ್ಪಣೆಯಾಗಲಿದೆ.
ಸ್ಥಳ:  ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರ
ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು
ದಿನಾಂಕ : ಅಕ್ಟೋಬರ್ 18 (ಭಾನುವಾರ)
ಸಮಯ : ಬೆಳಗ್ಗೆ 10 ಗಂಟೆಗೆ
ಉಪಸ್ಥಿತಿ
ಜಿಎನ್ ಮೋಹನ್  (ಪ್ರಧಾನ ಸಂಪಾದಕರು ಈಟೀವಿ ನ್ಯೂಸ್ ಕನ್ನಡ)
ಕೆ.ವೈ ನಾರಾಯಣ ಸ್ವಾಮಿ (ಪ್ರಾಧ್ಯಾಪಕರು , ಸರ್ಕಾರಿ ಕಲಾ ಕಾಲೇಜು)
ಚಂದ್ರಶೇಖರ ಆಲೂರು (ಬರಹಗಾರರು)
ಜಯಶ್ರೀ ಕಾಸರವಳ್ಳಿ (ಕತೆಗಾರ್ತಿ)
ಪಲ್ಲವ ವೆಂಕಟೇಶ್ (ಪ್ರಕಾಶಕರು)
ಲೇಖಕಿಯ ಬಗ್ಗೆ
ತಾನು ನೋಡಿದ ಸಿನಿಮಾ, ಕತೆ, ಕವನ ಅಥವಾ ತನ್ನ ಅನುಭವಕ್ಕೆ ದಕ್ಕಿದ ಹಲವು ಘಟನೆಗಳ ಬಗ್ಗೆ ಓದುಗರ ಮನಸ್ಸಿಗೆ ಹತ್ತಿರವಾಗುವಂತೆ ಬರೆಯುವ ವಿಶಿಷ್ಟ ಶೈಲಿ ಸಂಧ್ಯಾರಾಣಿ ಅವರದ್ದು. ಅಂಕಣವೆಂದಾಗ ಅದು ಹೀಗೆಯೇ ಇರಬೇಕು ಎಂಬ ಚೌಕಟ್ಟನ್ನು ಇಟ್ಟಕೊಳ್ಳದೆ ಪ್ರತಿಯೊಂದು ಪದಗಳಲ್ಲಿಯೂ ಹೊಸತನ ಪುಟಿದೇಳುವಂತೆ ಮಾಡುವ ಬರಹಗಳು ಈಗಾಗಲೇ ಅವರ ಐಡೆಂಟಿಟಿಯಾಗಿ ಬಿಟ್ಟಿದೆ. ಹೀಗೆ ಅವಧಿ ಮ್ಯಾಗಜಿನ್ ನಲ್ಲಿ ಸಂಧ್ಯಾರಾಣಿ ಕಾಲಂ ನಲ್ಲಿ ಬರೆದ ಬರಹಗಳ ಸಂಗ್ರಹ ಯಾಕೆ ಕಾಡುತಿದೆ ಸುಮ್ಮನೆ ನನ್ನನು ಎಂಬ ಪುಸ್ತಕ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.