ಜಿಲ್ಲಾ ಸುದ್ದಿ

ಒಂದೇ ದಿನ ಎಂಟು ರೈತರ ಆತ್ಮಹತ್ಯೆ

ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರೈತರಿಗೆ ಸಾಂತ್ವನ ಹೇಳಿದ್ದರು. ಅವರ ಎದುರೇ ಸರ್ಕಾರವೂ ರೈತರಿಗೆ...

ಒಂದೇ ದಿನ ಎಂಟು ರೈತರ ಆತ್ಮಹತ್ಯೆ
ಸಂಗ್ರಹ ಚಿತ್ರ
Published On :
ಬೆಂಗಳೂರು: ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರೈತರಿಗೆ ಸಾಂತ್ವನ ಹೇಳಿದ್ದರು. ಅವರ ಎದುರೇ ಸರ್ಕಾರವೂ ರೈತರಿಗೆ ಪರಿಹಾರದ ಭರವಸೆ ನೀಡಿತ್ತು. ಸುತ್ತಿ ಬಡ್ಡಿ ಮನ್ನಾ ಘೋಷಣೆಯನ್ನೂ ಮಾಡಿತ್ತು. ಆದರೂ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಂತಿಲ್ಲ. ಸೋಮವಾರವೂ ಎಂಟು ರೈತರು ಸಾವಿಗೆ ಶರಣಾಗಿದ್ದಾರೆ. 
ಆಳಂದ ತಾಲೂಕಿನ ಕಣ್ಮುಸ್ ಗ್ರಾಮದ ಅಶೋಕ ಭಿಮರಾವ್ ಕಾಳೆ (45), ಸಾವಳೇಶ್ವರದ ಸಿದ್ದರಾಂ ವಿಶ್ವನಾಥ ಸುತಾರ್ (38), ಕುಣಿಗಲ್ ತಾಲೂಕಿನ ಅರೆಪಾಳ್ಯದ ಬೆಟ್ಟಸ್ವಾಮಿ (55), ಕೆ. ಬ್ಯಾಡರಹಳ್ಳಿಯ ಚಂದ್ರಯ್ಯ(48), ಕೋಡಿಹಳ್ಳಿಯ ದೊಡ್ಡಯ್ಯ(65), ಬೇಲೂರು ತಾಲೂಕಿನ ಸಂಕೇನಹಳ್ಳಿಯ ಲೋಕೇಶ್(37), ಸುರುಪರ ತಾಲೂಕಿನ ನಗನೂರು ಗ್ರಾಮದ ಹಳ್ಯಪ್ಪ ಹವಾಲ್ದಾರ(55), ಹಾವೇರಿ ತಾಲೂಕಿನ ಕನಕಾಪುರ ಪರಸಗೌಡ ಹನುಮಂತಗೌಡ ಕರೇಗೌಡರ (40) ಮೃತರು. 
ಕಣ್ಮುಸ್‍ನ ಅಶೋಖ ಭೀಮರಾವ್ ಕಾಳೆ ಅವರಿಗೆ ರು. 4ಲಕ್ಷಕ್ಕೂ ಮಿಗಿಲಾಗಿ ಸಾಲವಿತ್ತು. ಈ ಹಿನ್ನಲೆಯಲ್ಲಿನ ನೇಣು ಬಿಗಿದುಕೊಂಡಿದ್ದಾರೆ. ಸಾವಳೇಶ್ವರದ ರೈತ ಸಿದ್ದರಾಂ ವಿಶ್ವನಾಥ್ ರು.5 ಲಕ್ಷ ಸಾಲ ಹೊಂದಿದ್ದರು. ಸಾಲ ತೀರಿಸಲಾಗದೆ ಕೀಟನಾಶಕ ಸೇವಿಸಿದ್ದಾರೆ. ಸಂಕೇನಹಳ್ಳಿಯಲ್ಲಿ ವಿಷ ಕುಡಿದು ಪ್ರಾಣ ಬಿಟ್ಟ ಲೋಕೇಶ್ (37) ಕೃಷಿಗಾಗಿ ಸಾವಿರಾರು ರುಪಾಯಿ ಸಾಲ ಹೊಂದ್ದಿರು. ಅರೆಪಾಳ್ಯದ ಬೆಟ್ಟಸ್ವಾಮಿ ಅವರು ಕೊರೆಸಿದ್ದ ಕೊಳವೆ ಬಾವಿಗಳು ವಿಫಲವಾಗಿದ್ದವು. ರು.5ಲಕ್ಷ ಸಾಲ ಮಾಡಿದ್ದರು. 
ಬ್ಯಾಡರಹಳ್ಳಿಯ ರೈತ ಚಂದ್ರಯ್ಯಅವರ ಬೆಳೆ ನಾಶವಾಗಿತ್ತು. ರು.5 ಲಕ್ಷಕ್ಕೂ ಮಿಗಿಲಾಗಿ ಸಾಲ ಮಾಡಿಕೊಂಡಿದ್ದ ಅವರು ನೇಣುಬಿಗಿದು ಕೊಂಡಿದ್ದಾರೆ. ಮೂರುವರೆ ಲಕ್ಷ ಸಾಲ ಹೊಂದಿದ್ದ ಕೋಡಿಹಳ್ಳಿಯ ದೊಡ್ಡಯ್ಯ, ಸಾಲ ಪಾವತಿಸಲಾಗದೆ ವಿಷ ಸೇವಿಸಿದ್ದರು. ನಗನೂರಿನ ಹಳ್ಯಪ್ಪ ಹವಾಲ್ದಾರ ರು.3 ಲಕ್ಷ ಸಾಲ ಮಾಡಿಕೊಂಡಿದ್ದರು. ಅವರ ಬೆಳೆಯೂ ಕೈಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ಕನಕಾಪುರದ ಪರಸಗೌಡ ಹನುಮಂತ ಗೌಡ ಕರೇಗೌಡರ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ಹಾನಿಯಾಗಿತ್ತು. ರು. 3 ಲಕ್ಷ ಸಾಲವಿದ್ದರಿಂದ ವಿಷ ಕುಡಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.